ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 1000 ಆಸ್ಪತ್ರೇಲಿ ‘ಲೈಫ್‌ವಾಚ್‌’ ಟೆಲಿಮೆಡಿಸಿನ್‌ ಕೇಂದ್ರ

By Staff
|
Google Oneindia Kannada News

ರಾಜ್ಯದ 1000 ಆಸ್ಪತ್ರೇಲಿ ‘ಲೈಫ್‌ವಾಚ್‌’ ಟೆಲಿಮೆಡಿಸಿನ್‌ ಕೇಂದ್ರ
ಪ್ರತಿ ಟೆಲಿ ಮೆಡಿಸಿನ್‌ ಘಟಕಕ್ಕೆ ‘ಲೈಫ್‌ ವಾಚ್‌’ನಿಂದ 5 ಲಕ್ಷ ರುಪಾಯಿ ಖರ್ಚು

ಬೆಂಗಳೂರು : ರಾಜ್ಯದ ವಿವಿಧ ಭಾಗಗಳಲ್ಲಿ ಆರೋಗ್ಯ ಸವಲತ್ತು ಸದ್ಯದಲ್ಲೇ ಉನ್ನತ ಮಟ್ಟಕ್ಕೇರುತ್ತಿದ್ದು , 1000 ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರದ ‘ಲೈಫ್‌ ವಾಚ್‌’ ಏಜೆನ್ಸಿ ಟೆಲಿ ಮೆಡಿಸಿನ್‌ ಕೇಂದ್ರಗಳನ್ನು ಸ್ಥಾಪಿಸಲಿದೆ.

ಪ್ರತಿ ಜಿಲ್ಲಾ ಕೇಂದ್ರ, ಹೋಬಳಿ ಮತ್ತು ಪ್ರಮುಖ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಈ ಟೆಲಿ ಮೆಡಿಸಿನ್‌ ಘಟಕಗಳು ಗ್ರಾಮೀಣ ಬಡ ಜನತೆಗೆ ವರದಾನವಾಗಲಿವೆ. ಪ್ರತಿ ಟೆಲಿ ಮೆಡಿಸಿನ್‌ ಘಟಕಕ್ಕೆ ‘ಲೈಫ್‌ ವಾಚ್‌’ 5 ಲಕ್ಷ ರುಪಾಯಿ ಖರ್ಚು ಮಾಡಲಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಯಶಸ್ವಿನಿ’ಯನ್ನು ಇಸ್ರೋದ ನೆರವಿನಿಂದ ಗ್ರಾಮೀಣ ಜನರಿಗೂ ತಲುಪುವಂತೆ ಅನುಷ್ಠಾನಕ್ಕೆ ತರಲಾಗಿದೆ. ಇಸ್ರೋ ನೆರವಿನಿಂದ ರಾಜ್ಯದ ಪ್ರಮುಖ ಆಸ್ಪತ್ರೆಗಳು ಏಕಜಾಲದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯ, ಜಯದೇವ ಹೃದ್ರೋಗ ಕೇಂದ್ರ ಹಾಗೂ ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗಳು ಈ ಯೋಜನೆಯಲ್ಲಿ ಸೇರಿವೆ ಎಂದು ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಪ್ರಾಥಮಿಕ ತಂತ್ರಜ್ಞಾನ ನಿಗಮ (ಪಿಇಸಿ)ದೊಂದಿಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ರಾಜ್ಯದಲ್ಲಿನ ಟೆಲಿ ಮೆಡಿಸಿನ್‌ ಘಟಕಗಳಿಗೆ ಬೇಕಾದ ತಂತ್ರೋಪಕರಣಗಳನ್ನು ಪಿಇಸಿ ಪೂರೈಸಲಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X