ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಂಕಿತರ ಒಡನಾಟ ಕಾಂಗ್ರೆಸ್‌ ಪಕ್ಷಕ್ಕೆ ಪ್ರಿಯ ; ವಾಜಪೇಯಿ ವ್ಯಥೆ

By Staff
|
Google Oneindia Kannada News

ಕಳಂಕಿತರ ಒಡನಾಟ ಕಾಂಗ್ರೆಸ್‌ ಪಕ್ಷಕ್ಕೆ ಪ್ರಿಯ ; ವಾಜಪೇಯಿ ವ್ಯಥೆ
ಮಹಮ್ಮದ್‌ ಆಲಿ ಜಿನ್ನ ಮನಸ್ಥಿತಿ ಕಾಂಗ್ರೆಸ್‌ನಲ್ಲಿನ್ನೂ ಜೀವಂತ -ಉಮಾ

ಬೆಂಗಳೂರು: ಕಳಂಕಿತರನ್ನು ಅಧಿಕಾರದಿಂದ ಮಾತ್ರವಲ್ಲ ಚುನಾವಣೆಗಳಿಂದಲೂ ದೂರವಿಡಬೇಕು. ಈ ನೀತಿಗೆ ನಮ್ಮೊಂದಿಗೆ ಕಾಂಗ್ರೆಸ್‌ ಕೈಜೋಡಿಸುತ್ತಿಲ್ಲ. ಚುನಾವಣೆಯಲ್ಲಿ ನಮಗೆ ಅಧಿಕಾರ ದಕ್ಕಲಿಲ್ಲವೆಂದು ಪ್ರತಿಭಟನೆ ಮಾಡುತ್ತಿಲ್ಲ. ದೇಶದ ಪರಿವರ್ತನೆಗಾಗಿ ಬಿಜೆಪಿ ರಾಜಕೀಯವನ್ನು ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹೇಳಿದರು

ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜು ಆವರಣದಲ್ಲಿ ಬುಧವಾರ ಸಂಜೆ ಬಿಜೆಪಿ ಆಯೋಜಿಸಿದ್ದ ಸ್ವಾಭಿಮಾನ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಮಾತನಾಡಿ, ಭಾರತ ಮಾತೆಯ ಪ್ರತೀಕವಾದ ರಾಷ್ಟ್ರಧ್ವಜದ ಯಾತ್ರೆ ಮಾಡಿದರೆ, ಜನ ಕೆರಳಿ ಹಿಂಸಾಚಾರವಾಗುತ್ತದೆ ಎನ್ನುವ ರಾಜ್ಯ ಸರಕಾರದ ಧೋರಣೆ ಅಸಮಂಜಸ. ರಾಷ್ಟ್ರಧ್ವಜ ನೋಡಿ ಕೆರಳುವವರನ್ನು ಜೈಲಿಗೆ ಹಾಕಬೇಕಾಗಿದೆ ಎಂದರು.

ಗಾಂಧೀಜಿಯವರನ್ನು ಕಡೆಯ ತನಕ ರಾಷ್ಟ್ರ ನಾಯಕರೆಂದು ಮಹಮ್ಮದ್‌ ಆಲಿ ಜಿನ್ನ ಒಪ್ಪಲಿಲ್ಲ. ರಾಷ್ಟ್ರಧ್ವಜವನ್ನು ಸಹಾ ಹಿಂದೂಗಳ ಧ್ವಜವೆಂದು ಅವರು ಹೇಳುತ್ತಿದ್ದರು. ಇಂಥಹ ಮನಸ್ಥಿತಿ ಕಾಂಗ್ರೆಸ್‌ನಲ್ಲಿ ಈಗಲೂ ಜೀವಂತವಾಗಿದೆ. ರಾಷ್ಟ್ರಧ್ವಜದ ನೆಪದಲ್ಲಿ ಹಿಂದೂ ಮುಸಲ್ಮಾನರನ್ನು ವಿಭಜನೆ ಮಾಡಲು ಹುನ್ನಾರಗಳು ನಡೆದಿವೆ. ಮುಸಲ್ಮಾನರ ದೇಶಭಕ್ತಿ ಬಗೆಗೆ ನಮಗೆ ಅನುಮಾನವಿಲ್ಲ . ರಾಷ್ಟ್ರಭಿಮಾನವೆನ್ನುವುದು ಯುಗಯುಗಗಳಿಂದ ಹರಿದು ಬರುತ್ತಿರುವ ಪ್ರವಾಹ ಎಂದರು.

ಸಮಾವೇಶದಲ್ಲಿ ಬಿಜೆಪಿ ಮುಖಂಡರಾದ ಎಲ್‌.ಕೆ .ಆಡ್ವಾಣಿ, ವೆಂಕಯ್ಯನಾಯ್ಡು, ಅನಂತಕುಮಾರ್‌, ಬಿ.ಎಸ್‌.ಯಡಿಯೂರಪ್ಪ, ಎಸ್‌.ಬಂಗಾರಪ್ಪ, ಮತ್ತಿತರರು ಪಾಲ್ಗೊಂಡಿದ್ದರು. ಸುರಿಯುವ ಮಳೆಯಲ್ಲೂ ಸಮಾವೇಶದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

(ಇನ್ಫಾ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X