ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಲೋ ಟೊಮೊಟೊಕ್ಕೆ ಕೇವಲ 0.80 ಪೈಸೆ ! ಬೆಳೆಗಾರರ ಬೆನ್ನಿಗೆ ಬರೆ !

By Staff
|
Google Oneindia Kannada News

ಕಿಲೋ ಟೊಮೊಟೊಕ್ಕೆ ಕೇವಲ 0.80 ಪೈಸೆ ! ಬೆಳೆಗಾರರ ಬೆನ್ನಿಗೆ ಬರೆ !
ಬಂಪರ್‌ ಬೆಳೆ ಬಂದರೂ ಫಲವಿಲ್ಲ, ನೆರೆ ರಾಜ್ಯಗಳಲ್ಲಿ ಬೇಡಿಕೆ ಇದೆ...ಆದರೆ ಮಾಡೋದು ಏನು?

ಬೆಂಗಳೂರು: ಟೊಮೊಟೊ ಬೆಳೆಗಾರರು ಮತ್ತೆ ಸಂಕಷ್ಟದಲ್ಲಿದ್ದಾರೆ. ದರ ಕುಸಿತದಿಂದ ರೈತರು ಕುಸಿದು ಕಂಗಲಾಗಿದ್ದಾರೆ. ಕೇವಲ 80ಪೈಸೆಗೆ ಒಂದು ಕೆ.ಜಿ. ಟೊಮೊಟೊ ಮಾರಾಟ ಮಾಡಬೇಕಾದ ಅನಿವಾರ್ಯಕ್ಕೆ ರೈತರು ಸಿಲುಕಿದ್ದಾರೆ. ಬೇಡಿಕೆಗಿಂತಲೂ ಪೂರೈಕೆ ಅಧಿಕವಾಗಿರುವುದರಿಂದ ಈ ಪರಿಸ್ಥಿತಿ ಬಂದಿದೆ.

ಕೋಲಾರ ಜಿಲ್ಲೆಯ ಸಗಟು ಮಾರುಕಟ್ಟೆಯಲ್ಲಿ ಕೇವಲ 80ರೂಪಾಯಿಗೆ ಕ್ವಿಂಟಾಲ್‌ ಟೊಮೊಟೊ ಮಾರುವ ಸಂದಿಗ್ಧತೆ ಇದೆ. ರಾಜ್ಯದಲ್ಲಿ ಅತಿ ಹೆಚ್ಚು ಟೊಮೊಟೊ ಬೆಳೆಯುವ ಕೋಲಾರ ಜಿಲ್ಲೆಯ ರೈತರು ಚೆಂದದ ಹಣ್ಣು ಬೆಳೆದು, ತಲೆ ಮೇಲೆ ಕೈಹೊತ್ತಿದ್ದಾರೆ.

ಬೆಂಗಳೂರಿನ ಬಿಡಿ ಮಾರುಕಟ್ಟೆಯಲ್ಲಿ ಟೊಮೊಟೊ ಬೆಲೆ 1.50ಪೈಸೆಯಿಂದ 3ರೂಪಾಯಿವರೆಗೆ ಇದೆ. ನಗರದ ಬೃಹತ್‌ ತರಕಾರಿ ಮಾರುಕಟ್ಟೆಯಾದ ಕಲಾಸಿಪಾಳ್ಯಂ ಮತ್ತು ಕೆ.ಆರ್‌.ಮಾರ್ಕೆಟ್‌ನಲ್ಲಿ ಹತ್ತು ಕೆ.ಜಿ. ಟೊಮೊಟೊ ಚೀಲ 15ರಿಂದ 30ರೂಪಾಯಿಗೆ ಮಾರಾಟವಾಗುತ್ತಿದೆ.

ಇದೇ ಪರಿಸ್ಥಿತಿ ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲೂ ಕಂಡು ಬಂದಿದೆ. ಹಬ್ಬ ಹರಿದಿನ, ಮದುವೆ-ನಾಮಕರಣಗಳಿಗೆ ಇದು ಅಂತಹ ಸೀಸನ್‌ ಸಹ ಅಲ್ಲ. ಹೀಗಾಗಿ ತರಕಾರಿಗಳಿಗೆ ಬೇಡಿಕೆ ಇಲ್ಲದ ಸಂದರ್ಭದಲ್ಲಿ ಟೊಮೊಟೊ ರಾಶಿರಾಶಿ ಮಾರುಕಟ್ಟೆಗೆ ಬರುತ್ತಿದೆ.

ಕೋಲಾರ ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ, ಮುಳಬಾಗಿಲು ಪ್ರದೇಶಗಳಲ್ಲಿ ಕಳೆದ ವರ್ಷ ಈ ಸಮಯಕ್ಕೆ ಪ್ರತಿದಿನ 300ಕ್ವಿಂಟಾಲ್ಸ್‌ ಟೊಮೊಟೊ ಮಾರುಕಟ್ಟೆಗೆ ಬರುತ್ತಿತ್ತು. ಅದರ ಪ್ರಮಾಣ ಈಗ 700 ಟನ್‌ಗೆ ಹೆಚ್ಚಳವಾಗಿದೆ. ಇದರ ನೇರ ಪರಿಣಾಮದಿಂದ ಬೆಲೆ ಕುಸಿತವಾಗಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.

ಕೋಲಾರದಲ್ಲಿ ಶನಿವಾರ(ಜ.22)ಟೊಮೊಟೊ ರೂ. 70ರಿಂದ ರೂ.233ಕ್ಕೆ ಮಾರಾಟವಾಗಿತ್ತು. ಆದರೆ ಸೋಮವಾರ(ಜ.24) ರೂ. 66ರಿಂದ ರೂ.133ಕ್ಕೆ ಕುಸಿತಿದೆ. ಪಕ್ಕದ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಟೊಮೊಟೊಗೆ ಬೇಡಿಕೆ ಇದೆ. ಆದರೆ ರಿಸ್ಕ್‌ ತೆಗೆದುಕೊಳ್ಳಲು ಸಗಟು ಮಾರಾಟಗಾರರಿಗೆ ಆಸಕ್ತಿ ಇಲ್ಲ. ರೈತರ ಬದುಕು ಅರಳೋದು ಯಾವಾಗ?

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X