ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದ ರೈತ ವಿಧವೆಯರ ಸುಖದುಃಖಕ್ಕೆ ಕಿವಿಯಾದ ಮನಮೋಹನ್‌

By Staff
|
Google Oneindia Kannada News

ಆಂಧ್ರದ ರೈತ ವಿಧವೆಯರ ಸುಖದುಃಖಕ್ಕೆ ಕಿವಿಯಾದ ಮನಮೋಹನ್‌
ಸಂತ್ರಸ್ತ ರೈತರ ಕುಟುಂಬಕ್ಕೆ ನೆರವು, ಪ್ರಧಾನಿ ಭರವಸೆ

ಹೈದರಾಬಾದ್‌ : ಬರ, ಕೈಕೊಟ್ಟ ಮಳೆ-ಬೆಳೆ ಹಾಗೂ ಸಾಲದ ಶೂಲದಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾದ ಆಂಧ್ರಪ್ರದೇಶದ ರೈತರ ಕುಟುಂಬಗಳ ಸದಸ್ಯರನ್ನು ಪ್ರಧಾನಿ ಮನಮೋಹನ್‌ ಸಿಂಗ್‌ ಗುರುವಾರ ಭೇಟಿ ಮಾಡಿ ಸಂತೈಸಿದರು.

ಒಂದು ದಿನದ ಆಂಧ್ರ ಪ್ರವಾಸ ಕೈಗೊಂಡಿರುವ ಪ್ರಧಾನಿ ಮನಮೋಹನ್‌ಸಿಂಗ್‌, ಹಳ್ಳಿಗಳಿಗೆ ತೆರಳಿ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬ ವರ್ಗಗಳ ಕಷ್ಟಸುಖ ಆಲಿಸಿದರು. ಕಳೆದೆರಡು ವರ್ಷದಲ್ಲಿ ಆಂಧ್ರಪ್ರದೇಶದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು , ಕಳೆದ ಚುನಾವಣೆಯಲ್ಲಿ ಈ ಸರಣಿ ಆತ್ಮಹತ್ಯೆ ವಿಷಯವನ್ನು ತೆಲುಗುದೇಶಂ ವಿರುದ್ಧ ಕಾಂಗ್ರೆಸ್‌ ಬ್ರಹ್ಮಾಸ್ತ್ರವನ್ನಾಗಿ ಬಳಸಿ ವಿಜಯಿಯಾಗಿತ್ತು .

ಕರ್ನೂಲಿಗೆ 30 ಕಿಮೀ ದೂರದಲ್ಲಿರುವ ಸೋಮಯಾಜಲುಪಲ್ಲಿ ಗ್ರಾಮಕ್ಕೆ ಪ್ರಧಾನಿ ಭೇಟಿ ನೀಡಿದಾಗ, ಅವರನ್ನು ಸ್ವಾಗತಿಸಿದ್ದು ನತದೃಷ್ಟ ರೈತ ಕುಟುಂಬಗಳ ರೋದನದ ಕಥೆಗಳು. ರೈತ ಮಹಿಳೆಯರನ್ನು ಸಂತೈಸುವುದರಲ್ಲಿಯೇ ಪ್ರಧಾನಿ ಬಹುವೇಳೆ ಕಳೆದರು. ಮಹಿಳೆಯರಿಗೆ ರಾಜ್ಯ ಸರ್ಕಾರ ನೀಡಿದ ಪರಿಹಾರ ಧನದ ಚೆಕ್ಕುಗಳನ್ನು ಅವರು ವಿತರಿಸಿದರು. ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ ರೆಡ್ಡಿ ಈ ಸಂದರ್ಭದಲ್ಲಿ ಪ್ರಧಾನಿಯಾಂದಿಗೆ ಹಾಜರಿದ್ದರು.

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಓರ್ವ ವ್ಯಕ್ತಿಗೆ ಸರ್ಕಾರಿ ಕೆಲಸ ನೀಡುವಂತೆ, ಸಂತ್ರಸ್ತ ಕುಟುಂಬಗಳಿಗೆ ಸೂರು ಕಲ್ಪಿಸುವಂತೆ, ಪರಿಹಾರ ನೀಡುವಂತೆ- ಮುಂತಾಗಿ ಅನೇಕ ಅಹವಾಲುಗಳು ಪ್ರಧಾನಿಯವರನ್ನು ತಲುಪಿದವು. ರೈತರಿಗೆ ನೆರವು ನೀಡುವುದಾಗಿ ಮನಮೋಹನ್‌ಸಿಂಗ್‌ ಭರವಸೆ ನೀಡಿದರು.

ಆಂಧ್ರಕ್ಕೆ ಬಂದ ಪ್ರಧಾನಿ ಮನಮೋಹನ್‌ಸಿಂಗ್‌ ಕರ್ನಾಟಕಕ್ಕೆ ಬರುವುದು ಯಾವಾಗ ? ಇಲ್ಲೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ? ರೈತ ವಿಧವೆಯರ, ಕುಟುಂಬದ ಸದಸ್ಯರ ಕಣ್ಣೀರು ಇನ್ನೂ ಒದ್ದೆಯಾಗಿಯೇ ಇದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X