ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಿರುಪತಿ ತಿಮ್ಮಪ್ಪನ ಪ್ರಸಾದಕ್ಕಾಗಿ ಕೆಎಂಎಫ್‌ನಿಂದ 15ಲಕ್ಷ ಕೇಜಿ ತುಪ್ಪ
ತಿರುಪತಿ ತಿಮ್ಮಪ್ಪನ ಪ್ರಸಾದಕ್ಕಾಗಿ ಕೆಎಂಎಫ್‌ನಿಂದ 15ಲಕ್ಷ ಕೇಜಿ ತುಪ್ಪ
ಹೃದಯಾಘಾತದಿಂದ ಚೇತರಿಸಿಕೊಂಡು ಕಚೇರಿಗೆ ಮರಳಿದ ಸಚಿವ ಮಿರಾಜುದ್ದೀನ್
ಬೆಂಗಳೂರು : ಭಾರತದ ನಂ.1 ಯಾತ್ರಾಸ್ಥಳ ತಿರುಪತಿಯ ತಿಮ್ಮಪ್ಪ ದೇವರ ಗುಡಿಗೆ 15 ಲಕ್ಷ ಕೇಜಿ ತುಪ್ಪ ಪೂರೈಸುವ ಅವಕಾಶ ರಾಜ್ಯ ಹಾಲು ಒಕ್ಕೂಟಕ್ಕೆ ದೊರೆತಿದೆ.
ಇತ್ತೀಚೆಗೆ ನಡೆದ ಟೆಂಡರ್‌ನಲ್ಲಿ ತುಪ್ಪ ಒದಗಿಸುವ ಅವಕಾಶ ಕೆಎಂಎಫ್‌ಗೆ ದೊರೆಯಿತು. ಈ ತುಪ್ಪವನ್ನು ದೇವರ ಪ್ರಸಾದ ತಯಾರಿಸಲು ಬಳಸಲಾಗುವುದು ಂದು ಪಶು ಸಂಗೋಪನಾ ಸಚಿವ ಮಿರಾಜುದ್ದೀನ್ ಪಟೇಲ್ ಆ.31ರಂದು ಸುದ್ದಿಗಾರರಿಗೆ ತಿಳಿಸಿದರು.
ತಿರುಪತಿಗೆ ತುಪ್ಪವನ್ನು ಪೂರೈಸುವ ಅವಕಾಶ ದೊರೆತಿರುವುದು ಕೆಎಂಎಫ್ ಕಾರ್ಯ ವೈಖರಿ ಹಾಗೂ ಉತ್ಪನ್ನಗಳ ಗುಣಮಟ್ಟಕ್ಕೆ ದೊರೆತ ಮನ್ನಣೆ. ತುಪ್ಪವನ್ನು ಸದ್ಯದಲ್ಲೇ ಪೂರೈಸಲಾಗುವುದು ಎಂದು ಪಟೇಲ್ ಹೇಳಿದರು. ಇತ್ತೀಚೆಗಷ್ಟೇ ಹೃದಯಾಘಾತಕ್ಕೆ ತುತ್ತಾಗಿದ್ದ ಮಿರಾಜುದ್ದೀನ್ ಪಟೇಲ್ ಈಗಷ್ಟೇ ಚೇತರಿಸಿಕೊಂಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು