ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಕೌನ್ಸೆಲಿಂಗ್‌ ಶುರು: ಕೋರ್ಟ್‌ಗೆ ಸರ್ಕಾರದ ಮಧ್ಯಂತರ ಅರ್ಜಿ

By Staff
|
Google Oneindia Kannada News

ಸಿಇಟಿ ಕೌನ್ಸೆಲಿಂಗ್‌ ಶುರು: ಕೋರ್ಟ್‌ಗೆ ಸರ್ಕಾರದ ಮಧ್ಯಂತರ ಅರ್ಜಿ
ಜುಲೈ 10ರಂದು ಕಾಮೆಡ್‌-ಕೆ ಜೊತೆ ಧರ್ಮಸಿಂಗ್‌ ಸಮಾಲೋಚನೆ

ಬೆಂಗಳೂರು : ಸಿಇಟಿ ಕೌನ್ಸೆಲಿಂಗ್‌ ಮುಂದುವರಿಕೆಗೆ ರಾಜ್ಯ ಹೈಕೋರ್ಟ್‌ ಹಸಿರು ನಿಶಾನೆ ತೋರಿರುವಂತೆಯೇ, ಕಳೆದ ವರ್ಷ ಜಾರಿಯಲ್ಲಿದ್ದ ಸೀಟು ಹಂಚಿಕೆ ಹಾಗೂ ಶುಲ್ಕ ನೀತಿಯನ್ನು ಈ ವರ್ಷವೂ ಮುಂದುವರಿಸಲು ಅನುವು ಮಾಡಿಕೊಡುವಂತೆ ಸುಪ್ರಿಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇಂಜಿನಿಯರಿಂಗ್‌, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ಸಿಇಟಿ ಕೌನ್ಸೆಲಿಂಗ್‌ ಇಂದಿನಿಂದ (ಜು.8, ಗುರುವಾರ) ಪ್ರಾರಂಭವಾಯಿತು. ಈ ಕೌನ್ಸೆಲಿಂಗ್‌ ಸೆಪ್ಟಂಬರ್‌ ಕೊನೆಯ ಭಾಗದವರೆಗೂ ನಡೆಯಲಿದೆ. ಈ ನಡುವೆ ರಾಜ್ಯ ಹೈಕೋರ್ಟ್‌ನ ವಿಶೇಷ ವಿಭಾಗೀಯ ನ್ಯಾಯಪೀಠ ಮಹತ್ವದ ತೀರ್ಪು ನೀಡಿದ್ದು , ಕೌನ್ಸೆಲಿಂಗ್‌ ಮುಂದುವರಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಸಿಇಟಿ ಸಂಬಂಧ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಎಂ.ಪಿ.ಪ್ರಕಾಶ್‌- ಕಳೆದ ವರ್ಷ ಜಾರಿಯಲ್ಲಿದ್ದ ಶುಲ್ಕ ಹಾಗೂ ಶೇ.75 :25 ಸೀಟು ಹಂಚಿಕೆ ನೀತಿಯನ್ನು ಈ ವರ್ಷವೂ ಮುಂದುವರಿಸಿಕೊಂಡು ಬರಲು ಅನುವು ಮಾಡಿಕೊಡುವಂತೆ ಸುಪ್ರಿಂಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಲಿದೆ ಎಂದರು.

ಸರ್ಕಾರಕ್ಕೆ 75 ಸೀಟು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗಕ್ಕೆ 25 ಸೀಟು ಎನ್ನುವ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ . ಸೀಟು ಹಂಚಿಕೆ ಸಂಬಂಧ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಜುಲೈ 10ರಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಖಾಸಗಿ ಕಾಲೇಜುಗಳ ಆಡಳಿತ ವರ್ಗದೊಂದಿಗೆ (ಕಾಮೆಡ್‌-ಕೆ) ಮಾತುಕತೆ ನಡೆಸುವರು ಎಂದು ಸಚಿವ ಎಂ.ಪಿ.ಪ್ರಕಾಶ್‌ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X