ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಿಇಟಿ ಮಾತುಕತೆ’ಯಲ್ಲಿ ಬೆಳ್ಳಿಗೆರೆ ! ಕಾಮೆಡ್‌-ಕೆ ಶುಲ್ಕ ನೀತಿ ಸಡಿಲಿಕೆ

By Staff
|
Google Oneindia Kannada News

‘ಸಿಇಟಿ ಮಾತುಕತೆ’ಯಲ್ಲಿ ಬೆಳ್ಳಿಗೆರೆ ! ಕಾಮೆಡ್‌-ಕೆ ಶುಲ್ಕ ನೀತಿ ಸಡಿಲಿಕೆ
ಇನ್ನೂ ಬಾಕಿ ಇದೆ ಮತ್ತೊಂದು ಸುತ್ತಿನ ಮಾತುಕತೆ. ಬಗೆಹರಿಯದ ಸೀಟು ಹಂಚಿಕೆ ಕಥೆ.

ಬೆಂಗಳೂರು : ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟ ಕಾಮೆಡ್‌-ಕೆ ಮತ್ತು ರಾಜ್ಯ ಸರ್ಕಾರದ ನಡುವಣ ಸಿಇಟಿ ಮಾತುಕತೆಗಳಲ್ಲಿ ಇದೇ ಮೊದಲ ಬಾರಿಗೆ ಕೊಂಚ ಪ್ರಗತಿ ಕಾಣಿಸಿಕೊಂಡಿದ್ದು , ಶುಲ್ಕ ನೀತಿಗೆ ಸಂಬಂಧಿಸಿದಂತೆ ಉಭಯಪಕ್ಷಗಳು ತಮ್ಮ ಬಿಗಿಪಟ್ಟು ಸಡಿಲಿಸಿದೆ. ಆದರೆ ಸೀಟು ಹಂಚಿಕೆ ಅನುಪಾತದಲ್ಲಿ ಮಾತ್ರ ಯಾವುದೇ ರಾಜಿಗೆ ಸಿದ್ಧವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕಾಮೆಡ್‌-ಕೆ ಪ್ರತಿನಿಧಿಗಳು ಹಾಗೂ ಸರ್ಕಾರದ ನಡುವಣ ಮಾತುಕತೆ ಮುಖ್ಯಮಂತ್ರಿ ಧರ್ಮಸಿಂಗ್‌ ನೇತೃತ್ವದಲ್ಲಿ ಆ.25ರ ಬುಧವಾರ ನಡೆಯಿತು. ಶುಲ್ಕ ನೀತಿಗೆ ಸಂಬಂಧಿಸಿದಂತೆ ಉಭಯತ್ರರೂ ರಾಜಿಗೆ ಬಂದಿದ್ದು - ಮಧ್ಯಮವರ್ಗದವರು, ಹಿಂದುಳಿದವರು ಹಾಗೂ ಬಡ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ನೀಡಲು ಕಾಮೆಡ್‌-ಕೆ ಸಮ್ಮತಿಸಿದೆ. ಕೈಗಾರಿಕಾ ಸಚಿವ ಪಿಜಿಆರ್‌ ಸಿಂಧ್ಯಾ ಸಭೆಯ ನಂತರ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.

ಸೀಟು ಹಂಚಿಕೆ ಸಂಬಂಧ ಶೇ.75 : 25 ಅನುಪಾತಕ್ಕೆ ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಕಾಮೆಡ್‌-ಕೆ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಸಿಂಧ್ಯಾ ಹೇಳಿದರು. ಮಾತುಕತೆಯ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.

ಈ ನಡುವೆ ಉನ್ನತ ಶಿಕ್ಷಣಾಕಾಂಕ್ಷಿ ಸಿಇಟಿ ವಿದ್ಯಾರ್ಥಿಗಳ ಡೋಲಾಯಮಾನ ಸ್ಥಿತಿ ಮುಂದುವರೆದಿದೆ. ಆಗಸ್ಟ್‌ 19ರಿಂದ ಸಿಇಟಿ ಕೌನ್ಸೆಲಿಂಗ್‌ ಸ್ಥಗಿತಗೊಂಡಿದೆ. ಕೌನ್ಸೆಲಿಂಗ್‌ ಮುಂದುವರಿಕೆ ಅಥವಾ ಹೊಸದಾಗಿ ಕೌನ್ಸೆಲಿಂಗ್‌ ನಡೆಸುವ ಬಗ್ಗೆ ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ಲಭ್ಯವಿಲ್ಲ .

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X