ದೇಶದಲ್ಲಿ ಉತ್ತಮ ವಿಜ್ಞಾನಿಗಳಿಗೆ ಬರ : ಸಚಿವ ಕಪಿಲ್‌ಸಿಬಾಲ್ ಖೇದ
ದೇಶದಲ್ಲಿ ಉತ್ತಮ ವಿಜ್ಞಾನಿಗಳಿಗೆ ಬರ : ಸಚಿವ ಕಪಿಲ್‌ಸಿಬಾಲ್ ಖೇದ
ವಿಜ್ಞಾನ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸಲು, ಸ್ವಾಯತ್ತತೆ ನೀಡಲು ಸಚಿವರ ಒಲವು
ದೇಶಕ್ಕೆ ಅತ್ಯುತ್ತಮ ವಿಜ್ಞಾನಿಗಳ ಅಗತ್ಯವಿದೆ. ದುರಾದೃಷ್ಟವಶಾತ್ ಮೊದಲ ದರ್ಜೆಯ ವಿಜ್ಞಾನಿಗಳು ಅಗತ್ಯ ಸಂಖ್ಯೆಯಲ್ಲಿ ದೊರಕುತ್ತಿಲ್ಲ . ಪ್ರತಿಭಾವಂತ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ನಮ್ಮ ವೈಜ್ಞಾನಿಕ ಸಂಸ್ಥೆಗಳ ಕಾರ್ಯ ವೈಖರಿಯನ್ನು ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಕಪಿಲ್ ಸಿಬಾಲ್ ಆ.22ರಂದು ಸುದ್ದಿಗಾರರಿಗೆ ತಿಳಿಸಿದರು.
ಸರಸ್ ವಿಮಾನದ ಅಧಿಕೃತ ಉದ್ಘಾಟನೆಯ ನಂತರ ಕಪಿಲ್ ಸಿಬಾಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. 14 ಆಸನಗಳ ಈ ಲಘು ನಾಗರಿಕ ವಿಮಾನವನ್ನು ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೆಟರೀಸ್ ವಿನ್ಯಾಸಗೊಳಿಸಿದೆ.
ಅತ್ಯುತ್ತಮ ಗುಣಮಟ್ಟದ ವಿಜ್ಞಾನ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಬೇಕಾಗಿವೆ. ಅವುಗಳ ಸ್ವಾಯತ್ತತೆಯನ್ನು ಪ್ರೋತ್ಸಾಹಿಸಬೇಕಾದ ಅವಶ್ಯಕತೆಯೂ ಇದೆ ಎಂದು ಸಿಬಾಲ್ ಹೇಳಿದರು.
ಪ್ರಸ್ತುತ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಪಿರಮಿಡ್ ವಿನ್ಯಾಸವಿದೆ. ತಳವರ್ಗದಲ್ಲಿ ಹೆಚ್ಚಿನ ಸಂಖ್ಯೆಯ ವಿಜ್ಞಾನಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮೇಲ್ವರ್ಗ ಅತ್ಯಂತ ಕಡಿಮೆ ಅವಕಾಶ ಹೊಂದಿದ್ದು , ವಿಶ್ವದರ್ಜೆಯ ವಿಜ್ಞಾನಿಗಳು ನಮ್ಮಲ್ಲಿ ಕಡಿಮೆ ಮಂದಿಯಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಈ ಅಸಮತೋಲನ ಸರಿಪಡಿಸಬೇಕಾಗಿದೆ ಎಂದು ಸಚಿವ ಕಪಿಲ್ ಸಿಬಾಲ್ ಹೇಲಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications