ಪ್ರಕೃತಿ ಜೊತೆ ಸಂಭಾಷಣೆ: ದೈಸಾಕು ಇಕಿಡಾರ ಛಾಯಚಿತ್ರ ಪ್ರದರ್ಶನ
ಪ್ರಕೃತಿ ಜೊತೆ ಸಂಭಾಷಣೆ: ದೈಸಾಕು ಇಕಿಡಾರ ಛಾಯಚಿತ್ರ ಪ್ರದರ್ಶನ
ಚಿತ್ರಕಲಾ ಪರಿಷತ್‌ನಲ್ಲಿ ಜೂನ್ 12ರಿಂದ 20ರವರೆಗೆ ಪ್ರದರ್ಶನ
ಚಿತ್ರಕಲಾ ಪರಿಷತ್ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಜೂನ್12ರ ಸಂಜೆ 4 ಗಂಟೆಗೆ ಪ್ರದರ್ಶನದ ಉದ್ಘಾಟನೆ ಮಾಡಲಿದ್ದಾರೆ.
1988ರಲ್ಲಿ ಪ್ಯಾರಿಸ್‌ನಲ್ಲಿ ಆರಂಭವಾದ ಈ ಛಾಯಾಚಿತ್ರ ಪ್ರದರ್ಶನ ವಿಶ್ವದ 33ದೇಶಗಳ 73 ನಗರಗಳನ್ನು ಸುತ್ತಿದೆ. ಸುಮಾರು 7.5 ಮಿಲಿಯ ಜನರು ಈ ಪ್ರದರ್ಶನವನ್ನು ವೀಕ್ಷಿಸಿದ್ದಾರೆ ಎಂದು ಈ ಕಾರ್ಯಕ್ರಮ ಆಯೋಜಿಸಿದ ‘ಭಾರತ ಸೋಕಾ ಗಕ್ಕೈ ಸಂಸ್ಥೆ’ಯ ಸದಸ್ಯರು ತಿಳಿಸಿದ್ದಾರೆ.
ಡಾ.ದೈಸಾಕು ಇಕಿಡಾ
ಜಪಾನ್ ಮೂಲದ ಇಕಿಡಾ ಚಿಂತಕ, ಛಾಯಾಚಿತ್ರಗಾರ, ಶಿಕ್ಷಕ, ಹೋರಾಟಗಾರ. ಅವರು ಮಾನವಕುಲದ ಉದ್ಧಾರ ಮತ್ತು ಶಾಂತಿಗಾಗಿ ಹೋರಾಟ ನಡೆಸುತ್ತಿರುವವರು. ಎರಡನೇ ಮಹಾಯುದ್ಧದ ಸಾವುನೋವುಗಳಿಂದ ನೊಂದ ಇಕಿಡಾ ಮಾನವೀಯ ಸಂಸ್ಕೃತಿಯ ಪ್ರತಿಪಾದಕರಾದರು. ಮನುಷ್ಯ ಮನುಷ್ಯನನ್ನು ಪ್ರೀತಿಯಿಂದ ಗೆಲ್ಲಬೇಕೆಂಬುದು ಅವರ ತತ್ವ.
ಈ ಬೌದ್ಧ ಪ್ರಚಾರಕರ ಸಮಾಜ ಸೇವೆಯನ್ನು ಪರಿಗಣಿಸಿ 200 ದೇಶಗಳು ಗೌರವ ಪೌರತ್ವ ನೀಡಿವೆ. 150 ಗೌರವ ಡಾಕ್ಟರೇಟುಗಳು ಲಭಿಸಿವೆ. ಇಕಿಡಾ ಈಗ ‘ಅಂತರಾಷ್ಟ್ರೀಯ ಸೋಕಾ ಗಕ್ಕಾಯಿ’ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ. ಅವರ ದೃಷ್ಟಿಯಲ್ಲಿ ‘ಛಾಯ ಗ್ರಹಣದ ಉದ್ದೇಶ ಪ್ರಕೃತಿಯ ಸತ್ಯ ಮತ್ತು ಸೌಂದರ್ಯದ ಪ್ರಶಂಸೆ’.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications