ಕಾಂಗ್ರೆಸ್ ಸಿಂಹಸ್ವಪ್ನವಾಗಿದ್ದ ಪೆರಿಟಾಲ ರವಿ ಹತ್ಯೆ, ಹತ್ತಿ ಉರಿದ ಆಂಧ್ರ
ಕಾಂಗ್ರೆಸ್ ಸಿಂಹಸ್ವಪ್ನವಾಗಿದ್ದ ಪೆರಿಟಾಲ ರವಿ ಹತ್ಯೆ, ಹತ್ತಿ ಉರಿದ ಆಂಧ್ರ
ಆಂಧ್ರಕ್ಕೆ ಹೋಗುವ ಕರ್ನಾಟಕದ ಬಸ್‌ಗಳ ಸಂಚಾರ ಸ್ಥಗಿತ
ಪೋಲೀಸ್ ಮೂಲಗಳ ಪ್ರಕಾರ ಹಿಂಸಾಚಾರದಲ್ಲಿ ಸುಮಾರು 900ಕ್ಕೂ ಅಧಿಕ ಬಸ್‌ಗಳು ಧ್ವಂಸವಾಗಿವೆ ಅಥವಾ ಬೆಂಕಿಗೆ ಆಹುತಿಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್‌ಆರ್‌ಟಿಸಿ, ಆಂಧ್ರಕ್ಕೆ ಹೋಗುತ್ತಿದ್ದ ಕರ್ನಾಟಕದ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.
ಹತ್ಯೆ ನಡೆದದ್ದು ಹೀಗೆ : ಅನಂತಪುರ ನಗರದಲ್ಲಿ ಟಿಡಿಪಿ ಕಚೇರಿಯಲ್ಲಿ ಸಭೆ ಮುಗಿಸಿ, ವಾಪಸಾಗುತ್ತಿದ್ದ ಸಂದರ್ಭದಲ್ಲಿ ರವಿ ಮೇಲೆ ನಾಲ್ವರು ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ನಾಡಬಾಂಬ್ ಮತ್ತು ಗುಂಡಿನ ಸುರಿಮಳೆಯಿಂದ ರವಿ, ಆತನ ಗನ್‌ಮ್ಯಾನ್ ಈಶ್ವರಯ್ಯ, ಟಿಡಿಪಿ ಕಾರ್ಯಕರ್ತ ಸೇರಿದಂತೆ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸರಕಾರವೇ ಹೊಣೆ : ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಟಿಡಿಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಸಾವಿಗೆ ಸರಕಾರವೇ ನೇರ ಕಾರಣ. ಸಿಐಡಿ ತನಿಖೆಗೆ ಈ ಪ್ರಕರಣವನ್ನು ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿಷೇಧಾಜ್ಞೆ : ಪೆರಿಟಾಲ ರವಿ ಹತ್ಯೆಯಿಂದ ಟಿಡಿಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಮೆಹಬೂಬ್‌ನಗರದ ಕಾಂಗ್ರೆಸ್ ಕಾರ್ಯಾಲಯವನ್ನು ಧ್ವಂಸಗೊಳಿಸಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಅನಂತಪುರ, ಕಡಪ, ಕರೀಂನಗರ, ವಾರಂಗಲ್ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.
ರವಿ ಎಂದರೆ ಎದೆಯಲ್ಲಿ ಭಯ! : ಎದೆಯಲ್ಲಿ ಭಯ ಹುಟ್ಟಿಸುವ ವ್ಯಕ್ತಿತ್ವ ಪೆರಿಟಾಲ ರವಿ ಹೊಂದಿದ್ದರು. ಕೊಲೆ, ಗ್ಯಾಂಗ್‌ವಾರ್, ಕಿಡ್ನಾಪ್, ಶಾಂತಿ ಭಂಗ ಸೇರಿದಂತೆ ವಿವಿಧ ಪ್ರಕರಣಗಳು ಅವರ ವಿರುದ್ಧ ದಾಖಲಾಗಿದ್ದವು. ತನ್ನ ತಂದೆ ಶ್ರೀರಾಮಯ್ಯ ಅವರನ್ನು ಕೊಂದಿದ್ದ ವ್ಯಕ್ತಿಯನ್ನು ಹಾಡುಹಾಗಲೇ ರವಿ ಕೊಚ್ಚಿಹಾಕಿದ್ದರು ಎನ್ನಲಾಗಿದೆ.
