ಕದ್ರಿಗೋಪಾಲನಾಥ್, ಆರ್.ಕೆ.ಶ್ರೀಕಂಠನ್‌ಗೆ ಗೌರವ ಡಾಕ್ಟರೇಟ್
ಕದ್ರಿಗೋಪಾಲನಾಥ್, ಆರ್.ಕೆ.ಶ್ರೀಕಂಠನ್‌ಗೆ ಗೌರವ ಡಾಕ್ಟರೇಟ್
ಶಿಕ್ಷಣ ಮತ್ತು ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೂವರು ಗಣ್ಯರಿಗೆ ಗೌರವ
ದಕ್ಷಿಣ ಕನ್ನಡ ಮೂಲದ ಸ್ಯಾಕ್ಸೊಫೋನ್‌ನ ಖ್ಯಾತ ವಾದಕ ಕದ್ರಿ ಗೋಪಾಲನಾಥ್, ಹಾಸನ ಜಿಲ್ಲೆಯ ಸಂಗೀತ ಕಲಾನಿಧಿ ವಿದ್ವಾನ್ ಆರ್.ಕೆ. ಶ್ರೀಕಂಠನ್ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊ.ಸಿ.ಡಿ.ನರಸಿಂಹಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಸಭೆ ತೀರ್ಮಾನ ಕೈಗೊಂಡಿತು.
ಜನವರಿಯಲ್ಲಿ ನಡೆಯುವ ಬೆಂಗಳೂರು ವಿಶ್ವವಿದ್ಯಾಲಯದ 40ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ. ಎಂ.ಎಸ್. ತಿಮ್ಮಪ್ಪ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications