ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಗ್‌ ಬಂಧಿಸಿ-ಬಿಜೆಪಿ ; ಚುನಾವಣೆ ಸ್ಟಂಟ್‌ಗೆ ಮಣಿಯೆವು-ಖರ್ಗೆ

By Staff
|
Google Oneindia Kannada News

ಬೇಗ್‌ ಬಂಧಿಸಿ-ಬಿಜೆಪಿ ; ಚುನಾವಣೆ ಸ್ಟಂಟ್‌ಗೆ ಮಣಿಯೆವು-ಖರ್ಗೆ
ವಿಧಾನ ಸಭೆಯಲ್ಲಿ ಮಾತಿನ ಚಕಮಕಿ, ಬಿಜೆಪಿ ಸದಸ್ಯರ ಧರಣಿ

ಬೆಂಗಳೂರು : ಮಾಜಿ ಸಚಿವ ರೋಷನ್‌ಬೇಗ್‌ ಅವರನ್ನು ಬಂಧಿಸಬೇಕೆನ್ನುವ ಪ್ರತಿಪಕ್ಷಗಳ ಒತ್ತಾಯವನ್ನು ರಾಜ್ಯ ಸರ್ಕಾರ ಸ್ಪಷ್ಟ ಮಾತುಗಳಲ್ಲಿ ತಳ್ಳಿಹಾಕಿದೆ.

ಛಾಪ ಪಾಪದಲ್ಲಿ ಪಾಲು ಹೊಂದಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಚಿವ ರೋಷನ್‌ಬೇಗ್‌ ಅವರನ್ನು ಬಂಧಿಸಿ ತನಿಖೆಗೊಳಪಡಿಸಬೇಕು ಎನ್ನುವ ತಮ್ಮ ಆಗ್ರಹವನ್ನು ಬಿಜೆಪಿ ಸದಸ್ಯರು ಶುಕ್ರವಾರ ವಿಧಾನ ಸಭೆಯಲ್ಲಿ ಮರು ಮಂಡಿಸಿದರು. ಬೇಗ್‌ ಅವರ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ಸದಸ್ಯರು ಧರಣಿ ಕೂತದ್ದರಿಂದ, ಸದನದ ಇಡೀ ದಿನದ ಕಲಾಪ ಬಂಧನದ ಒತ್ತಾಯ-ನಿರಾಕರಣೆಯಲ್ಲೇ ಮುಕ್ತಾಯವಾಯಿತು.

ಸರ್ಕಾರದ ಸಚಿವರು ಹಾಗೂ ಪ್ರತಿಪಕ್ಷಗಳ ನಡುವೆ ಸುಮಾರು 45 ನಿಮಿಷಗಳ ಕಾಲ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ಬಿಸಿ ವಾತಾವರಣ ಉಂಟಾದಾಗ ಸಭಾಪತಿ ಎಂ.ವಿ.ವೆಂಕಟಪ್ಪ ಅವರು ಸದನವನ್ನು ಸ್ವಲ್ಪಕಾಲ ಮುಂದೂಡಿದರು. ತದನಂತರವೂ ಬಿಜೆಪಿ ಸದಸ್ಯರು ಬೇಗ್‌ ಬಂಧನದ ವಿಷಯಕ್ಕೆ ಪಟ್ಟು ಹಿಡಿದು ಕೂತದ್ದರಿಂದ ಕಲಾಪ ನಡೆಯಲಿಲ್ಲ .

ಬೇಗ್‌ ಬಂಧನದ ಕುರಿತ ಪ್ರತಿಪಕ್ಷಗಳ ಒತ್ತಾಯ ರಾಜಕೀಯ ಪ್ರೇರಿತವಾದದ್ದು. ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಬಿಜೆಪಿ ಪ್ರಚಾರದ ಸ್ಟಂಟ್‌ ಅನುಸರಿಸುತ್ತಿದೆ ಎಂದು ಗೃಹ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ಪ್ರತಿಪಕ್ಷಗಳ ಈ ರೀತಿಯ ಒತ್ತಡದ ತಂತ್ರಕ್ಕೆ ಸರ್ಕಾರ ಮಣಿಯುವುದಿಲ್ಲ ಎಂದೂ ಖರ್ಗೆ ಹೇಳಿದರು.

ಬಿಜೆಪಿ ಸದಸ್ಯರು ಧರಣಿಯನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಕಾರಣ ಸಭಾಪತಿ ವೆಂಕಟಪ್ಪ ಶುಕ್ರವಾರದ ಕಲಾಪವನ್ನು ಅಂತ್ಯಗೊಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X