ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ವಲಸಿಗರಿಗೆ ಕಿಕ್ಕ್‌: ಬ್ರಿಟನ್‌-ಭಾರತ ಮಹತ್ವದ ಒಪ್ಪಂದ

By Staff
|
Google Oneindia Kannada News

ಅಕ್ರಮ ವಲಸಿಗರಿಗೆ ಕಿಕ್ಕ್‌: ಬ್ರಿಟನ್‌-ಭಾರತ ಮಹತ್ವದ ಒಪ್ಪಂದ
ಭಾರತದಲ್ಲಿನ ಏಡ್ಸ್‌ ಕಂಟ್ರೋಲಿಗೆ 12.3ಲಕ್ಷ ಪೌಂಡ್‌ ಬ್ರಿಟನ್‌ ಅನುದಾನ

ನವದೆಹಲಿ : ಅಕ್ರಮವಾಗಿ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಭಾರತೀಯರ ವಾಪಸಾತಿ, ಭಯೋತ್ಪಾದನಾ ನಿಗ್ರಹಕ್ಕೆ ದ್ವಿಪಕ್ಷೀಯ ಸಹಕಾರದ ರೂಪರೇಷ ತಯಾರಿ; ಬೆಹುಗಾರಿಕಾ ತಂತ್ರ ವಿನಿಮಯ ಸೇರಿದಂತೆ ಹಲವು ಮಹತ್ತರ ಒಪ್ಪಂದಗಳಿಗೆ ಭಾರತ ಹಾಗೂ ಬ್ರಿಟನ್‌ ಇಂದು (ಜನವರಿ 30) ಸಹಿ ಹಾಕಿದವು.

‘ನಾವು ಭಯೋತ್ಪಾದನಾ ನಿಗ್ರಹ ಹಾಗೂ ಬೆಹುಗಾರಿಕಾ ತಂತ್ರ ವಿನಿಮಯಕ್ಕೊಂದು ಕೇಂದ್ರಿಕೃತ ರೂಪರೇಷೆಗಳನ್ನು ನಿರ್ಮಿಸಲಿದ್ದೇವೆ. ಅದನ್ನು ಶೀಘ್ರವೇ ಔಪಚಾರಿಕವಾಗಿ ಜಾರಿಗೊಳಿಸಲಿದ್ದೇವೆ’ ಎಂದು ಉಪ ಪ್ರಧಾನಿ ಎಲ್‌.ಕೆ. ಅಡ್ವಾಣಿ ‘ಭಾರತೀಯ ಅಕ್ರಮ ವಲಸೆಗಾರರ ವಾಪಸಾತಿ ಒಪ್ಪಂದ’ಕ್ಕೆ ಬ್ರಿಟನ್‌ ಗೃಹ ಸಚಿವ ಡೇವಿಡ್‌ ಬ್ಲಂಕೆಟ್‌ಯಾಂದಿಗೆ ಸಹಿ ಮಾಡಿ ಹೇಳಿದರು.

‘ಇದು ದ್ವಿಪಕ್ಷೀಯವಾಗಿ ಭಯೋತ್ಪಾದನಾ ನಿಗ್ರಹ ಕಾರ್ಯಚರಣೆಯ ಕುರಿತು ತೆಗೆದುಕೊಂಡ ಮಹತ್ತರ ಹೆಜ್ಜೆಯ ಮುನ್ಸೂಚನೆಯಾಗಿದೆ ’ಎಂದು ಬ್ಲಂಕೆಟ್‌ ಬಣ್ಣಿಸಿದರು. ಈ ರೀತಿಯ ಒಪ್ಪಂದವನ್ನು ಭಾರತ ಯಾವುದೇ ರಾಷ್ಟ್ರದ ಜೊತೆ ಮೊದಲ ಬಾರಿ ಮಾಡಿಕೊಂಡಿದೆ. ಉಗ್ರಗಾಮಿ ಸಂಘಟನೆಗಳು ಬ್ರಿಟನ್‌ನಲ್ಲಿ ಚಂದಾ ಪಡೆಯುವ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಮಯದಲ್ಲಿ ಬ್ರಿಟನ್‌ ಲೋಕಸಭೆ(ಹೌಸ್‌ ಆಫ್‌ ಕಾಮನ್ಸ್‌) ಯಲ್ಲಿ ಬ್ರಿಟಿಷ್‌ ಅಂತರಾಷ್ಟ್ರೀಯ ಅಭಿವೃದ್ಧಿ ಖಾತೆ ಸಚಿವ ಗರೇತ್‌ ಥೋಮಸ್‌ ಏಡ್ಸ್‌ ನಿರ್ಮೂಲನೆಗಾಗಿ ಭಾರತಕ್ಕೆ 123 ದಶ ಲಕ್ಷ ಪೌಂಡ್‌ ಅನುದಾನ ಪ್ರಕಟಿಸಿದರು. ‘ಭಾರತದ ರಾಷ್ಟ್ರೀಯ ಏಡ್ಸ್‌ ನಿರ್ವಹಣಾ ಸಂಸ್ಥೆಗೆ ಅನುದಾನ ನೀಡಿ, ಅದರ ಆಪ್ತ ಪರಿಶೀಲನೆ ಮಾಡಿ ಪರಿಣಾಮಕಾರಿ ಅಂಶಗಳನ್ನು ಅಳವಡಿಸಿಕೊಳ್ಳುತ್ತೇವೆ. ಈಗಿರುವ ಮಾಹಿತಿ ಪ್ರಕಾರ ಭಾರತದಲ್ಲಿ 4 ದಶಲಕ್ಷ ಏಡ್ಸ್‌ ರೋಗಿಗಳಿದ್ದಾರೆ. ಇದು ವಿಶ್ವದಲ್ಲಿ ಎರಡನೇ ಸ್ಥಾನವಾಗಿದೆ.’ ಎಂದು ಅವರು ಸಂಸದ, ಭಾರತೀಯ ಕಾರ್ಮಿಕ ಗೆಳೆಯ ಸಂಸ್ಥೆಯ ಸದಸ್ಯ ಜೆಮ್ಸ್‌ ಪ್ಯೂರ್‌ನೆಲ್‌ರ ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X