ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಜಿಸ್ಟಿಕ್‌ನ ಬಿ ಎಂ ಟಿ ಸಿ ನಿಲ್ದಾಣ 2 ವರ್ಷಗಳಲ್ಲಿ ಪ್ರಕಾಶಿಸಲಿದೆ !

By Staff
|
Google Oneindia Kannada News

ಮೆಜಿಸ್ಟಿಕ್‌ನ ಬಿ ಎಂ ಟಿ ಸಿ ನಿಲ್ದಾಣ 2 ವರ್ಷಗಳಲ್ಲಿ ಪ್ರಕಾಶಿಸಲಿದೆ !
ಬಸ್‌ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆ ಮತ್ತು ಮಿನಿ ಥಿಯೇಟರ್‌

ಬೆಂಗಳೂರು : ಇತ್ತೀಚೆಗೆ ಕೆಂಪೇಗೌಡ (ಮೆಜೆಸ್ಟಿಕ್‌) ಬಸ್‌ ನಿಲ್ದಾಣಕ್ಕೆ ಹೋಗಿದ್ದೀರಾ? ನಿಮಿಷಕ್ಕೆ ಹತ್ತಾರು ಬಸ್ಸುಗಳು ್ಫಬಂದುಹೋಗುವ ಈ ಬಸ್‌ ನಿಲ್ದಾಣದ ರೂಪುರೇಷೆಯೇ ಇನ್ನೆರಡು ವರ್ಷಗಳಲ್ಲಿ ಬದಲಾಗಲಿದೆ. ನೀವು ಇಂದು ಕಾಣುವ ಬಸ್‌ ನಿಲ್ದಾಣದ ಸ್ಥಳದಲ್ಲಿ ಅತ್ಯಾಧುನಿಕ ಬಸ್‌ ನಿಲ್ದಾಣ ಹಾಗೂ ಮಳಿಗೆಗಳು ರೂಪುಗೊಳ್ಳಲಿವೆ. ಕೆಲಸ ಈಗಾಗಲೇ ಪ್ರಗತಿಯಲ್ಲಿದೆ.ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ (ಕೆಎಸ್‌ಆರ್‌ಟಿಸಿ ಅಲ್ಲ , ಬಿಎಂಟಿಸಿ) ಏನೇನು ಆಗಲಿದೆ :
  • ನಾಲ್ಕಂತಸ್ತಿನ ಬೃಹತ್‌ ಕಟ್ಟಡ ಎದ್ದು ನಿಲ್ಲಲಿದೆ. ಕಟ್ಟಡದ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ.
  • ಮೆಜೆಸ್ಟಿಕ್‌ಗೆ ಶಾಪಿಂಗ್‌ಗೆ ಹೋದರೆ ಜನತಾ ಬಜಾರಿಗೋ ನ್ಯಾಶನಲ್‌ ಮಾರ್ಕೆಟ್‌ಗೋ ಹೋಗಬೇಕಿಲ್ಲ. ಸಂಪೂರ್ಣ ನವೀಕೃತ ಮಾದರಿಯ ಕಟ್ಟಡ, ಹವಾ ನಿಯಂತ್ರಿತ ಮಳಿಗೆಗಳು ಬಿಎಂಟಿಸಿ ಕಟ್ಟಡ ಸಮುಚ್ಛಯದಲ್ಲಿ ಇರಲಿವೆ.
  • 250 ಆಸನಗಳ ಮಿನಿ ಚಿತ್ರಮಂದಿರ ರೂಪುಗೊಳ್ಳಲಿದೆ.
  • ನೂತನ ಮಾದರಿಯ ವಿಶ್ರಾಂತಿಗೃಹ(800 ಆಸನಗಳು) ಮತ್ತು ಆಧುನಿಕ ಶೌಚಾಲಯಗಳು ಪ್ರಯಾಣಿಕರ ಅನುಕೂಲಕ್ಕೆ ಒದಗಲಿವೆ.
ಇದೆಲ್ಲ ಕಾಮಗಾರಿಗಳ ಹಿಂದೆ ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಆರ್‌.ವಿ. ದೇವರಾಜ್‌.

ಈಗಿರುವ ಬಿಎಂಟಿಸಿ ಬಸ್‌ನಿಲ್ದಾಣವನ್ನು ಕೆಡವಿ ಸಂಪೂರ್ಣವಾಗಿ ಪುನರ್‌ ನಿರ್ಮಿಸುವ ಯೋಜನೆಯೂ ಇದೆ. ಬಿಎಂಟಿಸಿ ಪ್ರಕಾಶಿಸುತ್ತಿದೆ !

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X