ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಕೇಶ್‌ರ ‘ಮಂಜು ಕವಿದ ಸಂಜೆ ಮತ್ತು ಇತರ ಕಥೆಗಳು’ ಬಿಡುಗಡೆ

By Staff
|
Google Oneindia Kannada News

ಲಂಕೇಶ್‌ರ ‘ಮಂಜು ಕವಿದ ಸಂಜೆ ಮತ್ತು ಇತರ ಕಥೆಗಳು’ ಬಿಡುಗಡೆ
ತನ್ನ ವಿರುದ್ಧ ತಾನೇ ಯೋಚಿಸಿಕೊಳ್ಳುತ್ತಿದ್ದ ಲಂಕೇಶ್‌- ಅನಂತಮೂರ್ತಿ ಬಣ್ಣನೆ

ಬೆಂಗಳೂರು : ಯಾರದೇ ಮುಲಾಜು-ಹಂಗಿಗೆ ಒಳಗಾಗದೇ ನಿರ್ಭೀತಿಯಿಂದ ಪತ್ರಿಕೆ ನಡೆಸಿದ ಲಂಕೇಶ್‌, ಸಾಮಾಜಿಕ ನ್ಯಾಯಕ್ಕಾಗಿ ಸರಕಾರವನ್ನು ನಿಷ್ಠುರವಾಗಿ ಟೀಕಿಸುತ್ತಿದ್ದರು. ಜನ ಪತ್ರಿಕೆ ಬೇಡವೆಂದರೆ ನಿಲ್ಲಿಸೋಣವೆಂದು ಲಂಕೇಶ್‌ ಹೇಳುತ್ತಿದ್ದರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಡಾ.ಯು.ಆರ್‌.ಅನಂತ ಮೂರ್ತಿ ನೆನಪು ಮಾಡಿಕೊಂಡರು.

ಸಂದರ್ಭ : ಆಗಸ್ಟ್‌ 8ರ ಭಾನುವಾರ ನಡೆದ ಲಂಕೇಶ್‌ ಪತ್ರಿಕೆಯ 25ನೇ ವರ್ಷದ ಆಚರಣೆಯ ಸಂಭ್ರಮ ಹಾಗೂ ಲಂಕೇಶ್‌ರ ಹೊಸ ಕಥಾ ಸಂಕಲನ ‘ಮಂಜು ಕವಿದ ಸಂಜೆ ಮತ್ತು ಇತರ ಕಥೆಗಳು’ ಪುಸ್ತಕದ ಬಿಡುಗಡೆ ಕಾರ್ಯಕ್ರಮ.

ಮೊನಚು ಬರಹಕ್ಕೆ ಹೆಸರಾಗಿದ್ದ ಲಂಕೇಶ್‌, ತನ್ನ ವಿರುದ್ಧವೇ ಎಷ್ಟೋ ಸಲ ಯೋಚಿಸುತ್ತಿದ್ದರು. ಬಡವರು ಹಾಗೂ ದುರ್ಬಲರ ಮೇಲೆ ದೌಜನ್ಯ ನಡೆದಾಗ ತಮ್ಮ ಬರಹಗಳ ಮೂಲಕ ಶೋಷಿತರ ವಿರುದ್ಧ ಧ್ವನಿ ಎತ್ತುತ್ತಿದ್ದರು ಎಂದರು.

Lankesh’s Manju Kavida Sanje mattu Ithara Kathegalu book releasedಕಂದಾಯ ಮತ್ತು ಸಂಸದೀಯ ಸಚಿವ ಎಂ.ಪಿ.ಪ್ರಕಾಶ್‌ ಮಾತನಾಡಿ- ಸಮಾಜದಲ್ಲಿ ಪ್ರಸ್ತುತ ಕೋಮುವಾದ ಬೇರೆ ಬೇರೆ ರೂಪ ಪಡೆಯುತ್ತಿದೆ. ಅದು ಹಿಂಸಾತ್ಮಕ ಹಾಗೂ ಪ್ರಚೋದನಕಾರಿಯಾಗಿ ಬೆಳೆಯುತ್ತಿದೆ. ಜಾತಿವಾದ ಸಹಾ ಗಂಭೀರ ಸ್ವರೂಪ ಪಡೆಯುತ್ತಿದೆ. ಇಂಥದಕ್ಕೆಲ್ಲ ಲಂಕೇಶ್‌ ತಕ್ಕ ಉತ್ತರ ನೀಡುತ್ತಿದ್ದರು ಎಂದರು.

ಲಂಕೇಶ್‌ ಶಿಸ್ತಿಗೆ, ಛಲಕ್ಕೆ ಕಟ್ಟುಬಿದ್ದವರು. ಅವರ ಬರಹಗಳಲ್ಲಿ ಸೂಕ್ಷ್ಮತೆ, ಚಾಣಾಕ್ಷತೆ ಹಾಗೂ ಹೋರಾಟವಿತ್ತು ಎಂದು ಎಂ.ಪಿ. ಪ್ರಕಾಶ್‌ ಅಭಿಪ್ರಾಯಪಟ್ಟರು.

ಲಂಕೇಶ್‌ ಪತ್ರಿಕೆ ಸಂಪಾದಕಿ ಗೌರಿಲಂಕೇಶ್‌, ಪತ್ರಿಕೆ ಮಾಲೀಕ ಹಾಗೂ ಸಿನಿಮಾ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಹಾಗೂ ಲಂಕೇಶ್‌ ಮಿತ್ರ-ಲೇಕಕ ಪ್ರೊ.ರಾಮದಾಸ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X