ಚುನಾವಣೆ ಫಲಿತಾಂಶ 
ಮಧ್ಯ ಪ್ರದೇಶ - 230
PartyLW
CONG1150
BJP1050
BSP40
OTH60
ರಾಜಸ್ಥಾನ - 199
PartyLW
CONG1004
BJP644
IND120
OTH141
ಛತ್ತೀಸ್ ಗಢ - 90
PartyLW
CONG651
BJP170
BSP+60
OTH10
ತೆಲಂಗಾಣ - 119
PartyLW
TRS1570
TDP, CONG+518
AIMIM25
OTH13
ಮಿಜೋರಾಂ - 40
PartyLW
MNF026
IND08
CONG05
OTH01
 • search

ವಿಜಯಶಾಂತಿ ಕೈಯಲ್ಲಿ ಕಮಲ ಧ್ವಜ !

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ವಿಜಯಶಾಂತಿ ಕೈಯಲ್ಲಿ ಕಮಲ ಧ್ವಜ !
  ಪಾತ್ರ ಬದಲಿಸಲೇಬೇಕಾದ ಅನಿವಾರ್ಯತೆ ತೆಲುಗು ಚಿತ್ರರಂಗದ ಕಿರಣ್‌ಬೇಡಿ ವಿಜಯಶಾಂತಿಗೆ ಒದಗಿದೆ. ಆಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಿವೆ. ಟಿಕೆಟ್ಟು ಪಕ್ಕಾ ಆಗಿದೆ. ಉಳಿದಿರುವುದು ವಿಜಯಕ್ಕಾಗಿ ಶಾಂತಿ ಮತದಾರರ ಬಾಗಿಲು ತಟ್ಟುವುದು ಮಾತ್ರ.

  • ದಟ್ಸ್‌ಕನ್ನಡ ಬ್ಯೂರೊ
  ವಿಜಯಶಾಂತಿ ರಂಗಪ್ರವೇಶದ ಮುಹೂರ್ತ ಸನ್ನಿಹಿತವಾಗಿದೆ.

  ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಜನಪ್ರಿಯ ತೆಲುಗು ನಟಿಯನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸುವುದರೊಂದಿಗೆ, ವಿಜಯಶಾಂತಿ ಸ್ಪರ್ಧಾತ್ಮಕ ರಾಜಕೀಯಕ್ಕಿಳಿಯುವ ಮುಹೂರ್ತ ನಿರ್ಧಾರವಾದಂತಾಗಿದೆ. ಹಾಗೆ ನೋಡಿದರೆ ವಿಜಯಶಾಂತಿ ಬಿಜೆಪಿಯಾಂದಿಗೆ ಗುರ್ತಿಸಿಕೊಂಡು ತುಂಬಾ ದಿನಗಳೇ ಕಳೆದಿದ್ದವು. ಆದರೆ, ವಿಜಯಶಾಂತಿ ಹದಿನಾರಾಣೆ ರಾಜಕಾರಣಿಯಾಗುತ್ತಿರುವುದು ಈಗಲೇ.

  ತೆಲಂಗಾಣ ಕ್ಷೇತ್ರದಿಂದ ವಿಜಯಶಾಂತಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತಕರ ಚಾವಡಿ ಉದ್ದೇಶಿಸಿದೆ. ಮೆಹಬೂಬ್‌ನಗರ ಮತ್ತು ವಾರಂಗಲ್‌ ಕ್ಷೇತ್ರಗಳಲ್ಲೂ ವಿಜಯಶಾಂತಿ ಸ್ಪರ್ಧಿಸಬಹುದಾದ ಇನ್ನೆರಡು ಸಂಭವನೀಯ ಕ್ಷೇತ್ರಗಳು.

  ತೆಲಂಗಾಣ ಪ್ರದೇಶದಲ್ಲಿ ನಕ್ಸಲರ ಉಪಟಳ ಹೆಚ್ಚಿನ ಪ್ರಮಾಣದಲ್ಲಿದ್ದು , ಕ್ರಾಂತಿ ಕನ್ಯೆಯ ಪಾತ್ರಗಳಲ್ಲಿ ಮಿಂಚಿರುವ ವಿಜಯಶಾಂತಿಗೆ ಈ ಪ್ರದೇಶದಲ್ಲಿ ಅಪಾರ ಜನಪ್ರಿಯತೆಯೂ ಇದೆ. ನೊಂದ ಜನರ ಕಣ್ಣೊರೆಸುವ ಹಾಗೂ ಸ್ವತಃ ಕಷ್ಟನಷ್ಟಗಳಿಗೊಳಗಾಗಿ ಆನಂತರ ಸಿಡಿದೇಳುವ ಪಾತ್ರಗಳ ವಿಜಯಶಾಂತಿ ಸಿನಿಮಾಗಳು ತೆಲುಗು ಮಂದಿಗೆ ಅಚ್ಚುಮೆಚ್ಚು . ಈ ಮೆಚ್ಚುಗೆಯನ್ನೇ ಓಟುಗಳನ್ನಾಗಿ ಪರಿವರ್ತಿಸುವ ಚಿಂತನೆ ಬಿಜೆಪಿಯದು.

