ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಶೇ.10 ಮಂದಿಗೆ ಮಾನಸಿಕ ತೊಂದರೆ -ಡಾ.ನಾಗರಾಜ, ನಿಮ್ಹಾನ್ಸ್‌

By Staff
|
Google Oneindia Kannada News

ರಾಜ್ಯದ ಶೇ.10 ಮಂದಿಗೆ ಮಾನಸಿಕ ತೊಂದರೆ -ಡಾ.ನಾಗರಾಜ, ನಿಮ್ಹಾನ್ಸ್‌
ಮಾನಸಿಕ ಅಸ್ವಸ್ಥರಿಗಾಗಿ ಬೆಂಗಳೂರಲ್ಲೊಂದು ಪುನರುಜ್ಜೀವನ ವಸತಿ ಕೇಂದ್ರ

ಬೆಂಗಳೂರು : ರಾಜ್ಯದ ಒಟ್ಟು 7.5 ಕೋಟಿ ಜನಸಂಖ್ಯೆಯಲ್ಲಿ ಶೇ.10 ಮಂದಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ನಿಮ್ಹಾನ್ಸ್‌ನ ಉಪ ಕುಲಪತಿ ಹಾಗೂ ನಿರ್ದೇಶಕ ಡಾ.ಡಿ. ನಾಗರಾಜ ತಿಳಿಸಿದ್ದಾರೆ.

ಮಾನಸಿಕ ಅಸ್ವಸ್ಥತೆ ವಿವಿಧ ಕಾರಣಗಳಿಂದಾಗಿ ಬರುತ್ತದೆ. ರಾಜ್ಯದಲ್ಲಿ ಶೇ.10ರಷ್ಟು ಮಂದಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು , ಇದರಲ್ಲಿ ಶೇ.2ರಷ್ಟು ಮಂದಿ ಗಂಭೀರ ಸ್ವರೂಪದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಡಾ.ನಾಗರಾಜ ಹೇಳಿದರು. ಅರ್ಪಿತ ಮಾನಸಿಕ-ಸಾಮಾಜಿಕ ಪುನರುಜ್ಜೀವನ ವಸತಿ ಕೇಂದ್ರವನ್ನು ನ.7ರಂದು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಾನಸಿಕ ಅಸ್ವಸ್ಥರಿಗೆ ನಿರಂತರ ಚಿಕಿತ್ಸೆ ಅತ್ಯಗತ್ಯ. ಆದರೆ ರಾಜ್ಯದಲ್ಲಿ ಮಾನಸಿಕ ಅಸ್ವಸ್ಥರಿಗಾಗಿ ಕೇವಲ 5 ಡೇ ಕೇರ್‌ ಸೆಂಟರ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಮೂರು ಖಾಸಗಿ ಸಂಸ್ಥೆಗಳಾಗಿವೆ. ಮಾನಸಿಕ ಅಸ್ವಸ್ಥರನ್ನು ಸಮಾಜದ ಮುಖ್ಯ ವಾಹಿನಿಗೆ ಮರಳಿ ಸೇರಿಸಲು ಇನ್ನಷ್ಟು ಕೇರ್‌ಸೆಂಟರ್‌ಗಳ ಅಗತ್ಯವಿದೆ ಎಂದು ಡಾ.ನಾಗರಾಜ ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ- ಆಧುನಿಕ ಸಂದರ್ಭದಲ್ಲಿಂದು ವಿವಿಧ ವಿಷಯಗಳು ಮನುಷ್ಯನನ್ನು ಖಿನ್ನೆತೆಯೆಡೆಗೆ ನಡೆಸುತ್ತಿವೆ. ಮಾನಸಿಕ ಅಸ್ವಸ್ಥರು ದೇವತೆಗಳು ಹಾಗೂ ಮಕ್ಕಳಿದ್ದಂತೆ ಎಂದರು.

ಶಾಸಕ ಕೃಷ್ಣಯ್ಯ ಶೆಟ್ಟಿ ಅರ್ಪಿತ ಸಂಸ್ಥೆಗೆ 1.8 ಲಕ್ಷ ರುಪಾಯಿ ದೇಣಿಗೆ ನೀಡಿದರು. ಅಂದಹಾಗೆ, ಅರ್ಪಿತ ಸಂಸ್ಥೆ ಪ್ರತಿ ರೋಗಿಗೆ ಮೂರು ಸಾವಿರ ರುಪಾಯಿಗಳ ಶುಲ್ಕ ವಿಧಿಸುತ್ತದೆ. ವಿವರಗಳಿಗೆ ಸಂಪರ್ಕಿಸಿ : ಕದಂಬಂ ಚಾರಿಟಬಲ್‌ಟ್ರಸ್ಟ್‌ , ಗುಲಕಮಲೆ ಹಳಿ, ಕಗ್ಗಲೀಪುರ ಸಮೀಪ, ಕನಕಪುರ ರಸ್ತೆ , ಬೆಂಗಳೂರು. ದೂರವಾಣಿ : (080) 28432841, 843, 844, 845.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X