ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಳುಗಿಸದಿರು ಓ ಸಾಗರವೆ ಗಣೇಶಭಾಗ್‌ ರೈತರ ತುತ್ತಿನ ಗದ್ದೆಗಳನ್ನು !

By Staff
|
Google Oneindia Kannada News

ಮುಳುಗಿಸದಿರು ಓ ಸಾಗರವೆ ಗಣೇಶಭಾಗ್‌ ರೈತರ ತುತ್ತಿನ ಗದ್ದೆಗಳನ್ನು !
ಒಂದೆಡೆ ಭೂಮಿ ಕೊರೆತ, ಇನ್ನೊಂದೆಡೆ ತುತ್ತಿನ ಚೀಲಕ್ಕೇ ಕನ್ನ ...

ಅಂಕೋಲಾ : ಮಳೆ ಬಂದರೂ ಕಷ್ಟ , ಬರದಿದ್ದರೂ ಕಷ್ಟ ಎನ್ನುವುದು ಇದಕ್ಕೇನೆ.

ಅಂಕೋಲಾದ ಬಾವಿಕೆರೆ ಪಂಚಾಯ್ತಿ ವ್ಯಾಪ್ತಿಯ ಗಣೇಶ್‌ಭಾಗ್‌ನ ಬತ್ತದ ಪೈರು ಇದೀಗ ಉಪ್ಪು ನೀರಿನ ಕಾಟ ಅನುಭವಿಸುತ್ತಿದೆ. ಅಧಿಕ ಮಳೆಯಿಂದಾಗಿ ಸಮುದ್ರ ಉಕ್ಕೇರುತ್ತಿದ್ದು , ಉಪ್ಪು ನೀರಿನ ದಾಳಿಗೆ ಸುಮಾರು 1000 ಎಕರೆ ಭತ್ತದ ಗದ್ದೆ ತುತ್ತಾಗುವ ಆತಂಕದಲ್ಲಿ ರೈತರು ಮುಳುಗಿದ್ದಾರೆ.

ಒಂದೆಡೆ ವಾರ್ಷಿಕ ನಕ್ಷತ್ರಿಕ ಕಡಲ ಕೊರೆತದ ಭೀತಿ. ಇನ್ನೊಂದೆಡೆ ಕೈಗೆ ಸಿಗಬೇಕಾದ ಭತ್ತದ ಬೆಳೆ ಕಡಲಪಾಲಾಗುವ ಆತಂಕ. ಇವುಗಳ ನಡುವೆ ಗಣೇಶಭಾಗ್‌ನ ರೈತರು ನಿದ್ದೆ ಕಳಕೊಂಡಿದ್ದಾರೆ. ಸುಮಾರು 500 ಕುಟುಂಬಗಳು ಈ ಸಂಕಟ ಅನುಭವಿಸುತ್ತಿವೆ.

ಕಳೆದ 10 ದಿನಗಳಿಂದ ಭೂಸವಕಳಿ ವ್ಯಾಪಕವಾಗಿದೆ. ಈ ನಡುವೆ ಕಿಮೀಗಟ್ಟಲೆ ನದಿ ದಂಡೆಯನ್ನು ಸಮುದ್ರ ಕ್ರಮಿಸಿದ್ದು ಭತ್ತದ ಹೊಲಗಳಿಗೆ ತೀರಾ ಹತ್ತಿರದಲ್ಲಿದೆ. ನದಿ ದಂಡೆಯ ನೂರಾರು ಮರಗಿಡಗಳು ಕಡಲ ಪಾಲಾಗಿವೆ. 8-10 ಅಡಿ ಭೂ ಸವಕಳಿ ಸಂಭವಿಸಿದೆ.

ಈ ಪ್ರದೇಶದ ಜನರು ಜೀವನೋಪಾಯಕ್ಕಾಗಿ ಭತ್ತದ ಬೆಳೆಯನ್ನೇ ನಂಬಿಕೊಂಡಿದ್ದು , ಬೆಳೆ ಕಡಲ ಪಾಲಾದಲ್ಲಿ ವರ್ಷಪೂರ್ತಿಯ ತುತ್ತಿಗೆ ಸಂಚಕಾರ ಒದಗಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X