ಅಕ್ಷಯ ಪಾತ್ರೆ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ಕಾನ್‌ನಿಂದ ‘ಅಕ್ಷಯ ವಸ್ತ್ರ’
ಅಕ್ಷಯ ಪಾತ್ರೆ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ಕಾನ್‌ನಿಂದ ‘ಅಕ್ಷಯ ವಸ್ತ್ರ’
ಹಂತಹಂತವಾಗಿ 1 ಲಕ್ಷ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಗುರಿ
ಕೃಷ್ಣ ಜನ್ಮಾಷ್ಟಮಿ (ಸೆ.6) ದಿನದಿಂದ ಇಸ್ಕಾನ್‌ನ ‘ಅಕ್ಷಯ ವಸ್ತ್ರ ’ ಯೋಜನೆ ಪ್ರಾರಂಭಗೊಳ್ಳಲಿದೆ. ಅಂದು 7500 ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗುವುದು. ಹಂತಹಂತವಾಗಿ 1 ಲಕ್ಷ ಬಡ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಗುರಿಯನ್ನು ಇಸ್ಕಾನ್ ಹೊಂದಿದೆ ಎಂದು ಇಸ್ಕಾನ್ ಅಧ್ಯಕ್ಷ ಮಧುಪಂಡಿತ ದಾಸ್ ತಿಳಿಸಿದ್ದಾರೆ.
‘ಅಕ್ಷಯ ವಸ್ತ್ರ ’ ಯೋಜನೆಯ ಔಪಚಾರಿಕ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ (ಆ.13) ಅವರು ಮಾತನಾಡುತ್ತಿದ್ದರು. ಪೀಣ್ಯದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 250 ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
ಮಕ್ಕಳಿಗೆ ಅವರ ಬಾಲ್ಯವನ್ನು ಪೂರ್ಣಪ್ರಮಾಣದಲ್ಲಿ ದೊರಕಿಸಿಕೊಡುವುದು ನಮ್ಮ ಗುರಿ. ಅದಕ್ಕಾಗಿ ‘ಅಕ್ಷಯ ವಸ್ತ್ರ ’ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ‘ಅಕ್ಷಯ ಪಾತ್ರೆ’ ಕಾರ್ಯಕ್ರಮದ ಮೂಲಕ 60 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಇಸ್ಕಾನ್ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ ಎಂದು ಮಧುಪಂಡಿತ ದಾಸ್ ಹೇಳಿದರು.
ಉಳ್ಳವರು ಬಡ ಶಾಲಾ ಮಕ್ಕಳಿಗೆ ಬಟ್ಟೆಗಳನ್ನು ಕೊಡುಗೆಯಾಗಿ ನೀಡಬೇಕು ಎಂದು ಕರೆನೀಡಿದ ಮಧುಪಂಡಿತ ದಾಸ್- ಶಾಲೆಗಳು ಬಟ್ಟೆ ಸಂಗ್ರಹಣಾ ಕೇಂದ್ರಗಳನ್ನು ಆರಂಭಿಸುವಂತೆ ಸೂಚಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications