ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಥಾಸ್ಥಿತಿ ಪಾಲಿಸಿ- ಸುಪ್ರಿಂಕೋರ್ಟ್‌ : ಸಿಇಟಿ ಕೌನ್ಸಲಿಂಗ್‌ ಸ್ಥಗಿತ

By Staff
|
Google Oneindia Kannada News

ಯಥಾಸ್ಥಿತಿ ಪಾಲಿಸಿ- ಸುಪ್ರಿಂಕೋರ್ಟ್‌ : ಸಿಇಟಿ ಕೌನ್ಸಲಿಂಗ್‌ ಸ್ಥಗಿತ
ಗೊಂದಲದಲ್ಲಿ ಸರ್ಕಾರ , ಪ್ರಶ್ನೆಯಾಗಿಯೇ ಉಳಿದಿರುವ ವಿದ್ಯಾರ್ಥಿಗಳ ಬದುಕು

ಬೆಂಗಳೂರು : ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ರೂಪಿಸಿರುವ ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕಾಮೆಡ್‌-ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರಿಂಕೋರ್ಟ್‌ ವಿಸ್ತುತ ಪೀಠಕ್ಕೆ ಒಪ್ಪಿಸಿದ್ದು , ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಆದೇಶಿಸಿದೆ.

ಸುಪ್ರಿಂಕೋರ್ಟ್‌ ತೀರ್ಪಿನಿಂದಾಗಿ ಸಿಇಟಿ ಕೌನ್ಸೆಲಿಂಗ್‌ ಮತ್ತೊಮ್ಮೆ ಸ್ಥಗಿತಗೊಂಡಿದ್ದು , ಹೊಸದಾಗಿ ಕೌನ್ಸೆಲಿಂಗ್‌ ನಡೆಸಬೇಕಾಗಿದೆ. ಕೌನ್ಸಲಿಂಗ್‌ಗೆ ಹೊಸ ದಿನಾಂಕ ನಿಗದಿಯಾಗಿಲ್ಲ . ಸುಪ್ರೀಕೋರ್ಟ್‌ನ ತೀರ್ಮಾನದ ಹಿನ್ನೆಲೆಯಲ್ಲಿ ಒಂದನೇ ರ್ಯಾಂಕ್‌ ಅಭ್ಯರ್ಥಿಗಳಿಂದ ಮತ್ತೆ ಹೊಸದಾಗಿ ಕೌನ್ಸಲಿಂಗ್‌ ನಡೆಯಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಸಿಇಟಿ ವಿಶೇಷಧಿಕಾರಿ ಡಿ.ಎನ್‌. ನಾಯಕ್‌ ತಿಳಿಸಿದ್ದಾರೆ.

ಆ.27ರಂದು ಪ್ರಕರಣ ಮತ್ತೆ ಕಟಕಟೆಗೆ ಬರಲಿದ್ದು , ಸುಪ್ರೀಕೋರ್ಟ್‌ ಶೇ.50-50ಅನುಪಾತ ಪ್ರಮಾಣವನ್ನೇ ಎತ್ತಿ ಹಿಡಿದರೆ ಮತ್ತೆ ಒಂದನೇ ರ್ಯಾಂಕ್‌ ಅಭ್ಯರ್ಥಿಯಿಂದಲೇ ಕೌನ್ಸಲಿಂಗ್‌ ನಡೆಸುವುದು ಅನಿವಾರ್ಯವಾಗಲಿದೆ. ಮೊದಲಬಾರಿ 15 ರಂದು ಕೌನ್ಸಲಿಂಗ್‌ ರದ್ದುಗೊಂಡಾಗ ವೈದಕೀಯ ಶಿಕ್ಷಣ ಆಕಾಂಕ್ಷಿಗಳಿಗೆ ಭಾರೀ ನಿರಾಸೆಯಾಗಿತ್ತು . ಈ ಬಾರಿ ನಿರಾಸೆಯಾಗುವ ಸರದಿ ಎಂಜನಿಯರಿಂಗ್‌ ಕೋರ್ಸ್‌ಗಳ ಆಕಾಂಕ್ಷಿಗಳದು .

ಹೊಸ ಶಾಸನ ರೂಪಿಸಿದ ಬಳಿಕ ಆ. 7ರಿಂದ ಶೇ. 75: 25 ರ ಅನುಪಾತದಲ್ಲಿ ಇಂಜನಿಯರಿಂಗ್‌ ಕೋರ್ಸ್‌ಗಳಿಗೆ ಕೌನ್ಸಲಿಂಗ್‌ ಆರಂಭಿಸಲಾಗಿತ್ತು . ಈವರೆಗೆ ಒಟ್ಟು 20,300 ಅಭ್ಯರ್ಥಿಗಳು ಕೌನ್ಸಲಿಂಗ್‌ನಲ್ಲಿ ಭಾಗವಹಿಸಿದ್ದರು.

ಭವಿಷ್ಯದ ಬಗ್ಗೆ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮುಂದೇನು ಎಂಬ ಭಯ ಆವರಿಸಿದೆ. ಉತ್ತರ ಸದ್ಯಕ್ಕಂತೂ ಯಾರ ಬಳಿಯೂ ಇಲ್ಲ .

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X