ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀರಿದ ಮುನಿಸು: ಐಟಿ.ಕಾಂನಲ್ಲಿ ಭಾಗವಹಿಸಲು ಐಟಿ ಒಕ್ಕೂಟದ ಓಕೆ

By Staff
|
Google Oneindia Kannada News

ತೀರಿದ ಮುನಿಸು: ಐಟಿ.ಕಾಂನಲ್ಲಿ ಭಾಗವಹಿಸಲು ಐಟಿ ಒಕ್ಕೂಟದ ಓಕೆ
ಐಟಿ ಉದ್ಯಮದ ಬಿಕ್ಕಟ್ಟುಗಳನ್ನು ಆಡಳಿತ ಯಂತ್ರ ಅರ್ಥಮಾಡಿಕೊಂಡಿಲ್ಲ

ಬೆಂಗಳೂರು : ರಾಜ್ಯ ಸರ್ಕಾರದ ಮೇಲೆ ಐಟಿ ಉದ್ಯಮದ ಪ್ರಮುಖ ಕಂಪನಿಗಳ ಗುರ್‌ಗುಟ್ಟುವಿಕೆ ಇನ್ನೂ ನಿಂತಿಲ್ಲ . ನಮ್ಮ ಸಮಸ್ಯೆಗಳತ್ತ ಸರ್ಕಾರ ಕಣ್ಣೆತ್ತಿ ಸಹಾ ನೋಡುತ್ತಿಲ್ಲ ಎಂದು ದೂರಿರುವ ಬೆಂಗಳೂರು ಐಟಿ ಒಕ್ಕೂಟ (ಬಿಎಫ್‌ಐಟಿ) ಇದೀಗ ತನ್ನ ಪ್ರತಿಭಟನೆಯ ನಡುವೆಯೂ ಬೆಂಗಳೂರು ಐಟಿ.ಕಾಮ್‌ನಲ್ಲಿ ಭಾಗವಹಿಸಲು ಒಪ್ಪಿಕೊಂಡಿದೆ.

ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಐಟಿ ಉದ್ಯಮದ ಬಿಕ್ಕಟ್ಟುಗಳನ್ನು ಆಡಳಿತ ಯಂತ್ರ ಅರ್ಥಮಾಡಿಕೊಂಡಿಲ್ಲ. ಉದ್ಯಮದ ಪ್ರಗತಿಗೆ ಪೂರಕ ವಾತಾವರಣ ಕಲ್ಪಿಸಿಲ್ಲ . ಆ ಕಾರಣದಿಂದಾಗಿ ಐಟಿ ಮೇಳ ಬಹಿಷ್ಕರಿಸುತ್ತಿರುವುದಾಗಿ ಬಿಎಫ್‌ಐಟಿ ದೂರಿತ್ತು . ಆದರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬದ್ಧವಾಗಿರುವುದಾಗಿ ಸರ್ಕಾರ ನೀಡಿರುವ ಭರವಸೆಯ ಹಿನ್ನೆಲೆಯಲ್ಲಿ ಮೇಳದಲ್ಲಿ ಭಾಗವಹಿಸುವುದಾಗಿ ಬಿಎಫ್‌ಟಿಐನ ಸಿ.ಎನ್‌. ಕುಮಾರ್‌ ತಿಳಿಸಿದ್ದಾರೆ.

ಐಟಿ.ಕಾಮ್‌ನಲ್ಲಿ ಸರಕಾರದ ಧೋರಣೆಗಳನ್ನು ಖಂಡಿಸಿ, ಫಿಲಿಪ್ಸ್‌ ಸಾಫ್ಟ್‌ವೇರ್‌ ಭಾಗವಹಿಸುತ್ತಿಲ್ಲ. ಮೋಟಾರೋಲಾ, ಟೆಕ್ಸಸ್‌, ನಾವೆಲ್‌, ಸನ್‌ ಮೈಕ್ರೋ ಸಿಸ್ಟಮ್‌ ಮತ್ತಿತರ ಕಂಪನಿಗಳು ಅತೃಪ್ತಿಯ ನಡುವೆಯೂ ಕೇವಲ ಔಪಚಾರಿಕವಾಗಿ ಭಾಗವಹಿಸುತ್ತಿವೆ.

ಸಂಧಾನ : ಕರ್ನಾಟಕ ಐಟಿ ಕಾರ್ಯದರ್ಶಿ ಕೆ.ಎನ್‌. ಶಂಕರಲಿಂಗೇ ಗೌಡ ಮತ್ತು ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ ಆಫ್‌ ಇಂಡಿಯಾ ನಿರ್ದೇಶಕ ಬಿ.ವಿ.ನಾಯ್ಡು ಸಂಧಾನ ನಡೆಸುತ್ತಿದ್ದು, ಬಿಎಫ್‌ಐಟಿ ಸದಸ್ಯರನ್ನು ಭೇಟಿ ಮಾಡಿದ್ದಾರೆ. ಸರಕಾರ ನಗರದ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿದೆ. ಸಂಚಾರ ವ್ಯವಸ್ಥೆಯ ಕಿರಿಕಿರಿ ತಪ್ಪಿಸುವುದು ಹಾಗೂ ಐಟಿ ಉದ್ಯಮಕ್ಕೆ ಮೂಲಭೂತ ಸೌಕರ್ಯಗಳ ಕಲ್ಪಿಸಲು ಸಜ್ಜಾಗಿದೆ ಎಂದು ಮನವೊಲಿಸಲಾಗಿದೆ.

ನವೆಂಬರ್‌ 1ರಿಂದ ಆರಂಭವಾಗಲಿರುವ ಬೆಂಗಳೂರು ಐಟಿ.ಕಾಮ್‌ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಏಷ್ಯಾದಲ್ಲಿಯೇ ದೊಡ್ಡ ಕಾರ್ಯಕ್ರಮ. ರಾಜ್ಯದ ಐಟಿ ಕ್ಷೇತ್ರಕ್ಕೆ ಹೂಡಿಕೆದಾರರ ಆಕರ್ಷಿಸುವುದು ಐಟಿ.ಕಾಮ್‌ನ ಮೂಲ ಉದ್ದೇಶ.

ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಭಾರತದ ಹೆಬ್ಬಾಗಿಲೆಂಬ ಕೀರ್ತಿಗೆ ಕರ್ನಾಟಕ ಪಾತ್ರವಾಗಿದೆ. ರಾಜಧಾನಿ ನಗರದಲ್ಲಿ ಉದ್ಯಮಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳ ಕಲ್ಪಿಸುವಲ್ಲಿ ಸರಕಾರ ನಿರ್ಲಕ್ಷ್ಯ ಪ್ರದರ್ಶಿಸಿದೆ ಎನ್ನುವ ದೂರು ಐಟಿ ಕಂಪನಿಗಳಿಂದ ಕೇಳಿ ಬರುತ್ತಿದೆ.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X