Get Updates
Get notified of breaking news, exclusive insights, and must-see stories!

ವಾಟಾಳ್‌ : ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯ

ವಾಟಾಳ್‌ : ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯ
ಇದು ಏಕ ಚಕ್ರಾಧಿಪತ್ಯದ ವರ್ಣರಂಜಿತ ಕಥೆ. ಆ ಪಕ್ಷಕ್ಕೆ ಆತನೇ ಅಧ್ಯಕ್ಷ. ಪದಾಧಿಕಾರಿ. ಅಷ್ಟೇ ಅಲ್ಲದೇ ಕಾರ್ಯಕರ್ತನೂ ಹೌದು.

  • ಕುಂದೂರು ಉಮೇಶ್‌ ಭಟ್ಟ
ಮೈಸೂರು : ಕಪ್ಪು ಟೋಪಿ, ಕನ್ನಡಕಧಾರಿ ಇವರ ಐಡೆಂಟಿಟಿ. ಇವುಗಳನ್ನು ಸಾರ್ವಜನಿಕವಾಗಿ ಒಮ್ಮೆಯೂ ತೆಗೆದ ಉದಾಹರಣೆ ಇಲ್ಲ. ಇಷ್ಟರ ಮಟ್ಟಿಗೆ ಇವೆರಡೂ ಅವರ ಸಂಗಾತಿಗಳು.

ಇದು ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಸಂಕ್ಷಿಪ್ತ ಪರಿಚಯ.

ಚಾಮರಾಜನಗರದಲ್ಲಿ ಕತ್ತೆ ಮೆರವಣಿಗೆಯೋ, ತಮಟೆ ಚಳವಳಿಯೋ ನಡೆದಿದೆ ಎಂದರೆ ವಾಟಾಳ್‌ ಬಂದಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿ ಬಿಡುತ್ತದೆ.

ಮೂರ್ನಾಲ್ಕು ಬಸ್ಸುಗಳಲ್ಲಿ ಒಂದಿಷ್ಟು ಜನರನ್ನು ಸೇರಿಸಿಕೊಂಡು ಬೆಂಗಳೂರಿನಿಂದ ಬೆಳಗ್ಗೆ ಚಳವಳಿ ಆರಂಭ. ಮಂಡ್ಯ-ಮೈಸೂರು-ತಿ ನರಸೀಪುರದಲ್ಲಿ ಮುಂದುವರಿಸಿ ಸಂಜೆ ಚಾಮರಾಜನಗರದಲ್ಲಿ ಆರ್ಭಟದ ಮುಕ್ತಾಯ. ಜಿಲ್ಲಾಧಿಕಾರಿ ಇಲ್ಲವೇ ತಾಲೂಕು ಕಚೇರಿ ಎದುರು ಕಪ್ಪು ಬಟ್ಟೆ ಪ್ರದರ್ಶನ, ತಾವೇ ಕರೆದು ತಂದ (!) ನೂರಾರು ಪ್ರತಿಭಟನಾಕಾರರ ಎದುರು ಒಂದಿಷ್ಟು ಭಾಷಣ.

ಹೋರಾಟದ ಮನರಂಜನೆ: ಚುನಾವಣೆ ಬಂತೆಂದರೆ ವಾಟಾಳ್‌ರಿಂದ ಇಂಥ ಹೋರಾಟಗಳು ಆರಂಭವಾಗುತ್ತವೆ. ಇದು ಇಲ್ಲಿನ ಜನರಿಗೆ ಮನರಂಜನೆಯೂ ಹೌದು.

ವಾಟಾಳ್‌ ಪಕ್ಷ ಅಸ್ತಿತ್ವಕ್ಕೆ ಬಂದು ಕಾಲು ಶತಮಾನವೇ ಕಳೆಯುತ್ತಾ ಬಂದರೂ ಅದಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಿಲ್ಲ ! ಇನ್ನು ನವೆಂಬರ್‌ ತಿಂಗಳಲ್ಲಿ ಒಂದೆರಡು ಕನ್ನಡ ಪರ ಹೋರಾಟಗಳು ಮಾತ್ರ ವಾಟಾಳ್‌ರಿಂದ ನಿರಂತರವಾಗಿ ನಡೆಯುತ್ತಾ ಬಂದಿವೆ.

ಬೆಂಗಳೂರಿಗ : ಅಧಿಕಾರಸ್ಥ ರಾಜಕಾರಣಿಗಳಿಗೆ ಚಾಮರಾಜನಗರ ಕ್ಷೇತ್ರ ಸಿಂಹಸ್ವಪ್ನ. ವಾಟಾಳ್‌ ನಾಗರಾಜ್‌ ಇಲ್ಲಿಂದ 2 ಬಾರಿ ಗೆದ್ದು ಬಂದಿದ್ದಾರೆ. 3 ಬಾರಿ ಸೋತಿದ್ದಾರೆ.

