ಮಲ್ಯ ಪಕ್ಷದಿಂದ ಶಿವಮೊಗ್ಗ ಕುರುಕ್ಷೇತ್ರಕಣಕ್ಕೆ ಹಾಸ್ಯನಟ ದೊಡ್ಡಣ್ಣ

ಮಲ್ಯ ಪಕ್ಷದಿಂದ ಶಿವಮೊಗ್ಗ ಕುರುಕ್ಷೇತ್ರಕಣಕ್ಕೆ ಹಾಸ್ಯನಟ ದೊಡ್ಡಣ್ಣ
ಮಾರ್ಚ್‌ 16ರೊಳಗೆ ಜನತಾ ಪಕ್ಷದ ಅಭ್ಯರ್ಥಿಗಳ ಪಟ್ಟಿ ರೆಡಿ

ಬೆಂಗಳೂರು: ಪ್ರತಿಷ್ಠಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ವಿಜಯ್‌ ಮಲ್ಯ ನೇತೃತ್ವದ ಜನತಾ ಪಕ್ಷದ ಅಭ್ಯರ್ಥಿಯಾಗಿ ಜನಪ್ರಿಯ ಹಾಸ್ಯನಟ ದೊಡ್ಡಣ್ಣ ಸ್ಪರ್ಧಿಸಲಿದ್ದಾರೆ.

ಬಿಜೆಪಿಯಿಂದ ಬಂಗಾರಪ್ಪ ಹಾಗೂ ಕಾಂಗ್ರೆಸ್‌ನಿಂದ ಆಯನೂರು ಮಂಜುನಾಥ್‌ ಸ್ಪರ್ಧಿಸುತ್ತಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ, ತನ್ನ ಅಭ್ಯರ್ಥಿಯನ್ನಾಗಿ ದೊಡ್ಡಣ್ಣನವರ ಹೆಸರನ್ನು ಜನತಾ ಪಕ್ಷ ಗುರುವಾರ ಪ್ರಕಟಿಸಿತು. ಪಕ್ಷದ ಅಧ್ಯಕ್ಷ ವಿಜಯ್‌ ಮಲ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಇತ್ತೀಚೆಗಷ್ಟೇ ಜನತಾ ಪಕ್ಷವನ್ನು ತೊರೆದು ಕಾಂಗ್ರೆಸ್‌ ಸೇರಿದ ಆಯನೂರು ಮಂಜುನಾಥ್‌ ಅವರ ನಡಾವಳಿಯ ಕುರಿತು ವಿಜಯ್‌ ಮಲ್ಯ ತೀವ್ರ ಆಸಮಾಧಾನ ವ್ಯಕ್ತಪಡಿಸಿದರು. ಆಯನೂರು ಮಂಜುನಾಥ್‌ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು.

ಆಯನೂರು ಮಂಜುನಾಥ್‌ ಹಾಗೂ ಬಂಗಾರಪ್ಪನವರ ತುರುಸಿನ ಸ್ಪರ್ಧೆಯಲ್ಲಿ ದೊಡ್ಡಣ್ಣ ಗೆಲ್ಲುವ ಕುರಿತು ವಿಜಯ್‌ ಮಲ್ಯ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಅಭ್ಯರ್ಥಿಯನ್ನು ಡಾರ್ಕ್‌ ಹಾರ್ಸ್‌ ಎಂದು ಮಲ್ಯ ಬಣ್ಣಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+