ಹುಬ್ಬಳ್ಳಿ : ಭುಗಿಲೆದ್ದ ವಕೀಲರ ಪ್ರತಿಭಟನೆ, ಉಮಾ ವಿಚಾರಣೆಗೆ ತಡೆ
ಹುಬ್ಬಳ್ಳಿ : ಭುಗಿಲೆದ್ದ ವಕೀಲರ ಪ್ರತಿಭಟನೆ, ಉಮಾ ವಿಚಾರಣೆಗೆ ತಡೆ
ಪೊಲೀಸ್ ರಕ್ಷಣೆಯಲ್ಲೂ ನ್ಯಾಯಾಲಯ ಪ್ರವೇಶಿಸಲು ವಿಫಲರಾದ ಎಪಿಪಿ ನಾಗೇಂದ್ರ
ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ಕೆ.ಜೈನ್ ನಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡದ ವಕೀಲರು ಮಂಗಳವಾರ ನ್ಯಾಯಾಲಯ ಬಹಿಷ್ಕಾರ ನಡೆಸಿದರು. ಇದರಿಂದಾಗಿ ಉಮಾ ಭಾರತಿ ಪ್ರಕರಣದ ವಿಚಾರಣೆಯಲ್ಲಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ನಾಗೇಂದ್ರ ಅವರಿಗೆ ನ್ಯಾಯಾಲಯ ಪ್ರವೇಶಿಸುವುದು ಸಾಧ್ಯವಾಗಲಿಲ್ಲ . ವಿಚಾರಣೆ ಮುಂದಕ್ಕೆ ಹೋಯಿತು.
ಪೊಲೀಸ್ ರಕ್ಷಣೆಯಲ್ಲಿ ಎಪಿಪಿ ನಾಗೇಂದ್ರ ಅವರನ್ನು ನ್ಯಾಯಾಲಯಕ್ಕೆ ಕರೆತರುವಂತೆ ನ್ಯಾಯಮೂರ್ತಿ ಇಸ್ಮಾಯಿಲ್ ತಿಳಿಸಿದರು. ಆದರೆ ನಾಗೇಂದ್ರ ಅವರು ಕೋರ್ಟ್ ಹಾಲ್ ಪ್ರವೇಶಿಸುವುದಕ್ಕೆ ಉದ್ರಿಕ್ತ ವಕೀಲರ ಗುಂಪು ಅವಕಾಶ ಮಾಡಿಕೊಡಲಿಲ್ಲ . ಪರಿಸ್ಥಿತಿ ತುಂಬಾ ಬಿಗುವಿನಿಂದ ಕೂಡಿದೆ, ಪೊಲೀಸ್ ರಕ್ಷಣೆಯಲ್ಲಿ ಕೂಡ ನ್ಯಾಯಾಲಯ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಸುದ್ದಿಗಾರರಿಗೆ ನಾಗೇಂದ್ರ ತಿಳಿಸಿದರು.
ಹೈಕೋರ್ಟ್ ಪೀಠ ನಿರಾಕರಣೆ ಹಿನ್ನೆಲೆಯಲ್ಲಿ ನ್ಯಾಯಾಲಯ ಕಲಾಪ ನಡೆಯಲು ತಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಹುಬ್ಬಳ್ಳಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸಿ.ಬಿ.ಪಾಟೀಲ್ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications