ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಳ ನಾಯಕರ ಒಂದು ಗುಂಪು ಸೋನಿಯಾಗೆ ಇಂದು ಶರಣು

By Staff
|
Google Oneindia Kannada News

ದಳ ನಾಯಕರ ಒಂದು ಗುಂಪು ಸೋನಿಯಾಗೆ ಇಂದು ಶರಣು
ಇದು ಅವಕಾಶವಾದಿ ರಾಜಕಾರಣ ಎಂದು ಬಿ.ಸೋಮಶೇಖರ್‌ ಪ್ರತಿಕ್ರಿಯೆ

ಬೆಂಗಳೂರು: ಪ್ರಗತಿಪರ ಹಾಗೂ ತಟಸ್ಥ ಜನತಾದಳದ ಪ್ರಮುಖ ನಾಯಕರು ಇಂದು ಕಾಂಗೈಗೆ ಸೇರಲಿದ್ದಾರೆ. ಇಷ್ಟು ದಿನ ಮೌನವಾಗಿದ್ದ ವಿಧಾನ ಪರಿಷತ್‌ ಸಭಾಪತಿ ಬಿ.ಎಲ್‌.ಶಂಕರ್‌, ಉಮೇಶ್‌ ಕತ್ತಿ, ಕೃಷ್ಣ ಭೈರೇಗೌಡ , ಮಹಾಂತೇಶ್‌ ಕೌಜಲಗಿ ಸೇರಿದಂತೆ 11 ಶಾಸಕರು ಅಧಿಕೃತವಾಗಿ ಕಾಂಗೈ ಸೇರುವರು. ಇವರಲ್ಲದೇ ರಮೇಶ್‌ ಕುಮಾರ್‌, ಬಸವರಾಜ ಹೊರಟ್ಟಿ , ಬಸವರಾಜ ರಾಯರೆಡ್ಡಿ , ಕೆ.ಎಚ್‌.ಶ್ರಿನಿವಾಸ್‌ ಮುಂತಾದ ವಿಧಾನ ಪರಿಷತ್‌ ಶಾಸಕರು ಸಹ ಕಾಂಗೈಗೆ ಸೇರ್ಪಡೆಗೊಳ್ಳಲಿರುವರು. ಇವರೊಂದಿಗೆ ರಾಜ್ಯದ ಮಾಜಿ ಹಿರಿಯಾಧಿಕಾರಿಗಳಾದ ಬಿ.ಎಸ್‌.ಪಾಟೀಲ್‌, ರೇವಣ್ಣ ಸಿದ್ದಯ್ಯ ಕಾಂಗೈಗೆ ಸೇರಲಿದ್ದಾರೆ.

ಈ ಮೂಲಕ ಪ್ರಗತಿಪರ ದಳದಲ್ಲಿದ್ದ 14 ಶಾಸಕರ ಪೈಕಿ 11 ಮಂದಿ ಕಾಂಗೈಯಲ್ಲಿ ಲೀನವಾಗಲಿದ್ದಾರೆ. ಈ ನಾಯಕರುಗಳು ಇಂದು (ಫೆ18) ಸೋನಿಯಾ ಗಾಂಧಿ ಸಮ್ಮುಖದಲ್ಲಿ , ನವದೆಹಲಿಯಲ್ಲಿ ಕಾಂಗ್ರೆಸ್‌ಗೆ ಸೇರುವ ಕಾರ್ಯಕ್ರಮವಿದೆ. ಜನತಾದಳದ ವಿಲೀನ ಪ್ರಕ್ರಿಯೆ ಮರೀಚಿಕೆಯಾಗಿದ್ದು , ಹೆಗಡೆ ಮರಣದ ಬಳಿಕ ಈ ಬಣ ಕಳೆಗುಂದಿತ್ತು. . ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇಸತ್ತ ರಾಜಕಾರಣಿಗಳ ಪಕ್ಷಾಂತರ ಕಾರ್ಯ ಮುಂದುವರಿದಿದೆ.

‘ಇದೊಂದು ದುರದೃಷ್ಟಕಾರಿ ಬೆಳವಣಿಗೆ. ಅವಕಾಶವಾದಿ ರಾಜಕಾರಣದ ಒಂದು ಮುಖ. ಇದರಿಂದ ಒಂದು ಪಕ್ಷವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ’ ಎಂದು ಪ್ರಗತಿಪರ ದಳದ ಶಾಸಕಾಂಗ ಪಕ್ಷದ ನಾಯಕ ಸೋಮಶೇಖರ್‌ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X