ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಶಾಲೆ ಮಕ್ಕಳ ಪಾಠದಲ್ಲಿ ಆಟ ಹಾಡು ಹಾಗೂ ಕುಣಿತ

By Staff
|
Google Oneindia Kannada News

ಸರ್ಕಾರಿ ಶಾಲೆ ಮಕ್ಕಳ ಪಾಠದಲ್ಲಿ ಆಟ ಹಾಡು ಹಾಗೂ ಕುಣಿತ
ಸೆಮಿಸ್ಟರ್‌ ಪದ್ಧತಿ ಜಾರಿಗೆ ತರಲು ಸರ್ಕಾರದ ನಿರ್ಧಾರ

ಬೆಂಗಳೂರು : ಶಾಲಾ ಮಕ್ಕಳಿಗೆ ಆಟದೊಂದಿಗೆ ಪಾಠ ಎಂಬಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನೊಳಗೊಂಡ ಶಿಕ್ಷಣವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರದ ನಿರ್ಧಾರದಿಂದಾಗಿ ಸಂಗೀತ, ನೃತ್ಯ ಮತ್ತು ರಂಗ ಚಟುವಟಿಕೆಗಳು ಶಿಕ್ಷಣದ ಒಂದು ಭಾಗವಾಗಲಿದೆ.

50,000 ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನೂತನ ಶೈಕ್ಷಣಿಕ ಸಂಹಿತೆ ಮುಂಬರುವ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ಶಿಕ್ಷಣ ಸಚಿವ ಬಿ.ಕೆ.ಚಂದ್ರಶೇಖರ್‌ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಎಲ್ಲ ಪಾಲಕರನ್ನೂ ಸರ್ಕಾರಿ ಶಾಲಾ ಶಿಕ್ಷಣದತ್ತ ಮನವೊಲಿಸಿ, ಅವರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಬರುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಸಂಗೀತ ಮತ್ತು ನೃತ್ಯಗಳನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ತರಬೇತು ಮಾಡಲಾಗುತ್ತದೆ. ಸರ್ಕಾರವು ಈ ನೂತನ ಮಾದರಿ ಶಿಕ್ಷಣಕ್ಕಾಗಿ ಈಗಾಗಲೇ 16,000ಕ್ಕೂ ಹೆಚ್ಚು ಶಿಕ್ಷಕರನ್ನು ತರಬೇತು ಮಾಡಿದೆ. ಇದು ಶಿಕ್ಷಣ ಕ್ಷೇತ್ರದಲಾಗುತ್ತಿರುವ ಹೊಸ ಬೆಳವಣಿಗೆ ಎಂದು ಸಚಿವ ಚಂದ್ರಶೇಖರ್‌ ಹೇಳಿದರು.

ಮುಂಬರುವ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸೆಮಿಸ್ಟರ್‌ ಪದ್ಧತಿಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ್ಫಶೈಕ್ಷಣಿಕ ವರ್ಷದಲ್ಲಿ ಮೂರು ಸೆಮಿಸ್ಟರ್‌ಗಳಿರುವ ಈ ಪದ್ಧತಿಯಲ್ಲಿ ಅಂಕಗಳ ಬದಲು ್ಫಗ್ರೇಡ್‌ ನಡಲಾಗುವುದು. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಯೋಜನೆ ಯಥಾಪ್ರಕಾರ ಮುಂದುವರಿಯಲಿದೆ ಎಂದು ಸಚಿವ ಚಂದ್ರಶೇಖರ್‌ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X