  ಆಂಧ್ರದಲ್ಲಿ ಬಿಜೆಪಿ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲ . ಒಂದೆಡೆ ಹುರಿದುಮುಕ್ಕುವ ತೆಲುಗುದೇಶಂ, ಇನ್ನೊಂದೆಡೆ ಬೇರುಗಳ ಸಡಿಲಿಸದ ಕಾಂಗ್ರೆಸ್‌ ನಡುವೆ ಬಿಜೆಪಿ ನೆಲೆ ಕಂಡುಕೊಳ್ಳಲು ಹೆಣಗುತ್ತಿದೆ. ಇಂಥದೊಂದು ಹೋರಾಟದ ಸಂದರ್ಭದಲ್ಲಿ - ಸ್ಪರ್ಧಾಳುವಾಗಿ ಮಾತ್ರವಲ್ಲದೆ, ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳ ಪ್ರಚಾರದ ಮುಂಚೂಣಿಯಲ್ಲಿಯೂ ವಿಜಯಶಾಂತಿ ಅವರನ್ನು ಬಳಸಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ. ತೆಲುಗುದೇಶಂನ ಪ್ರಬಲ ಪೋಟಿಗೆ ಉತ್ತರಿಸಲು ವಿಜಯಶಾಂತಿ ಬಿಜೆಪಿಯ ‘ಆಯುಧ’ವಾಗಿ ಬಳಕೆಯಾಗಲಿದ್ದಾರೆ.

  ಸ್ವತಃ ವಿಜಯಶಾಂತಿ ಇತ್ತೀಚಿನ ದಿನಗಳಲ್ಲಿ ವೃತ್ತಿ ರಾಜಕೀಯದ ಬಗೆಗೆ ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ. ಯುವ ನಟ ನಟಿಯರ ಪ್ರವಾಹದಲ್ಲಿ ತಮ್ಮ ವರ್ಚಸ್ಸು ದಿನದಿಂದ ದಿನಕ್ಕೆ ಕುಗ್ಗುತ್ತಿರುವುದನ್ನು ವಿಜಯಶಾಂತಿ ಮನಗಂಡಿದ್ದಾರೆ. ಈ ಕಾರಣದಿಂದಾಗಿ ಪಾತ್ರ ಬದಲಿಸಲೇಬೇಕಾದ ಅನಿವಾರ್ಯತೆ ಅವರಿಗಿದೆ.

  ಇತ್ತೀಚೆಗಷ್ಟೇ ಬಿಜೆಪಿ ಅಧ್ಯಕ್ಷ ವೆಂಕಯ್ಯನಾಯ್ಡು ಹಾಗೂ ವಿಜಯಶಾಂತಿ ಚೆನ್ನೈನಲ್ಲಿ ರಾಜಕೀಯ ಸಾಧ್ಯಾಸಾಧ್ಯತೆಗಳ ಕುರಿತು ಚರ್ಚಿಸಿದ್ದಾರೆ. ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ, ಆಂಧ್ರದ ಬಿಜೆಪಿ ಅಧ್ಯಕ್ಷ ಎನ್‌.ಇಂದ್ರಸೇನ ರೆಡ್ಡಿ ಹಾಗೂ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಜಿ.ಕಿಶನ್‌ ರೆಡ್ಡಿ ಈ ಸಮಾಲೋಚನೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.

  ಸದರಿ ರಾಜಕೀಯ ಲೆಕ್ಕಾಚಾರಗಳ ಗರ ತಪ್ಪದಿದ್ದರೆ- ವಿಜಯಶಾಂತಿ ಓಟು ಕೇಳಲು ತೆಲುಗರ ಮನೆಮನೆಗೆ ಬರುವ ದಿನಗಳು ದೂರವಿಲ್ಲ . ಹಾಗಾದಲ್ಲಿ ಆಂಧ್ರದ ರಾಜಕಾರಣದ ಕಣ ಇನ್ನಷ್ಟು ರಂಗೇರಲಿದೆ. ಬಿಜೆಪಿ ಪಾಲಿಗೆ ಆಕೆ ಮಾತೃರೂಪಿಯಾದಾಳೋ ಅಥವಾ ಮರೀಚಿಕೆಯಾದಳೋ...... ಉತ್ತರ ಹತ್ತಿರದಲ್ಲೇ ಇದೆ.

  Post your views

  ಮುಖಪುಟ / ವಾಟ್ಸ್‌ ಹಾಟ್‌

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more