ಹಂಪಿ ಕನ್ನಡ ವಿವಿ ಕುಲಪತಿಯಾಗಿ ಬಿ.ಎ.ವಿವೇಕ ರೈ ಆಯ್ಕೆಗೆ ಶಿಫಾರಸ್ಸು
ಹಂಪಿ ಕನ್ನಡ ವಿವಿ ಕುಲಪತಿಯಾಗಿ ಬಿ.ಎ.ವಿವೇಕ ರೈ ಆಯ್ಕೆಗೆ ಶಿಫಾರಸ್ಸು
ಅಧಿಕೃತ ಆದೇಶ ಸದ್ಯದಲ್ಲೇ ಹೊರಬೀಳಲಿದೆ
ಕಳೆದ ಮಾರ್ಚಿ 7ರಿಂದ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯು ಖಾಲಿ ಉಳಿದಿತ್ತು . ಜುಲೈ 16 ರಂದು ರಾಜಶೇಖರನ್‌ಪಿಳ್ಳೆ ನೇತೃತ್ವದ ಆಯ್ಕೆ ಸಮಿತಿಯು, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ವಿವೇಕ್‌ರೈ ಸೇರಿದಂತೆ ಮೂವರನ್ನು ಆಯ್ಕೆ ಮಾಡಿತ್ತು.
ಮಂಗಳೂರು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿರುವ ವಿವೇಕ್‌ರೈ ಸೇವೆಯನ್ನು ಪರಿಗಣಿಸಿ, ಅವರನ್ನು ನೇಮಕ ಮಾಡುವಂತೆ ರಾಜ್ಯಪಾಲರಿಗೆ ಸರಕಾರ ಶಿಫಾರಸ್ಸು ಮಾಡಿದೆ. ಈ ಕುರಿತ ಅಧಿಕೃತ ಆದೇಶ ಸದ್ಯದಲ್ಲೇ ಹೊರಬೀಳಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications