ನಾಡಿಗೆ ಬಂದ ಕಾಡಿನ ನೆಂಟರ ಮೇಲೆ ಧರ್ಮ ಸರಕಾರದ ಮಾರಿಕಣ್ಣು
ನಾಡಿಗೆ ಬಂದ ಕಾಡಿನ ನೆಂಟರ ಮೇಲೆ ಧರ್ಮ ಸರಕಾರದ ಮಾರಿಕಣ್ಣು
ಪ್ರಾಣಿ ಸಂಗ್ರಹಾಲಯಗಳಿಗೆ ಅನುದಾನ ಕಡಿತ, ಸ್ವಾವಲಂಬನೆಗೆ ಗಡುವು/್ಛಟ್ಞಠಿ।
ಮುಂದಿನ ಮೂರು ವರ್ಷದೊಳಗಾಗಿ ಪ್ರಾಣಿ ಸಂಗ್ರಹಾಲಯಗಳು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಸರಕಾರ ಆದೇಶಿಸಿದೆ. ಕರ್ನಾಟಕ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಮೈಸೂರು, ಶಿವಮೊಗ್ಗ, ಬನ್ನೇರುಘಟ್ಟ, ಬಳ್ಳಾರಿ, ಗದಗ, ಬೆಳಗಾವಿ, ದಾವಣಗೆರೆ, ಗುಲ್ಪರ್ಗಾದಲ್ಲಿನ ಪ್ರಾಣಿ ಸಂಗ್ರಹಾಲಯಗಳು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಾಗಿದೆ.
ವಿದೇಶಿ ಪ್ರವಾಸಿಗರ ಆಕರ್ಷಣೆಯಿಂದಾಗಿ ಮೈಸೂರು ಪ್ರಾಣಿ ಸಂಗ್ರಹಾಲಯ ಮತ್ತು ಬನ್ನೇರುಘಟ್ಟದ ಸಫಾರಿಯ ಆರ್ಥಿಕ ಪರಿಸ್ಥಿತಿ ಸಮಾಧಾನಕರವಾಗಿದೆ. ಉಳಿದೆಡೆ ಆದಾಯಕ್ಕಿಂತ ನಷ್ಟವೇ ಜಾಸ್ತಿ ಎನ್ನುವ ಪರಿಸ್ಥಿತಿಯಿದೆ. ಸಿಬ್ಬಂದಿ ಮತ್ತು ಪ್ರಾಣಿ ಸಂಗ್ರಹಾಲಯಗಳ ನಿರ್ವಹಣೆಯ ವೆಚ್ಚ ಹೆಚ್ಚುತ್ತಿದ್ದರೆ, ಸರಕಾರ ತನ್ನ ಅನುದಾನವನ್ನು ಕಡಿತಗೊಳಿಸುತ್ತಿ ದೆ. ಕಾಡಿನಿಂದ ನಾಡಿಗೆ ಬಂದ ಪ್ರಾಣಿಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications