ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲ ಅಧಿವೇಶನಕ್ಕೆ ಬಿಜೆಪಿ ಬಿಸಿ : ಅಟಲ್‌,ಅಡ್ವಾಣಿ ಬಂಧನ

By Staff
|
Google Oneindia Kannada News

ಚಳಿಗಾಲ ಅಧಿವೇಶನಕ್ಕೆ ಬಿಜೆಪಿ ಬಿಸಿ : ಅಟಲ್‌,ಅಡ್ವಾಣಿ ಬಂಧನ
ಯುಪಿಎ ಸರ್ಕಾರದ ದರ ನೀತಿ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ನವದೆಹಲಿ : ಪೆಟ್ರೋಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಲಾಲ್‌ ಕೃಷ್ಣ ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿ ಇಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.

ಚಳಿಗಾಲ ಅಧಿವೇಶನದ ಮೊದಲ ದಿನ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್‌ ಸಾರ್ವಜನಿಕ ಸಭೆಯ ನಂತರ ಸಾವಿರಾರು ಕಾರ್ಯಕರ್ತರೊಂದಿಗೆ ಸಂಸತ್‌ಭವನದತ್ತ ಮೆರವಣಿಗೆ ಹೊರಟ ವಾಜಪೇಯಿ ಮತ್ತು ಪಕ್ಷಾಧ್ಯಕ್ಷ ಆಡ್ವಾಣಿ ಮೊದಲಾವರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.

ಪದೇ ಪದೇ ಬದಲಾಗುತ್ತಿರುವ ಸರಕಾರದ ನೀತಿಯಿಂದ ಮಾರುಕಟ್ಟೆ ಅಸ್ಥಿರವಾಗಿದೆ ಇದರ ನೇರ ಪರಿಣಾಮ ಜನತೆ ಮೇಲಾಗಿದೆ ಎಂದು ವಾಜಪೇಯಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮನಮೋಹನ ಸಿಂಗ್‌ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಅಡ್ವಾಣಿ ಅವರು, ಪ್ರಧಾನಿ ಅವರಿಗಿಂತ ಮೇಲೆ ಸೂಪರ್‌ ಪ್ರಧಾನಿ ಮತು ಸಿಪಿಎಂ ಇದ್ದು ತಮ್ಮ ಮಾತೇ ನಡೆಯದ ಪ್ರಥಮ ಪ್ರಧಾನಿಯನ್ನು ನಾವು ಕಾಣುತ್ತಿದ್ದೇವೆ ಎಂದು ವ್ಯಂಗ್ಯವಾಡಿದರು.

ಎನ್‌ಡಿಎ ಸರ್ಕಾರ ಶೇ.8ರಷ್ಟು ಅಭಿವೃದ್ಧಿ ದರವನ್ನು ಸಾಧಿಸಿದ್ದರೆ,ಯುಪಿಎ ಸರ್ಕಾರದ ಅವಧಿಯಲ್ಲಿ ಹಣದುಬ್ಬರ ಪ್ರಮಾಣ ಆ ಮಟ್ಟಕ್ಕೆ ಏರಿದೆ.ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಜನಸಾಮಾನ್ಯರನ್ನು ವಂಚಿಸಿದೆ ಎಂದು ಅವರು ನುಡಿದರು.

ಪಕ್ಷದ ಹಿರಿಯ ನಾಯಕರಾದ ಮುರಳಿ ಮನೋಹರ್‌ ಜೋಶಿ, ಮುಖ್ತಾರ್‌ ಅಬ್ಬಾಸ್‌ ನಕ್ವಿ, ಶಿವರಾಜ್‌ ಸಿಂಗ್‌ ಚೌಹಾಣ್‌ ಮೊದಲಾದವರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X