ಕರ್ನಾಟಕ ಮೇಲ್ಮನೆಗೆ ಕಂಬಾರರು?
ಕರ್ನಾಟಕ ಮೇಲ್ಮನೆಗೆ ಕಂಬಾರರು?
ಬೆಂಗಳೂರು: ಹಿರಿಯ ಸಾಹಿತಿ, ಮಾಜಿ ಕುಲಪತಿ, ನಾಟಕಕಾರ, ಚಿತ್ರ ನಿರ್ದೇಶಕ, ಜಾನಪದ ತಜ್ಞ ಡಾ.ಚಂದ್ರಶೇಖರ ಕಂಬಾರರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡುವ ಪ್ರಸ್ತಾವವನ್ನು ಸರಕಾರ ರಾಜ್ಯಪಾಲರಿಗೆ ಕಳುಹಿಸಿದೆ.ರಾಜ್ಯಪಾಲರ ಅನುಮೋದನೆಗೆ ಈ ಹಿಂದೆ ಕಳುಹಿಸಲಾಗಿದ್ದ ಪ್ರಸ್ತಾವನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಥೋಡ್, ಮಾಜಿ ಶಾಸಕಿ ಮಲ್ಲಜಮ್ಮ ಹಾಗೂ ಕಲಾವಿದ ಬಂಡೆಪ್ಪ ಕಾಶಂಪೂರ್ ಅವರ ಹೆಸರಿತ್ತು. ಆದರೆ ರಾಜ್ಯಪಾಲ ಟಿ.ಎನ್.ಚರ್ತುವೇದಿ ಈ ಪ್ರಸ್ತಾವನೆಯನ್ನು ಅಂಗೀಕರಿಸದೆ ಮರುಪರಿಶೀಲಿಸುವಂತೆ ಸರಕಾರಕ್ಕೆ ಹಿಂತಿರುಗಿಸಿದರು. ಬಳಿಕ ಸರಕಾರ ಕಲಾವಿದ ಕಾಶಂಪುರ ಅವರ ಹೆಸರನ್ನು ತೆಗೆದು ಹಾಕಿ ಕಂಬಾರರ ಹೆಸರನ್ನು ಸೇರಿಸಿದೆ.
ಈ ಹಿಂದೆ ತೆರವುಗೊಂಡಿದ್ದ್ದ ಸಾಹಿತ್ಯ, ಕಲೆ ಮುಂತಾದ ಕ್ಷೇತ್ರದ ಸಾಧಕರ ನಾಮನಿರ್ದೇಶಿತ ಮೂರು ಸ್ಥಾನಗಳಿಗೆ ಹೆಸರುಗಳನ್ನು ಸರಕಾರ ಅನುಮೋದಿಸಿದೆ. ಕನ್ನಡ ವಿ.ವಿ. ಕುಲಪತಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಕಂಬಾರರಿಗಿದೆ.
ರಾಜ್ಯಪಾಲರ ಕಚೇರಿಯಿಂದ ಅಂಗೀಕಾರ ಪತ್ರಕ್ಕೆ ಈಗ ಎದುರು ನೋಡಬೇಕು.
ಮುಖಪುಟ / ವಾರ್ತೆಗಳು












Click it and Unblock the Notifications