ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಚುನಾವಣೇಲಿ ಸ್ಪರ್ಧಿಸುವುದು ಖಚಿತ-ರೋಷನ್‌ಬೇಗ್‌

By Staff
|
Google Oneindia Kannada News

ಮುಂದಿನ ಚುನಾವಣೇಲಿ ಸ್ಪರ್ಧಿಸುವುದು ಖಚಿತ-ರೋಷನ್‌ಬೇಗ್‌
ನಾನು ದೇಶದ್ರೋಹಿಯಲ್ಲ , ದೇಶದ್ರೋಹಿ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದೂ ಇಲ್ಲ ...

ಬೆಂಗಳೂರು : ಪ್ರಮುಖ ಛಾಪಾ ಪಾಪಿ ಅಬ್ದುಲ್‌ ಕರೀಂ ಲಾಲ ತೆಲಗಿಯಾಂದಿಗೆ ತಮಗೆ ಯಾವುದೇ ಸಂಬಂಧ ಇಲ್ಲವೆಂದು ಮಾಜಿ ಸಚಿವ ಆರ್‌.ರೋಷನ್‌ ಬೇಗ್‌ ಪುನರುಚ್ಛರಿಸಿದ್ದಾರೆ.

ಓರ್ವ ಕ್ರಿಮಿನಲ್‌ ಹಾಗೂ ರಾಷ್ಟ್ರದ್ರೋಹಿಯ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಫೆ.10ರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೋಷನ್‌ಬೇಗ್‌ ಹೇಳಿದರು. ರೋಷನ್‌ಬೇಗ್‌, ಅವರ ಸೋದರ ರೆಹನ್‌ ಬೇಗ್‌ ಹಾಗೂ ಹಿರಿಯ ಪೊಲೀಸರೊಂದಿಗೆ ತನಗೆ ಸಂಪರ್ಕವಿತ್ತು ಎಂದು ವಿಚಾರಣೆಯ ವೇಳೆ ತೆಲಗಿ ನೀಡಿದ್ದಾನೆ ಎನ್ನಲಾಗಿರುವ ಹೇಳಿಕೆಯ ಕುರಿತು ಬೇಗ್‌ ಈ ರೀತಿ ಪ್ರತಿಕ್ರಿಯಿಸಿದರು.

ಹಜ್‌ ಯಾತ್ರೆಯಿಂದ ಬೆಂಗಳೂರಿಗೆ ವಾಪಸ್ಸಾಗಿರುವ ಬೇಗ್‌, ಛಾಪಾ ಪಾಪದ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ- ನಾನು ಸಿಬಿಐ ತನಿಖೆಯ ನಿರೀಕ್ಷೆಯಲ್ಲಿದ್ದೇನೆ. ಸಿಬಿಐ ಪತ್ತೆ ಹಚ್ಚುವ ಸತ್ಯಗಳ ನಿರೀಕ್ಷೆಯಲ್ಲಿದ್ದೇನೆ ಎಂದರು.

ಚುನಾವಣೆಗಳು ಸನ್ನಿಹಿತವಾಗಿರುವ ಸಂದರ್ಭದಲ್ಲಿ ಅಲ್ಪ ಸಂಖ್ಯಾಕರ ಸಮುದಾಯದ ನಾಯಕನೊಬ್ಬ ಅಪಾರ ಜನಪ್ರಿಯತೆ ಗಳಿಸಿರುವುದನ್ನು ಸಹಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದು ಬೇಗ್‌ ದೂರಿದರು. 14,500 ಕೋಟಿ ರುಪಾಯಿ ಮೊತ್ತದ ಹುಡ್ಕೋ ಸಾಲ ಮಂಜೂರಾತಿ ಹಗರಣದಲ್ಲಿ ಬಿಜೆಪಿಯ ಅನಂತಕುಮಾರ್‌ ಷಾಮೀಲಾಗಿರುವ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಯಾವುದೇ ದೇಶದ್ರೋಹದ ಕೆಲಸಗಳಲ್ಲಿ ಭಾಗಿಯಾಗಿಲ್ಲ ಎನ್ನುವುದನ್ನು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಸತ್ಯ ಒಂದಲ್ಲಾ ಒಂದು ದಿನ ಹೊರಬರುತ್ತದೆ. ನಾನು ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ತೆಲಗಿ ಮುಂದೊಂದು ದಿನ ಹೇಳಿದರೂ ಆಶ್ಚರ್ಯವಿಲ್ಲ ಎಂದು ಬೇಗ್‌ ಹೇಳಿದರು.

ಸರ್ಕಾರವನ್ನು ಮುಜುಗರದಿಂದ ಪಾರು ಮಾಡುವ ಉದ್ದೇಶದಿಂದಷ್ಟೇ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಬೇಗ್‌ ಹೇಳಿದರು. ಪ್ರತಿಪಕ್ಷಗಳ ಸತತ ಒತ್ತಾಯದ ಹಿನ್ನೆಲೆಯಲ್ಲಿ ಕಳೆದ ಜನವರಿ 4ರಂದು ರೋಷನ್‌ಬೇಗ್‌ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸಚಿವ ಸಂಪುಟದಿಂದ ನಿರ್ಗಮಿಸಿದ್ದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಜಯಮಹಲ್‌ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ರೋಷನ್‌ಬೇಗ್‌ ಸುದ್ದಿಗಾರರ ಪ್ರಶ್ನೆಯಾಂದಕ್ಕೆ ಉತ್ತರಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X