ಹಾಗೆ ನೋಡಿದರೆ ನಾಗರಾಜ್‌ ಮೈಸೂರು ಜಿಲ್ಲೆ ತಿ. ನರಸೀಪುರ ತಾಲೂಕಿನ ವಾಟಾಳ್‌ ಗ್ರಾಮದವರು. ಬಹಳ ವರ್ಷಗಳ ಹಿಂದೆಯೇ ಬೆಂಗಳೂರು ಸೇರಿದ್ದಾರೆ.

ಸಣ್ಣಪುಟ್ಟ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದ ವಾಟಾಳ್‌ ತಮ್ಮದೇ ಪಕ್ಷ ಸ್ಥಾಪಿಸಿದರು. 1983 ರಲ್ಲಿ ಚಾಮರಾಜನಗರದಿಂದ ಸ್ಪರ್ಧಿಸಿ ಸೋತರು. ನಂತರ 1985 ರಲ್ಲೂ ಸೋತರು. ಆದರೆ 1989 ರಲ್ಲಿ ಅದೃಷ್ಟ ಖುಲಾಯಿಸಿತು. 1994 ರಲ್ಲೂ ಪುನರಾಯ್ಕೆಯಾದರು. 1999 ರಲ್ಲಿ ಬೆಂಗಳೂರು ಹಾಗೂ ಚಾಮರಾಜನಗರ 2 ಕಡೆ ಸ್ಪರ್ಧಿಸಿ ಸೋತರು. ಮೈಸೂರಿನಲ್ಲಿ ಪ್ರಮುಖ ಪಕ್ಷಗಳಿಂದ ಬಂಡಾಯವೇಳುವ ಕೆಲವರು ಈ ಪಕ್ಷದ ಅಭ್ಯರ್ಥಿಗಳಾಗಿ ಮುಖಭಂಗ ಅನುಭವಿಸಿದ್ದಾರೆ.

ವಾಟಾಳ್‌ ಗೆದ್ದಿದ್ದು ಚಾಮರಾಜನಗರ ಕ್ಷೇತ್ರದಿಂದಾದರೂ ಅವರು ಶಾಸಕರಾಗಿದ್ದ 10 ವರ್ಷಗಳಲ್ಲಿ ಒಂದು ದಿನವೂ ಕ್ಷೇತ್ರದಲ್ಲಿ ಉಳಿಯಲಿಲ್ಲ. ಅವರು ಪಕ್ಕಾ ಬೆಂಗಳೂರಿಗ.

ಇನ್ನು ವಾಟಾಳ್‌ ಜನರನ್ನು ಪ್ರೀತಿಯಿಂದ ಕಂಡಿದ್ದಿಲ್ಲ. ಕಾರ್ಯಕರ್ತರನ್ನು ಹತ್ತಿರವೂ ಸೇರಿಸುವುದಿಲ್ಲ ಎಂಬ ಆರೋಪ ಇದೆ. ಅಭಿವೃದ್ಧಿ ವಿಚಾರದಲ್ಲಿ ಚಾಮರಾಜನಗರಕ್ಕೆ ತಿ. ನರಸೀಪುರದಿಂದ ಕಾವೇರಿ ನೀರು ಯೋಜನೆ ಜಾರಿ ಮಾಡಿದ್ದು ಅವರ ಮಹಾ ಸಾಧನೆ! ಇವೆಲ್ಲದರ ಮಧ್ಯೆ ವಾಟಾಳ್‌ ಕನ್ನಡಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಅವರ ಅನುಪಸ್ಥಿತಿ ಅಧಿವೇಶನಗಳಲ್ಲಿ ಎದ್ದು ಕಂಡಿದ್ದೂ ಇದೆ. ಅವರನ್ನು ಗಡಿನಾಡ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆಯೋಗದ ವರದಿ ನೀಡಿದರೂ ಅದು ಜಾರಿಗೆ ಬರಲೇ ಇಲ್ಲ. ಈಗ ವಾಟಾಳ್‌ ಅವರ ಒನ್‌ ಮ್ಯಾನ್‌ ಷೋ ಮತ್ತೆ ಕ್ಷೇತ್ರದಾದ್ಯಂತ ಆರಂಭವಾಗಿದೆ. ಚುನಾವಣೆಗೂ ನಾಲ್ಕು ತಿಂಗಳ ಮುಂಚೆಯೇ ಸಾಪ್ತಾಹಿಕ ಹೋರಾಟ ಆರಂಭಗೊಂಡಿತ್ತು. ಚುನಾವಣೆ ಸಮೀಪಿಸುತ್ತಿರುವುದರಿಂದ ವಾರದ ಹೋರಾಟಗಾರರಾಗಿದ್ದ ವಾಟಾಳ್‌ ಈಗ ಖನ್ನಡ ದ ಹೆಸರಲ್ಲಿ ಗ್ರಾಮೀಣ ಸಮಾವೇಶ ಆರಂಭಿಸಿದ್ದಾರೆ.

ಮುಖಪುಟ / ಕುರುಕ್ಷೇತ್ರ-2004

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+