ಗುಲ್ಬರ್ಗಾದ ಹೆಚ್ಚುವರಿ ನ್ಯಾಯಮೂರ್ತಿ ಎಂ. ಸೋಮೇಶ್ವರ ಆತ್ಮಹತ್ಯೆ
ಗುಲ್ಬರ್ಗಾದ ಹೆಚ್ಚುವರಿ ನ್ಯಾಯಮೂರ್ತಿ ಎಂ. ಸೋಮೇಶ್ವರ ಆತ್ಮಹತ್ಯೆ
ಸಾವಿಗೆ ಯಾರನ್ನೂ ಹೊಣೆ ಮಾಡದ ನ್ಯಾಯಮೂರ್ತಿ
ಸೋಮೇಶ್ವರ ಅವರು ಇನ್ನೋರ್ವ ನ್ಯಾಯಮೂರ್ತಿ ಎಸ್.ಜಿ.ಭಾವಿಕಟ್ಟಿ ಅವರೊಂದಿಗೆ ಸರ್ಕಾರಿ ನಿವಾಸದಲ್ಲಿ ನೆಲೆಸಿದ್ದರು. ಭಾನುವಾರ ರಾತ್ರಿ ಮೊಬೈಲ್ ಮೂಲಕ ಮನೆಯವರೊಂದಿಗೆ ಮಾತನಾಡಿದ್ದರು. ಭಾವಿಕಟ್ಟೆ ಅವರೊಂದಿಗಿನ ಮಾತುಕತೆಯ ನಂತರ ಮಲಗಲಿಕ್ಕೆ ತೆರಳಿದ್ದರು. ಸೋಮವಾರ ಬೆಳಗ್ಗೆ ಭಾವಿಕಟ್ಟೆಯವರು ಸೋಮೇಶ್ವರ ಅವರನ್ನು ಎಬ್ಬಿಸಲು ಹೋದಾಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದುದು ಬೆಳಕಿಗೆ ಬಂತು.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೋಮೇಶ್ವರ ಪತ್ರವೊಂದನ್ನು ಬರೆದಿಟ್ಟಿದ್ದಾರೆ. ತಮ್ಮ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡದ ಅವರು, ತಮ್ಮಂಥವರಿಗೆ ಈ ಭೂಮಿಯಲ್ಲಿ ಬದುಕುವ ಹಕ್ಕಿಲ್ಲ . ನನ್ನ ಜವಾಬ್ದಾರಿಗಳನ್ನು ಮುಗಿಸದೇ ತೆರಳುತ್ತಿದ್ದೇನೆ ಎಂದು ಬರೆದಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications