ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂವು ತಂದ ಸುಪುತ್ರನ ಅಗಲಿಕೆಗೆ ರೋದಿಸುತ್ತಿರುವ ಉತ್ತರಕನ್ನಡ

By Staff
|
Google Oneindia Kannada News

ಹೂವು ತಂದ ಸುಪುತ್ರನ ಅಗಲಿಕೆಗೆ ರೋದಿಸುತ್ತಿರುವ ಉತ್ತರಕನ್ನಡ
ಶಾಲೆ ಕಾಲೇಜುಗಳಿಗೆ ರಜೆ, ರಾಜ್ಯಾದ್ಯಂತ ಮೂರು ದಿನ ಶೋಕ

ಕಾರವಾರ : ರಾಮಕೃಷ್ಣ ಹೆಗಡೆ ಅವರನ್ನು ಕಳೆದುಕೊಂಡ ತವರು ಜಿಲ್ಲೆ ಉತ್ತರಕನ್ನಡದ ತುಂಬ ಹನಿಯಾಡೆದ ಮೋಡದಂಥ ಮೌನ . ನೆಚ್ಚಿನ ಪುತ್ರನ ಅಗಲಿಕೆಯಿಂದಾಗಿ ಇಡೀ ಜಿಲ್ಲೆ ಸೂತಕದ ಮನೆಯಂತೆ ಕಾಣುತ್ತಿದೆ.

ರಾಮಕೃಷ್ಣ ಹೆಗಡೆ ಅವರ ಕುಟುಂಬದವರು ಪ್ರಸ್ತುತ ಸಿದ್ಧಾಪುರದ ದೊಡ್ಡಮನೆಯಲ್ಲಿ ನೆಲೆಸಿಲ್ಲ . ಆದರೆ ಹೆಗಡೆ ಅವರ ಹಿರಿಯ ಸೋದರ ಗಣೇಶ ಹೆಗಡೆ ಅವರ ಕುಟುಂಬ ಸಿದ್ಧಾಪುರದಲ್ಲಿ ವಾಸವಿದೆ. ಅವರಿಗೆ ಸಾವಿನ ಸುದ್ದಿ ತಿಳಿದಿದ್ದು ಸೋಮವಾರ ಸಂಜೆಯ ವೇಳೆಗೆ. ಆನಂತರ ಇಡೀ ಮನೆಯಲ್ಲಿ ಸ್ಮಶಾನ ಮೌನ. ‘ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ’ ಎಂದು ಸುಮ್ಮನಾಗುತ್ತಾರೆ ಗಣೇಶ ಹೆಗಡೆ ಅವರ ಪುತ್ರ ಶಶಿಭೂಷಣ್‌.

ಸಿದ್ಧಾಪುರ ಪಟ್ಟಣದಲ್ಲಿ ಸ್ವಯಂ ಘೋಷಿತ ಬಂದ್‌ನ ವಾತಾವರಣವಿದೆ. ಸೋಮವಾರ ಮಧ್ಯಾಹ್ನವೇ ಅಂಗಡಿ ಮಳಿಗೆಗೆ ಮಾಲಿಕರು ಷಟರ್‌ ಎಳೆದರು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಈ ಮೌನ ಮಂಗಳವಾರವೂ ಮುಂದುವರಿದಿದೆ. ಈ ನಡುವೆ, ಕರಾವಳಿ ಪ್ರದೇಶದಲ್ಲಿ ಮುಂದುವರೆದಿದ್ದ ಜನತಾ ಪಕ್ಷದ ‘ವಿಜಯ ಯಾತ್ರೆ’ ಹೆಗಡೆ ಅವರ ನಿಧನದಿಂದಾಗಿ ರದ್ದಾಗಿದೆ.

ಮೂರು ದಿನಗಳ ಶೋಕ

ಮಾಜಿ ಮುಖ್ಯಮಂತ್ರಿ ಹೆಗಡೆ ಅವರ ಗೌರವಾರ್ಥ ರಾಜ್ಯದ ಎಲ್ಲ ಶಾಲಾ ಕಾಲೇಜು, ಸರ್ಕಾರಿ ಕಚೇರಿ ಹಾಗೂ ನ್ಯಾಯಾಲಯಗಳಿಗೆ ರಾಜ್ಯ ಸರ್ಕಾರ ಒಂದು ದಿನದ ರಜೆ (ನ.13ರ ಮಂಗಳವಾರ) ಘೋಷಿಸಿದೆ. ಜ.14ರವರೆಗೂ ಶೋಕಾಚರಣೆ ನಡೆಸಲು ನಿರ್ಧರಿಸಿರುವ ಸರ್ಕಾರ- ಎಲ್ಲ ಮನರಂಜನಾ ಕಾರ್ಯಕ್ರಮಗಳು ಹಾಗೂ ಸಭೆ ಸಮಾರಂಭಗಳನ್ನು ರದ್ದುಪಡಿಸಿದೆ. ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವಂತೆಯೂ ಸರ್ಕಾರ ಆದೇಶ ಹೊರಡಿಸಿದೆ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ರಾಮಕೃಷ್ಣ ಹೆಗಡೆ : ಕಣ್ಮರೆಯಾದ ರಾಜಗುರು

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X