ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಯುಕ್ತದಳ ಜಾರ್ಜ್‌ ಫರ್ನಾಂಡಿಸ್‌ ರಕ್ಷಣೆಯಲ್ಲಿ ಪ್ರಗತಿಪರರು

By Staff
|
Google Oneindia Kannada News

ಸಂಯುಕ್ತದಳ ಜಾರ್ಜ್‌ ಫರ್ನಾಂಡಿಸ್‌ ರಕ್ಷಣೆಯಲ್ಲಿ ಪ್ರಗತಿಪರರು
ಬಿಜೆಪಿ ಜೊತೆ ಹೊಂದಾಣಿಕೆ ಕುರಿತು ಬೊಮ್ಮಾಯಿ ಆಶಾಭಾವನೆ

ಬೆಂಗಳೂರು : ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರ ಸಂಯುಕ್ತ ಜನತಾದಳದಲ್ಲಿ ವಿಲೀನ ಹೊಂದಲು ಪ್ರಗತಿ ಪರ ಜನತಾದಳ ನಿರ್ಧರಿಸಿದೆ.

ಚುನಾವಣೆಗಳ ನಂತರ ಸಂಯುಕ್ತ ದಳದೊಂದಿಗೆ ವಿಲೀನ ಹೊಂದಲಾಗುವುದು. ಆದರೆ ಪ್ರಸಕ್ತ ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಸಂಯುಕ್ತ ಜನತಾದಳದ ಬಾಣದ ಗುರುತಿನಲ್ಲಿಯೇ ಪ್ರಗತಿಪರ ಜನತಾದಳದ ಸದಸ್ಯರು ಸ್ಪರ್ಧಿಸಲಿದ್ದಾರೆ. ಈ ವಿಷಯವನ್ನು ಪ್ರಗತಿಪರ ಜನತಾದಳದ ರಾಷ್ಟ್ರಾಧ್ಯಕ್ಷ ಎಸ್‌.ಆರ್‌.ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಜೊತೆ ಸ್ನಾ ಹೊಂದಾಣಿಕೆ ಮಾತುಕತೆ ಇನ್ನೂ ಜೀವಂತವಾಗಿದೆ. ಈ ಕುರಿತು ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಮಾ.15 ಹಾಗೂ 16ರಂದು ಪ್ರಧಾನಿ ವಾಜಪೇಯಿ ಅವರೊಂದಿಗೆ ಚರ್ಚಿಸುವರು ಎಂದು ಬೊಮ್ಮಾಯಿ ಹೇಳದರು.

ಕಳೆದ ಚುನಾವಣೆಗಳಲ್ಲಿ ಬಿಟ್ಟುಕೊಟ್ಟಂತೆ ಈ ಬಾರಿಯೂ 95 ವಿಧಾನಸಭೆ ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಡುವ ಕುರಿತು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಹೊಂದಾಣಿಕೆ ಸಾಧ್ಯವಾದಲ್ಲಿ , 95 ಸ್ಥಾನಗಳ ಪೈಕಿ ಪ್ರಗತಿಪರ ದಳ 50 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉಳಿದ ಸ್ಥಾನಗಳನ್ನು ಸಂಯುಕ್ತ ಜನತಾದಳಕ್ಕೆ ಬಿಟ್ಟುಕೊಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ರೈತಸಂಘ ಹಾಗೂ ಕನ್ನ ಚಳವಳಿ ಪಕ್ಷಗಳೊಂದಿಗೆ ಚುನಾವಣೆ ಮೈತ್ರಿ ಮಾಡಿಕೊಳ್ಳುವುದಾಗಿಯೂ ಬೊಮ್ಮಾಯಿ ಹೇಳಿದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕುಟುಂಬದ ಸದಸ್ಯರು ಬಿಜೆಪಿಗೆ ಸಸೇರ್ಪಡೆಯಾಗಿರುವ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X