• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮಾಯಣದಲ್ಲಿ ಆಯ್ಕೆ ಸಮಸ್ಯೆ: ಪ್ರಭಾಕರ ಜೋಶಿ ಉಪನ್ಯಾಸದ ವರದಿ

By Staff
|

ರಾಮಾಯಣದಲ್ಲಿ ಆಯ್ಕೆ ಸಮಸ್ಯೆ: ಪ್ರಭಾಕರ ಜೋಶಿ ಉಪನ್ಯಾಸದ ವರದಿ

ದೆಹಲಿ ಕರ್ನಾಟಕ ಸಂಘದಲಿ ಸೆ.19ರಂದು ಡಾ.ಪ್ರಭಾಕರ ಜೋಶಿ ನೀಡಿದ ಉಪನ್ಯಾಸ ರಾಮಾಯಣದ ಬಗ್ಗೆ , ಅಲ್ಲಿನ ಪಾತ್ರಗಳ ಬಗ್ಗೆ ಹೊಸ ಅರಿವು ಮೂಡಿಸುವಂತಿತ್ತು . ದೆಹಲಿಕನ್ನಡಿಗರ ಮೆಚ್ಚುಗೆಗೆ ಪಾತ್ರವಾದ ಉಪನ್ಯಾಸ ಕಾರ್ಯಕ್ರಮದ ಬಗೆಗೊಂದು ವರದಿ.

 • ರೇಣುಕಾ ಶ್ಯಾಮ್‌, ನವದೆಹಲಿ.
 • ‘ಸತ್ಸಂಗಾದ್‌ ಭವತಿ ಹಿ ಸಾಧುತಾಂ ಖಲಾನಾಂ’. ಸಾಧು ಸಜ್ಜನರ ಸಾಂಗತ್ಯದಿಂದ ಕೆಟ್ಟವರಲ್ಲೂ ಸಾಧುತ್ವ ಬರುತ್ತದೆ. ಇದು ಬರೀ ಸೂಕ್ತಿಯಷ್ಟೇ ಅಲ್ಲ , ಮನಸ್ಸಿಗೆ ನೆಮ್ಮದಿ ನೀಡುವ ಸೂತ್ರವೂ ಹೌದು. ಕೆಲವೊಮ್ಮೆ ಮಹಾನಗರದ ಜನಜೀವನದಲ್ಲಿ ಅಸಾಧ್ಯವೆನ್ನಿಸುವ ದುರುಳರೊಂದಿಗೆ ಸೆಣಸಾಡಬೇಕಾಗುತ್ತದೆ. ಎಂತೆಂಥವರನ್ನೋ ಎದುರುಹಾಕಿಕೊಂಡಿರುತ್ತೇವೆ. ಇದು ದೆಹಲಿ ಜೀವನದಲ್ಲಿ ಸಾಮಾನ್ಯ. ಹಾಗೆಲ್ಲ ನಮ್ಮ ನಲ್ಮೆಯ ಡಾ.ಪ್ರಭಾಕರ ಜೋಷಿಯಂಥ ಸಂಭಾಷಣಾ ಪಟು, ಯಕ್ಷಗಾನ ಕಲಾವಿದರು, ಚಿಂತಕರು, ವಿಮರ್ಶಕರು, ಜ್ಞಾನಿಯಾಡನೆ ಕುಳಿತು ಹರಟುವ ಪ್ರಸಂಗವೊದಗಿದರೆ ಮನಸ್ಸಿಗೆಷ್ಟು ಆನಂದವಾಗಬಹುದು ಅಲ್ಲವೇ? ಅಂಥ ಅವಕಾಶ ದೆಹಲಿ ಕನ್ನಡಿಗರಿಗೆ ಇತ್ತೀಚೆಗೆ ಲಭಿಸಿತ್ತು.

  ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಡಾ. ಪ್ರಭಾಕರವರು ಸೆಪ್ಟೆಂಬರ್‌ 19 ರ ಭಾನುವಾರ ದೆಹಲಿ ಕರ್ನಾಟಕ ಸಂಘದ ಆವರಣದಲ್ಲಿ ‘ರಾಮಾಯಣದಲ್ಲಿ ಆಯ್ಕೆಯ ಸಮಸ್ಯೆ’ಯ ಕುರಿತು ಉಪನ್ಯಾಸ ನೀಡಿದರು. ಅಂದು ಗಣಪನ ಹಬ್ಬದ ಕಡುಬಿನ ಊಟ ಹೊಡೆದು ಹೊಟ್ಟೆ ಭಾರವಾದವರಿಗೆಲ್ಲ , ತಿಳಿನಗೆಯ ಮಜ್ಜಿಗೆಯುಂಡಂತಿ ತ್ತು ಅವರ ರಾಮಾಯಣದ ವ್ಯಾಖ್ಯಾನ ಲಹರಿ. ಜೋಶಿಯವರು ಕುಳಿತಲ್ಲೇ ವಿಶ್ವರೂಪದರ್ಶನ ಮಾಡಿಸಬಲ್ಲರು, ಯಾವುದೇ ಕ್ಲಿಷ್ಟವಾದ ಪ್ರಶ್ನೆಯನ್ನೂ ಬಿಡಿಸಬಲ್ಲ ಜಾಣರು. ಯಾವುದೇ ವಿಷಯವನ್ನು ರಸವತ್ತಾಗಿ ಬಣ್ಣಿಸಬಲ್ಲರು.

  Dr. Prabhakara Joshi and others at Delhi Karnataka Sanghaಬಹುಮುಖಿ : ಡಾ.ಪ್ರಭಾಕರ್‌ ಜೋಶಿಯವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ. ಓದಿದ್ದು ಅರ್ಥಶಾಸ್ತ್ರ. ಎಂ.ಕಾಮ್‌ ಪದವೀಧರರು. ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇವರು ಕನ್ನಡದಲ್ಲಿ ಪಿಎಚ್‌ಡಿ ಮಾಡಿದ್ದಾರೆ.

  ‘ಯಕ್ಷಗಾನ ಕೃಷ್ಣ ಸಂಧಾನ ಪ್ರಸಂಗ‘ ಕುರಿತು ಸಂಶೋಧನೆ ಮಾಡಿದ್ದಾರೆ. ಮಂಗಳೂರಿನ ವಿಶ್ವವಿದ್ಯಾಲಯ ಇವರಿಗೆ ಸ್ನಾತಕೋತ್ತರ ಪದವಿ ನೀಡಿ ಗೌರವಿಸಿದೆ. ಕೇದಗೆ, ಮಾರುಮಾಲೆ, ವಾಗರ್ಥ ಮತ್ತಿತರ ವಿಮರ್ಶಾಪ್ರಬಂಧಗಳನ್ನು ಬರೆದಿದ್ದಾರೆ. ಕಲಾವಿದರಾಗಿ ಕಲೆಯ ಬಗ್ಗೆ ಮಾತನಾಡುವರು ಬಹಳ ಕಡಿಮೆ. ಇಂಥವರಲ್ಲಿ ಕೆರೆಮನೆ ಶಂಭು ಹೆಗಡೆ ಮತ್ತು ಡಾ.ಪ್ರಭಾಕರ ಜೋಶಿಯವರು ಮಾತ್ರ ಅಪರೂಪವಾಗಿ ನಿಲ್ಲುತ್ತಾರೆ.

  ಡಾ.ಪ್ರಭಾಕರ ಉದಯವಾಣಿಯ ‘ಜಿಜ್ಞಾಸೆ‘ ಅಂಕಣಕ್ಕೆ ಹಾಗೂ ‘ಹೊಸದಿಗಂತ‘ ದಲ್ಲಿ ಬರೆವ ಲೇಖನಗಳಿಗೆ ಓದುಗರ ಪ್ರತಿಕ್ರಿಯೆ ಖುಷಿ ನೀಡುತ್ತದೆ. ಪರಂಪರೆ, ಆಧುನಿಕತೆಯ ಬಗ್ಗೆ ಆಗಾಧವಾದ ಜ್ಞಾನ ಇವರಿಗಿದೆ.

