ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಮಾದಾನ ಪಡೆದು ಅನಾಥಾಶ್ರಮ ಕಟ್ಟುವ ವೀರಪ್ಪನ್‌ ಕನಸು ಕನವರಿಕೆ

By Staff
|
Google Oneindia Kannada News

ಕ್ಷಮಾದಾನ ಪಡೆದು ಅನಾಥಾಶ್ರಮ ಕಟ್ಟುವ ವೀರಪ್ಪನ್‌ ಕನಸು ಕನವರಿಕೆ
ವೀರಪ್ಪನ್‌ಗಾಗಿ ಅಲೆದ 900 ಎಸ್‌ಟಿಎಫ್‌ ಸಿಬ್ಬಂದಿಗೆ ನಿವೇಶನ ಪಾರಿತೋಷಕ

ಬೆಂಗಳೂರು : ವೀರಪ್ಪನ್‌ ಕರಾಳ ಅಧ್ಯಾಯ ಮುಕ್ತಾಯವಾಗಿದ್ದು, ಆತನನ್ನು ಬಂಧಿಸಲು ನಡೆಸಲಾದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ 900 ಎಸ್‌ಟಿಎಫ್‌ ಸಿಬ್ಬಂದಿಗೂ ನಿವೇಶನ ಹಾಗೂ ಪಾರಿತೋಷಕಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ವೀರಪ್ಪನ್‌ ಪಾಳಯದಲ್ಲಿ ಇನ್ನೂ ಯಾರಾದರೂ ಉಳಿದಿರ ಬಹುದೆಂಬ ಸಂಶಯವಿದೆ. ಹೀಗಾಗಿ ಎಸ್‌ಟಿಎಫ್‌ ಕಾರ್ಯಾಚರಣೆ ಮುಂದುವರೆಸುವುದಾಗಿ ತಿಳಿಸಿದರು.

ಆತನ ತಲೆಗೆ ಘೋಷಿಸಲಾಗಿದ್ದ, ಐದೂವರೆ ಕೋಟಿ ಹಣವನ್ನು ಯಾರ್ಯಾರಿಗೆ ನೀಡಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸಿ, ವಿತರಿಸಲಾಗುವುದು. ವೀರಪ್ಪನ್‌ ಬೆಳವಣಿಗೆಯ ಹಿಂದಿದ್ದ ಕಾಣದ ಕೈಗಳು, ಆತನಿಗೆ ಅಪಾರ ಪ್ರಮಾಣದ ಹಣ ಹಾಗೂ ಶಸ್ತ್ರಾಸ್ತ್ರಗಳು ಎಲ್ಲಿಂದ ಬರುತ್ತಿದ್ದವು ಎನ್ನುವುದರ ಬಗೆಗೆ ಸಮಗ್ರ ತನಿಖೆಗೆ ಸಮಿತಿ ರಚಿಸುವುದಾಗಿ ಧರ್ಮಸಿಂಗ್‌ ಹೇಳಿದರು.

ಅನಾಥಾಶ್ರಮ : ನರಹಂತಕನಿಗೆ ಕ್ಷಮಾದಾನ ನೀಡಿದ್ದರೆ, ಕಿವುಡು, ಮೂಕ ಮಕ್ಕಳಿಗೆಗಾಗಿ ಅನಾಥಾಶ್ರಮ ಕಟ್ಟುತ್ತಿದ್ದನೇ? ಹೌದು ಎನ್ನುತ್ತವೆ ಮೂಲಗಳು.

ವರನಟ ರಾಜ್‌ಕುಮಾರ್‌ ಅಪಹರಣದ ಸಂದರ್ಭದಲ್ಲಿ ನಕ್ಕಿರನ್‌ ಗೋಪಾಲ್‌ ಬಳಿ ಕಳುಹಿಸಿದ್ದ ವೀಡಿಯೋ ಕ್ಯಾಸೆಟ್‌ನಲ್ಲಿ ಈ ಬಗೆಗೆ ವೀರಪ್ಪನ್‌ ಪ್ರಸ್ತಾಪಿಸಿದ್ದ. ನನಗೆ ಕ್ಷಮಾದಾನ ನೀಡಿ, ಅನಾಥಾಶ್ರಮಕ್ಕೆ ಜಾಗ ನೀಡಿದರೆ ಸಭ್ಯ ಮನುಷ್ಯನಾಗಿ ಬದುಕುತ್ತೇನೆ. ಅನಾಥಾಶ್ರಮಕ್ಕೆ ನಿಮ್ಮ ಹೆಸರನ್ನೇ ಇಟ್ಟು, ಪ್ರತಿದಿನ ನಿಮ್ಮನ್ನು ಪೂಜಿಸುತ್ತೇನೆ ಎಂದು ವೀರಪ್ಪನ್‌ ಮನವಿ ಸಲ್ಲಿಸಿದ್ದ.

ಪಟೇಲ್‌ ಅಧಿಕಾರವಧಿಯಲ್ಲಿ ತನ್ನ ಕ್ಷಮಾದಾನದ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಬೇಗ ಕ್ರಮ ತೆಗೆದುಕೊಳ್ಳದಿದ್ದರೆ ಐವತ್ತು ಸಾವಿರ ಜನರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ವೀರಪ್ಪನ್‌ ನಾಗರೀಕ ಬದುಕಿಗಾಗಿ ಬೇಡಿದ್ದ. ಅಲ್ಲದೇ ಬೆದರಿಸಿದ್ದ.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X