ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 13ಲೋಕಸಭೆ, 104ವಿಧಾನಸಭೆ ಕ್ಷೇತ್ರದ ಮತದಾನ ಆರಂಭ

By Staff
|
Google Oneindia Kannada News

ರಾಜ್ಯದ 13ಲೋಕಸಭೆ, 104ವಿಧಾನಸಭೆ ಕ್ಷೇತ್ರದ ಮತದಾನ ಆರಂಭ
ವೋಟು ಚಲಾಯಿಸಲಿರುವ 1.59 ಕೋಟಿ ಮತದಾರರು

ಬೆಂಗಳೂರು : ಬಿಗಿ ಭದ್ರತೆಯ ನಡುವೆ ರಾಜ್ಯದಲ್ಲಿನ ಎರಡನೇ ಹಾಗೂ ಅಂತಿಮ ಹಂತದ ಮತದಾನ (ಸೋಮವಾರ, ಏ.26) ಪ್ರಾರಂಭವಾಗಿದೆ. ರಾಜ್ಯದ 13 ಲೋಕಸಭೆ ಹಾಗೂ 104 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯಿಲಿ ಹಾಗೂ ಬಂಗಾರಪ್ಪ, ನಟ ಅಂಬರೀಷ್‌, ರಾಜ ಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸೇರಿದಂತೆ ಅನೇಕ ಘಟಾನುಘಟಿಗಳ ರಾಜಕೀಯ ಭವಿಷ್ಯವನ್ನು ರಾಜ್ಯದ ಮತದಾರರು ಸೋಮವಾರ ಮತಯಂತ್ರದಲ್ಲಿ ದಾಖಲಿಸುತ್ತಿದ್ದಾರೆ.

ಮೊದಲ ಹಂತದ ಮತದಾನದಲ್ಲಿ ವ್ಯಾಪಕ ಹಿಂಸಾಚಾರ ನಡೆದ ಕಾರಣ, ಈ ಬಾರಿ ಎಲ್ಲ ಕ್ಷೇತ್ರಗಳಲ್ಲೂ ಬಿಗಿ ಭದ್ರತೆ ಮಾಡಲಾಗಿದೆ. ಶಾಂತಿಪಾಲನೆ ಕರ್ತವ್ಯದಲ್ಲಿ 38 ಸಾವಿರಕ್ಕೂ ಹೆಚ್ಚು ಪೊಲೀಸರು ಭಾಗವಹಿಸಿದ್ದಾರೆ. ಬೆಳಗ್ಗೆ 7ಕ್ಕೆ ಪ್ರಾರಂಭವಾಗಿರುವ ಮತದಾನ ಸಂಜೆ 5ರವರೆಗೂ ನಡೆಯುವುದು.

ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ ದಕ್ಷಿಣ, ಧಾರವಾಡ ಉತ್ತರ, ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಇದೇ ವೇಳೆಯಲ್ಲಿ 11 ರಾಜ್ಯಗಳ 136 ಲೋಕಸಭಾ ಕ್ಷೇತ್ರಗಳ ಮತದಾನವೂ ನಡೆಯುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X