ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯಾದ ಭ್ರಷ್ಟದೇಶಗಳಲ್ಲಿ ಪ್ರಕಾಶಮಾನ ಭಾರತಕ್ಕೆ 2ನೇ ರ್ಯಾಂಕು

By Staff
|
Google Oneindia Kannada News

ಏಷ್ಯಾದ ಭ್ರಷ್ಟದೇಶಗಳಲ್ಲಿ ಪ್ರಕಾಶಮಾನ ಭಾರತಕ್ಕೆ 2ನೇ ರ್ಯಾಂಕು
ಭಾರತವನ್ನು ಹಿಮ್ಮೆಟ್ಟಿಸಿದ ಇಂಡೋನೇಷ್ಯಾ

ನವದೆಹಲಿ : ಏಷ್ಯಾಖಂಡದ ರಾಷ್ಟ್ರಗಳಲ್ಲಿ ‘ಪ್ರಕಾಶಮಾನ ಭಾರತ’ ಭ್ರಷ್ಟಾಚಾರದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆಯಾಂದು ತಿಳಿಸಿದೆ.

ಹಾಂಗ್‌ಕಾಂಗ್‌ ಮೂಲದ ಪೊಲಿಟಿಕಲ್‌ ಅಂಡ್‌ ಇಕನೊಮಿಕ್‌ ರಿಸ್ಕ್‌ ಕನ್ಸಲ್ಟೆನ್ಸಿ ಲಿಮಿಟೆಡ್‌ ಎಂಬ ಖಾಸಗಿ ಕಂಪೆನಿಯಾಂದು ನಡೆಸಿರುವ ಆಸಕ್ತಿದಾಯಕ ಸಮೀಕ್ಷೆಯಲ್ಲಿ ಏಷ್ಯಾಖಂಡದಲ್ಲಿನ ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ಹೆಚ್ಚಳದ ವಿಷಯದಲ್ಲಿ ಭಾರತ ಎರಡನೇ ಸ್ಥನ ಪಡೆದಿದೆ. ಭ್ರಷ್ಟಾಚರ ತಾಂಡವವಾಡುತ್ತಿರುವ 12 ದೇಶಗಳ ಪಟ್ಟಿಯಲ್ಲಿ ಮೊದಲ ರ್ಯಾಂಕು ಪಡೆದಿರುವ ಇಂಡೋನೇಷ್ಯಾ, ಭಾರತವನ್ನು ಎರಡನೇ ಸ್ಥಾನಕ್ಕೆ ಹಿಮ್ಮೆಟ್ಟಿಸಿದೆ.

ಪಾಶ್ಚಾತ್ಯ ದೇಶಗಳ ವಾಣಿಜ್ಯೋದ್ಯಮಿಗಳು ಈ ಸಮೀಕ್ಷೆಯನ್ನು ನಡೆಸಿದ್ದಾರೆ. ಭ್ರಷ್ಟಾಚಾರದಲ್ಲಿ ಭಾರತ 10 ರಲ್ಲಿ 8.9 ಅಂಕ ಪಡೆದಿದೆ. ಆದರೂ ಕಳೆದ ವರ್ಷದ ಸಮೀಕ್ಷೆಗಿಂತ ಈ ಬಾರಿ ಇಂಡೋನೇಷ್ಯಾ, ಭಾರತ ಮತ್ತು ವಿಯೆಟ್ನಾಂ ಭ್ರಷ್ಟಾಚಾರದಲ್ಲಿ ಸುಧಾರಣೆ ಸಾಧಿಸಿವೆ ಎಂಬ ಅಭಿಪ್ರಾಯ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಭ್ರಷ್ಟಾಚಾರದ ಪಟ್ಟಿಯಲ್ಲಿ ಸಿಂಗಾಪುರ ಕೊನೆಯ ಸ್ಥಾನದಲ್ಲಿದೆ. ಸಮೀಕ್ಷೆಯನ್ನು ಏಷ್ಯಾದ 1,000 ಪರಿಣತ ವಾಣಿಜ್ಯೋದ್ಯಮಿಗಳಿಂದ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಮಾಡಿಸಲಾಗಿತ್ತು. 0 ಯಿಂದ 10 ರವರೆಗೆ ಅಂಕಗಳನ್ನು ಕೊಡಲು ತಿಳಿಸಲಾಗಿತ್ತು.

ರ್ಯಾಂಕ್‌ ಲಿಸ್ಟ್‌ ಕೆಳಗಿನಂತಿದೆ :

  1. ಇಂಡೋನೇಷ್ಯಾ- 9.25 ಅಂಕಗಳು
  2. ಭಾರತ - 8.9 ಅಂಕಗಳು
  3. ವಿಯೆಟ್ನಾಂ- 8.63 ಅಂಕಗಳು
  4. ಫಿಲಿಫೈನ್ಸ್‌ - 8.33 ಅಂಕಗಳು
  5. ಥೈಲ್ಯಾಂಡ್‌, ಮಲೇಶಿಯ, ಚೈನಾ- 7.33 ಅಂಕಗಳು
  6. ಸೌತ್‌ ಕೊರಿಯಾ- 6.67 ಅಂಕಗಳು
  7. ತೈವಾನ್‌- 6.1 ಅಂಕಗಳು
  8. ಹಾಂಗ್‌ಕಾಂಗ್‌- 3.6 ಅಂಕಗಳು
  9. ಜಪಾನ್‌- 3.5 ಅಂಕಗಳು
  10. ಸಿಂಗಾಪುರ- 0.5 ಅಂಕಗಳು
(ಏಜನ್ಸೀಸ್‌)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X