ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯಸ್ಸಿನಲ್ಲಿ ಭಾರತೀಯರೇ ಗಟ್ಟಿಗರು ; ಇವರನ್ನು ಮೀರಿಸುವವರಿನ್ಯಾರು ?

By Staff
|
Google Oneindia Kannada News

ಆಯಸ್ಸಿನಲ್ಲಿ ಭಾರತೀಯರೇ ಗಟ್ಟಿಗರು ; ಇವರನ್ನು ಮೀರಿಸುವವರಿನ್ಯಾರು ?
ಕ್ಯಾಲಿಫೊರ್ನಿಯಾ ಭಾರತೀಯ ಸಂಜಾತರ ಜೀವಿತಾವಧಿ ಸ್ಥಳೀಯರಿಗಿಂತ ಆರು ವರ್ಷಅಧಿಕವಾಗಿದೆ

ಸಿಲಿಕಾನ್‌ವ್ಯಾಲಿ: ಕ್ಯಾಲಿಫೊರ್ನಿಯಾ ಅಮೇರಿಕಾದ ಒಂದು ಪ್ರಮುಖ ಪಟ್ಟಣ. ಅಲ್ಲಿ ಅತಿ ಹೆಚ್ಚು ಸಮಯ ಬದುಕುವುದು ಯಾರು ಗೊತ್ತೇ? ಭಾರತೀಯ ಸಂಜಾತರು.

ಕ್ಯಾಲಿಫೆೋರ್ನಿಯಾದಲ್ಲಿ ಭಾರತೀಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಭಾರತೀಯ ಸಂಜಾತರ ಜೀವಿತಾವಧಿ ಸ್ಥಳೀಯರಿಗಿಂತ ಆರು ವರ್ಷಅಧಿಕವಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಏಷ್ಯಾ ಮೂಲದ ಎಲ್ಲಾ ಸಂಜಾತರ ಸರಾಸರಿ ಜೀವಿತಾವಯೂ ಅಮೇರಿಕನ್‌ರಿಗಿಂತ ಹೆಚ್ಚಾಗಿದೆ.

ಪಿ.ಪಿ.ಐ.ಸಿ. (Public Policy Institute of California) ನಡೆಸಿದ ಕ್ಯಾಲಿಫೋರ್ನಿಯಾ ನಿವಾಸಿಗಳ ಮರ್ತ್ಯತೆ ಪ್ರಮಾಣ ಅಧ್ಯಯನದಿಂದ ಈ ಅಂಶ ತಿಳಿದು ಬಂದಿದೆ. ಅಮೇರಿಕಾ ಮೂಲದ ನಿವಾಸಿಗಳು 77.4ವರ್ಷ ಜೀವಿಸಿದರೆ ಭಾರತೀಯ ಸಂಜಾತರು 84.3 ವರ್ಷಗಳ ಕಾಲ ಜೀವಿಸುತ್ತಾರೆ. ಉಳಿದಂತೆ ಸರಾಸರಿ, ವಿಯೆಟ್ನಾಂ 83.8 ವರ್ಷ, ಚೈನಾ-83.7ವರ್ಷ ಹಾಗೂ ಕೊರಿಯನ್‌ 83.2ವರ್ಷ ಬದುಕುತ್ತಾರೆ.

ಎಲ್ಲಾ ಜನಾಂಗದ ಮಹಿಳೆಯರು ಪುರುಷರಿಗಿಂತ ಹೆಚ್ಚುಕಾಲ ಬದುಕುತ್ತಾರೆ. ಭಾರತೀಯ ಸಂಜಾತ ಮಹಿಳೆ 88.1 ವರ್ಷ ಬದುಕಿದರೆ ಪುರುಷರು 81.5 ವರ್ಷಗಳ ಕಾಲ ಬದುಕುತ್ತಾರೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಅಧ್ಯಯನಕ್ಕೆ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ 19 ಜನಾಂಗವನ್ನು ಪರಿಗಣಿಸಲಾಗಿದೆ. 2000 ರದ ಜನಗಣತಿ ಮತ್ತು ಕ್ಯಾಲಿಫೋರ್ನಿಯಾ ಆರೋಗ್ಯ ಸೇವಾ ಇಲಾಖೆಯ ಮಾಹಿತಿ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ.

(ಪಿಟಿಐ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X