ಪೆನುಗೊಂಡ ಶಾಸಕರಾಗಿದ್ದ ಕನ್ನಮಕ್ಕುಲ ಚೆನ್ನಾರೆಡ್ಡಿ, ಶಿವಾರೆಡ್ಡಿ, ರಮಣಾರೆಡ್ಡಿ, ಕಾಂಗ್ರೆಸ್ ಮುಖಂಡ ಕಂದುಲ ಓಬುಳರೆಡ್ಡಿ ಸೇರಿದಂತೆ 33 ಮಂದಿಯನ್ನು ಕೊಲೆಗೈದ ಆರೋಪ ಅವರ ಮೇಲಿತ್ತು. ಅನಂತಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ರವಿ ಸಿಂಹಸ್ವಪ್ನರಾಗಿದ್ದರು.
ಎನ್.ಟಿ.ರಾಮರಾವ್ ನಿಕಟವರ್ತಿಯಾಗಿದ್ದ ರವಿ, 1994ರಲ್ಲಿ ನಕ್ಸಲ್ ಪೀಡಿತ ಅನಂತಪುರಂ ಜಿಲ್ಲೆಯ ಪೆನುಗೊಂಡ ವಿಧಾನ ಸಭೆಯಿಂದ ಸ್ಪರ್ಧಿಸಿ ಶಾಸಕನಾಗಿ, ಸಚಿವನಾಗಿ ಕಾರ್ಯನಿರ್ವಹಿಸಿದ್ದರು.
ನಕ್ಸಲ್ ಸಂಪರ್ಕ : ಪೆನುಗೊಂಡ ತಾಲೂಕಿನ ರಾಮಗಿರಿ ಮಂಡಲ್‌ನ ವೆಂಕಟಾಪುರದಲ್ಲಿ 1957ರಲ್ಲಿ ಜನಿನಿದ ರವಿ, ತಂದೆ ಶ್ರೀರಾಮುಲು ಪೀಪಲ್ಸ್‌ವಾರ್ ಗ್ರೂಪ್‌ನಲ್ಲಿ ಪ್ರಬಲ ವ್ಯಕ್ತಿಯಾಗಿದ್ದರು. ಪೆರಿಟಾಲ ರವಿ ಕೊಂಡಪಲ್ಲಿ ಸೀತಾರಾಮಯ್ಯ ಅವರ ಶಿಷ್ಯ. ಪಿಡಬ್ಲ್ಯುಸಿ ವಿಭಜನೆಯಾದ ನಂತರ ತನ್ನದೇ ಆದ ಬಣಕಟ್ಟಿಕೊಂಡಿದ್ದ. ನಂತರ ರಾಜಕೀಯ ಕ್ಷೇತ್ರವನ್ನು ಆತ ಪ್ರವೇಶಿಸಿದ್ದ.
1996ರಲ್ಲಿ ಪೆರಿಟಾಲ ರವಿಯನ್ನು ಮುಗಿಸಲು ದುಷ್ಕರ್ಮಿಗಳು ಪ್ರಯತ್ನಿಸಿದ್ದರು. ಹೈದರಾಬಾದ್‌ನ ಜ್ಯೂಬಿಲ ಹಿಲ್ಸ್ ನಲ್ಲಿ ನಡೆದ ಬಾಂಬ್ ದುರಂತದಲ್ಲಿ ಆತ ಪಾರಾಗಿದ್ದ. ಆ ದುರಂತದಲ್ಲಿ 25ಮಂದಿ ಸಾವನ್ನಪ್ಪಿದ್ದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications