ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿವಿ ಪದವಿ ತರಗತಿಗೆ ಈ ಬಾರಿಯಿಂದ ಸೆಮಿಸ್ಟರ್‌ ಪದ್ಧತಿ

By Staff
|
Google Oneindia Kannada News

ಬೆಂಗಳೂರು ವಿವಿ ಪದವಿ ತರಗತಿಗೆ ಈ ಬಾರಿಯಿಂದ ಸೆಮಿಸ್ಟರ್‌ ಪದ್ಧತಿ
ಸಂವಿಧಾನ, ಗಣಕ ಯಂತ್ರ ಮತ್ತು ಪರಿಸರ - ಕಡ್ಡಾಯ ಪಠ್ಯ

ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯವು 2004-2005ರ ಶೈಕ್ಷಣಿಕ ವರ್ಷದಿಂದ ಪದವಿ ತರಗತಿಗಳಿಗೆ ಸೆಮಿಸ್ಟರ್‌ ಪದ್ಧತಿ ಅಳವಡಿಸಲು ನಿರ್ಧರಿಸಿದೆ.

ಬಿ.ಎ. , ಬಿ.ಎಸ್‌ಸಿ. ಹಾಗೂ ಬಿ.ಕಾಂ. ಪದವಿ ತರಗತಿಗಳಿಗೆ ಸೆಮಿಸ್ಟರ್‌ ಪದ್ಧತಿಯನ್ನು ಮುಂಬರುವ ಶೈಕ್ಷಣಿಕ ವರ್ಷದಿಂದ ಅಳವಡಿಸಲು ಬೆಂಗಳೂರು ನಿರ್ಧರಿಸಿದೆ. ಹೊಸ ಸೆಮಿಸ್ಟರ್‌ ಪದ್ಧತಿಯ ಪ್ರಕಾರ ಪದವಿ ತರಗತಿಯಲ್ಲಿ ವಿದ್ಯಾರ್ಥಿಗಳು ಭಾರತೀಯ ಸಂವಿಧಾನ, ಗಣಕಯಂತ್ರದ ಪ್ರಾಥಮಿಕ ಮಾಹಿತಿಗಳು ಮತ್ತು ಪರಿಸರ ಅಧ್ಯಯನ ಈ ಮೂರು ವಿಷಯಗಳನ್ನೂ ಕಡ್ಡಾಯವಾಗಿ ಅಭ್ಯಸಿಸಬೇಕು. ಇದರೊಂದಿಗೆ ಭಾಷಾ ವಿಷಯ, ಐಚ್ಛಿಕ ವಿಷಯಗಳಿರುತ್ತವೆ. ಭಾರತೀಯ ಸಂವಿಧಾನ, ಗಣಕಯಂತ್ರ ಪ್ರಾಥಮಿಕ ಮಾಹಿತಿ ವಿಷಯಗಳನ್ನು ಮೂರು ಮತ್ತು ನಾಲ್ಕನೇ ಸೆಮಿಸ್ಟರ್‌ನಲ್ಲಿ ಪರಿಚಯಿಸಲಾಗುವುದು.

ಬೆಂಗಳೂರು ವಿಶ್ವ ವಿದ್ಯಾಲಯವು ಏಪ್ರಿಲ್‌ 28ರಂದು ನಡೆದ ಶಿಕ್ಷಣ ಮಂಡಳಿಯ ಸಭೆಯಲ್ಲಿ ಸೆಮಿಸ್ಟರ್‌ ಪದ್ಧತಿಯನ್ನು ಅಂಗೀಕರಿಸಿತು. ಭಾರತೀಯ ಸಂವಿಧಾನ ವಿಷಯವನ್ನು ಪದವಿ ಪಠ್ಯದಲ್ಲಿ ಅಳವಡಿಸುವ ನಿರ್ಧಾರವನ್ನು ಅಂತರ್‌ ವಿಶ್ವ ವಿದ್ಯಾಲಯಗಳ ಮಂಡಳಿಯಲ್ಲಿ ಸಮಾಲೋಚನೆ ನಡೆಸಿ ನಿರ್ಧರಿಸಲಾಗಿದೆ ಎಂದು ಉಪ ಕುಲಪತಿಗಳಾದ ಎಂ. ಎಸ್‌. ತಿಮ್ಮಪ್ಪ ಸುದ್ದಿಗಾರರಿಗೆ ತಿಳಿಸಿದರು.

ಪ್ರಸ್ತುತ ಇರುವಂತೆ ಮೂರು ಐಚ್ಛಿಕ ವಿಷಯ ಮತ್ತು ಭಾಷಾ ವಿಷಯಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವಾರ್ಷಿಕವಾಗಿ ನಡೆಯುತ್ತಿದ್ದ ಕೋರ್ಸುಗಳನ್ನು ಕರೆಸ್ಪಾಂಡೆಂಟ್‌ ಮತ್ತು ಸಂಜೆ ಕಾಲೇಜುಗಳಾಗಿ ಮುಂದುವರಿಸಲಾಗುವುದು ಎಂದು ತಿಮ್ಮಪ್ಪ ತಿಳಿಸಿದರು.

ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮುನ್ನ ಉಪನ್ಯಾಸಕರುಗಳಿಗೆ ಸೂಕ್ತ ತರಬೇತಿ ನೀಡಲಾಗುವುದು ಮತ್ತು ಹೊಸ ಪಠ್ಯಗಳನ್ನು ಸೆಮಿಸ್ಟರ್‌ ಪದ್ಧತಿಯ ಬೋಧನಾ ಕ್ರಮಗಳಲ್ಲಿ ಸಿದ್ಧಗೊಳಿಸಲಾಗುವುದು. ಇದರಿಂದ ಕಡಿಮೆ ಅವಧಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ವಿಷಯಗಳನ್ನು ತಿಳಿಯುವಲ್ಲಿ ಅನುಕೂಲವಾಗಿ ಉತ್ತಮ ಫಲಿತಾಂಶ ಬರುವಲ್ಲಿ ಯಶಸ್ವಿಯಾಗಬಹುದು ಎಂದು ತಿಮ್ಮಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X