ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಮುನಾ ನದಿಯನ್ನು ಈಜಿದ 2 ವರ್ಷದ ಪುಟ್ಟ ಪೋರನ ದಿಟ್ಟ ಸಾಹಸ

By Staff
|
Google Oneindia Kannada News

ಯಮುನಾ ನದಿಯನ್ನು ಈಜಿದ 2 ವರ್ಷದ ಪುಟ್ಟ ಪೋರನ ದಿಟ್ಟ ಸಾಹಸ
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು :26 ನಿಮಿಷಗಳಲ್ಲಿ 600 ಫೂಟು ದೂರ ಈಜಿದ ಬಾಲಕ

ಅಲಹಾಬಾದ್‌: ಎರಡು ವರ್ಷದ ಪುಟ್ಟ ಬಾಲಕನು ಯಮುನಾ ನದಿಯನ್ನು ಈಜಿ ದಾಟುವುದರ ಮೂಲಕ ಎಲ್ಲರೂ ನಿಬ್ಬೆರಗಾಗುವಂತಹ ಇತಿಹಾಸವನ್ನೇ ಸಷ್ಠಿಸಿದ್ದಾನೆ. ಅವನ ಧೈರ್ಯ ಸಾಹಸವನ್ನು ಎಂಥವರೂ ಮೆಚ್ಚಲೇಬೇಕು.

ಪುಟ್ಟ ಸಾಹಸಿ ಬಾಲಕನ ಹೆಸರು ಮಾನಸ್‌. ಜೂನ್‌ 6ರ ಮುಂಜಾನೆಯ ನಸುಕಿನಲ್ಲಿ ಈತನ ಸಾಹಸ ಪ್ರದರ್ಶನ ಪ್ರಾರಂಭವಾಯ್ತು. ಸುಮಾರು ಯಮನಾ ನದಿಯಲ್ಲಿ 600 ಫೂಟುಗಳಷ್ಟು ದೂರವನ್ನು ಈ ಬಾಲಕ 26 ನಿಮಿಷಗಳಲ್ಲಿ ಈಜಿ ಕ್ರಮಿಸಿದ್ದಾನೆ. ಇವನ ಈ ಸಾಹಸವನ್ನು ನೋೕಡಲು ಸಾವಿರಾರು ಕ್ರೀಡಾ ಪ್ರೇಮಿಗಳು ಕಕ್ರಾಹ ಘಾಟ್‌ ಬಳಿ, ಯಮುನಾ ನದಿ ತೀರದ ಸುತ್ತಲೂ ನೆರೆದಿದ್ದರು.

ಭಾರತದಲ್ಲಿ, ಇಷ್ಟು ಚಿಕ್ಕ ವಯಸ್ಸಿನ ಬಾಲಕ ಅಷ್ಟು ವಿಶಾಲ ನದಿಯನ್ನು ಈಜಿರುವುದು ಇದೇ ಮೊದಲಾಗಿದೆ.

ಮಾನಸ್‌, ಲಿಮ್ಕಾ ರೆಕಾರ್ಡ್‌ ಬುಕ್‌ನಲ್ಲಿ ದಾಖಲೆ ಮಾಡಿರುವ ಚಿರಪರಿಚಿತ ಈಜುಗಾರ ತರುಣ ನಿಶಾದ್‌ನ ಕಿರಿಯ ಸಹೋದರನಾಗಿದ್ದಾನೆ. ಅಲಹಬಾದ್‌ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿ.ಕೆ. ಚತುರ್ವೇದಿ ಅವರು ಬಾಲಕ ಮಾನಸ್‌ಗೆ ಪ್ರಶಸ್ತಿ ವಿತರಿಸಿದರು. ಈ ಕಾರ್ಯಕ್ರಮವನ್ನು ನವಜೀವನ ಸ್ವಿಮ್ಮಿಂಗ್‌ ಕ್ಲಬ್‌ ಮತ್ತು ರೊಟರಿ ಕ್ಲಬ್‌ಗಳ ಸಹಯಾಗದೊಂದಿಗೆ ಏರ್ಪಡಿಸಲಾಗಿತ್ತು.

(ಏಜನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X