  -ಹೀಗೆ ಸಂಘದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಪರಿಚಯಿಸಿದರು.

  ಎಷ್ಟೊಂದು ರಾಮಾಯಣಗಳು... : ಡಾ.ಪ್ರಭಾಕರ ಜೋಶಿಯವರು ಮಾತನಾಡುತ್ತ, ಭಾರತದಲ್ಲಿ ನಮಗೆ ಗೊತ್ತಿರುವ ವಾಲ್ಮೀಕಿ ರಾಮಾಯಣವೊಂದೇ ಅಲ್ಲದೇ ರಾಮಾಯಣವನ್ನು ಭಿನ್ನ ಭಿನ್ನ ರೀತಿಯಾಗಿ ವಿಭಿನ್ನ ಪ್ರದೇಶದಲ್ಲಿ ಅನೇಕ ಕವಿಗಳು ಬರೆದಿದ್ದಾರೆ. ನೇಪಾಳದ ರಾಮಾಯಣ, ತುಳಸಿ ರಾಮಾಯಣ, ಕುವೆಂಪುರವರ ರಾಮಾಯಣ ದರ್ಶನಂ, ಸಂಗ್ರಹ ರಾಮಾಯಣ ಹೀಗೆ ಪುಸ್ತಕಗಳ ಪಟ್ಟಿ ಉದ್ದವಾಗುತ್ತದೆ. List of various Ramayana in South Asia ಎಂಬ ಪುಸ್ತಕವೇ ಇದೆ ಎಂದರು.

  ರಾಮನ ಬಗ್ಗೆ ಹೇಳು ಎಂದು ನಾರದರನ್ನು ಕೇಳಿ, ನಾರದನಿಗೂ ಸಮಸ್ಯಯಾಗುತ್ತದೆ. ಅಂಥಾ ಸರ್ವಗುಣ ಸಂಪನ್ನ ನೂ, ಗುಣ ಶೌರ್ಯ ಪರಾಕ್ರಮಿ, ಧರ್ಮಿಷ್ಠ, ಮರ್ಯಾದ ಪುರುಷೋತ್ತಮನನ್ನು ವರ್ಣಿಸುವುದು ಕಷ್ಟ. ಮೂವತ್ತಾ ರೂ ಗುಣಗಳನ್ನು ಒಬ್ಬನೇ ಹೇಗೆ ಹೊಂದಲು ಸಾಧ್ಯ? ಇದು ಆಯ್ಕೆಯ ದ್ವಂದ್ವ. To be or not to be ಎಂಬ ಭಾವ ರಾಮಾಯಣದುದ್ದಕ್ಕೂ ಕಾಣಬಹುದಾಗಿದೆ. ರಾಮಾಯಣ ಹೀಗೆ ಇತ್ತು, ಹೀಗೆ ಆಗಿದೆಯೆಂದು ಒತ್ತಾಯ ಪೂರ್ವಕವಾಗಿ ಯಾರ ಮೇಲೂ ಹೇರಬಾರದು. ರಾಮ ವ್ಯಕ್ತಿಯಲ್ಲ, ಜನಭಾಷೆ. ರಾಮ ಹದಿನಾಲ್ಕು ವರ್ಷ ವನವಾಸ ಮಾಡಿದ್ದಕ್ಕೆ, ಅವನ ಜಾತಕವೇ ಸರಿಯಿರಲಿಲ್ಲ ಎಂದರು.

  ಪರಮ ವಿದ್ವಾಂಸ : ರಾವಣ- ಪರಮ ವಿದ್ವಾಂಸ, ಮಹಾ ಶಿವಭಕ್ತ ಮತ್ತು ಅಷ್ಟೇ ಮೂರ್ಖ. ಸೀತೆಯ ಹರಣದಲ್ಲಿ ಶೂರ್ಪನಖಿಯು ಅವನ ಪರಾಕ್ರಮವನ್ನು ಕೆಣಕಿದ್ದಕ್ಕೆ ಬೇರೆದಾರಿಯಿಲ್ಲದೇ ವಿಭೀಷಣ, ಕುಂಭಕರ್ಣ ಮತ್ತಿತರರ ಹಿತ ವಚನವನ್ನು ಮೀರಿ ಸೀತೆಯನ್ನು ಅಪಹರಿಸಿದ್ದು ತಪ್ಪು.

  ಕೈಕೆ ತನ್ನ ಸ್ವಂತದ ಬುದ್ದಿ ಬಳಸದೇ ಆಸೆಗೆ ಸಿಲುಕಿ ಪತಿಯನ್ನು ಕಳೆದುಕೊಂಡಳು. ಆ ಮೂಲಕ ಪುರಜನರ, ಪ್ರಿಯಜನ ರ ನಿಂದೆಗೂ ಪಾತ್ರಳಾದಳು. ಕೈಕೆಯ ಒಂದು ತಪ್ಪು ನಿರ್ಣಯದಿಂದ ಇಡೀ ರಾಮಾಯಣದ ಇತಿಹಾಸವೇ ಬದಲಾ ಯಿತು. ರಾಮಯಣದಲ್ಲಿ ಸರಿ-ತಪ್ಪುಗಳು ಗೌಣ. ರಾಮನ ಪಿತೃವಾಕ್ಯಪರಿಪಾಲನೆ, ಲಕ್ಷ್ಮಣನ ಸಹೋದರ ನಿಷ್ಠೆ, ಭರತನ ಭ್ರಾತೃ ಪ್ರೇಮ, ಊರ್ಮಿಳೆಯ ಮಹಾತ್ಯಾಗ ಎಲ್ಲವೂ ಜನಮನದಲ್ಲಿ ಸರ್ವಕಾಲಕ್ಕೂ ಅಚ್ಚಳಿಯದೆ ಉಳಿವ ಮಹಾಕಾವ್ಯದ ಸುಂದರ ಚಿತ್ರಗಳು ಎಂದು ಜೋಶಿ ವಿವರಿಸಿದರು.

  ಕಾರ್ಯಕ್ರಮದ ಕೊನೆಗೆ ಸಂಘದ ಕಾರ್ಯದರ್ಶಿ ಎಸ್‌.ಕೆ.ಭಟ್‌ ಮಾತನಾಡಿ, ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದ ಕಟ್ಟಡ ಜನವರಿ 2005 ರ ಹೊತ್ತಿಗೆ ಮುಗಿಯಲಿ. ಆಗ ನಾವು ಮತ್ತೊಮ್ಮೆ ಜೋಶಿಯವರೊಂದಿಗೆ ಯಕ್ಷಗಾನದ ಅದ್ಫುತವಾದ ತಾಳಮದ್ದಲೆ ಕಾರ್ಯಕ್ರಮವನ್ನು ರೂಪಿಸೋಣ. ಜೋಶಿಯವರ ಸಾಮರ್ಥ್ಯವನ್ನು ಸವಿಯೋಣ ಎಂದರು.

  ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ತುಳು ಚಲನಚಿತ್ರ ನಟ, ನಿರ್ಮಾಪಕ ಕೆ.ಎಸ್‌.ಟೇಲರ್‌, ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದ ಸುರೇಶ ಶೆಟ್ಟಿ, ಕರ್ನಾಟಕ ಭವನದ ಡೆಪ್ಯೂಟಿ ಡೈರೆಕ್ಟರ್‌ ಗಾರವಾಡ ಆಗಮಿಸಿದ್ದರು.

  ಮುಖಪುಟ / ವಾರ್ತೆಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more