ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲು ಮರಗಳನು ಕಡಿಸು, ಬರಿದಾದ ಜಾಗದಲ್ಲಿ ಹುಲ್ಲು ಬೆಳಸು !

By Staff
|
Google Oneindia Kannada News

ಸಾಲು ಮರಗಳನು ಕಡಿಸು, ಬರಿದಾದ ಜಾಗದಲ್ಲಿ ಹುಲ್ಲು ಬೆಳಸು !
ಬೆಂಗಳೂರು ಮಹಾ ನಗರ ಪಾಲಿಕೆಗೆ ರಸ್ತೆ ರಸ್ತೆಗಳಲ್ಲಿ ಹಸಿರು ಚಿತ್ರಗಳ ಕನಸು..

  • ದಟ್ಸ್‌ಕನ್ನಡ ಬ್ಯೂರೊ
ಬೆಂಗಳೂರು ಡೈರಿಯಿಂದ ಹೊಸೂರು ರಸ್ತೆಯಲ್ಲಿ ಬರುವಾಗ, ಸೇಂಟ್‌ಜಾನ್ಸ್‌ ಆಸ್ಪತ್ರೆಯ ಬಳಿಯ ಕಾಲುಹಾದಿಯಲ್ಲಿ ಬೆಳೆದಿರುವ ಹಸಿರು ಹುಲ್ಲು ಹಾಗೂ ಅಲಂಕಾರಿಕ ಸಸ್ಯಗಳು ತಕ್ಷಣ ಗಮನ ಸೆಳೆಯುತ್ತವೆ. ಜನರು ಓಡಾಡುವ ಈ ರಸ್ತೆಯಲ್ಲಿ ಹಸಿರು ಬಿತ್ತಿದವರಾರು ?

ಈ ಹಸಿರು ಚಿತ್ರಗಳು ಸೇಂಟ್‌ಜಾನ್ಸ್‌ ರಸ್ತೆಗಷ್ಟೇ ಸೀಮಿತವಾದ ದಿನಗಳು ಮುಗಿದವು ; ಬೆಂಗಳೂರಿನ ವಿವಿಧ ರಸ್ತೆಗಳಲ್ಲಿನ ಖಾಲಿ ಪ್ರದೇಶಗಳಲ್ಲಿ ಹಸಿರು ಬೆಳೆಸಲು ಬೆಂಗಳೂರು ಮಹಾನಗರ ಪಾಲಿಕೆ ಉದ್ದೇಶಿಸಿದೆ.

ಪರಿಸರ ಮಾಲಿನ್ಯ ನಿಯಂತ್ರಣಕ್ಕೂ ಪಾಲಿಕೆಯ ಈ ಹಸಿರು ಪ್ರೀತಿಗೂ ಯಾವ ಸಂಬಂಧವೂ ಇಲ್ಲ . ಬೋಳು ಹಾಗೂ ಧೂಳು ಚಿತ್ರಗಳ ನೋಡಿ ಬಸವಳಿದ ಕಣ್ಣುಗಳಿಗೆ ಒಂದಿಷ್ಟು ತಂಪು ನೀಡುವುದು ಪಾಲಿಕೆಯ ಉದ್ದೇಶ. ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಪಿ.ಆರ್‌.ರಮೇಶ್‌ ಖಾಲಿ ಜಾಗಗಳಲ್ಲಿ ಹಸಿರು ಬಿತ್ತನೆಯ ಯೋಜನೆಯ ಕುರಿತ ವಿವರಗಳನ್ನು ಭಾನುವಾರ (ಜ.4) ಸುದ್ದಿಗಾರರಿಗೆ ನೀಡಿದರು.

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಹಸಿರು ಬಿತ್ತನೆಯ ಯೋಜನೆಯನ್ನು ಪಾಲಿಕೆ ಕೈಗೆತ್ತಿಕೊಂಡಿದೆ. ಕಡಿಮೆ ನೀರು ಹಾಗೂ ಕನಿಷ್ಠ ನಿರ್ವಹಣೆಯಾಂದಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಚಿಂತನೆ ಪಾಲಿಕೆಯದು.

ಆಸ್ಟ್ರೇಲಿಯಾದ ವಿಶೇಷ ತಳಿಗಳಾದ ಖಠಿಢ್ಝಟ ಖಚ್ಞಠಿಜಛಿಠ ಏಚಞಟಠಿಚ ಮತ್ತು ಖಠಿಢ್ಝಟ ಖಚ್ಞಠಿಜಛಿಠ ಖ್ಚಚಚ್ಟಿಚ ಮಾದರಿಯ ತಳಿಗಳ ಬೆಳವಣಿಗೆ ನಿರ್ವಹಣೆಗೆ ಹೆಚ್ಚು ನೀರೇನೂ ಬೇಕಾಗಿಲ್ಲ . ವರ್ಷದ ಎಲ್ಲ ಋತುಗಳಲ್ಲೂ ಬೆಳೆಯುವ ಈ ತಳಿಗಳನ್ನು ಜಿಕೆವಿಕೆಯಲ್ಲಿ ಪ್ರಾಯೋಗಿಕವಾಗಿ ಬೆಳಸಲಾಗಿದ್ದು , ಪಾಲಿಕೆಯ ಯೋಜನೆಯ ಪ್ರಕಾರ ನಗರದ ಖಾಲಿ ಜಾಗದಲ್ಲೆಲ್ಲ ಈ ತಳಿಗಳು ಹಬ್ಬುವ ದಿನ ದೂರವಿಲ್ಲ ಎನ್ನುತ್ತಾರೆ ರಮೇಶ್‌.

ಪಾಲಿಕೆಯ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ - ನಗರದ ಖಾಲಿ ಜಾಗಗಳು, ಟ್ರಾಫಿಕ್‌ ಜಂಕ್ಷನ್‌ಗಳು, ವೃತ್ತಗಳು, ಇನ್ನಿತರ ಕಿಷ್ಕಿಂದೆಗಳಲ್ಲಿ ಹಸಿರೋ ಹಸಿರು. ಇದರಿಂದಾಗಿ ಉದ್ಯಾನ ನಗರಿ ಎನ್ನುವ ಮರತುಹೋದ ಮಾತು ಮತ್ತೆ ಚಾಲ್ತೀಗೆ ಬಂದೀತಾ ? ಹಾಗೆಂದು ನಿರೀಕ್ಷಿಸುವಂತಿಲ್ಲ . ಏಕೆಂದರೆ, ಫ್ಲೈ ಓವರ್‌ಗಳ ನೆಪದಲ್ಲಿ , ರಸ್ತೆ ಅಗಲೀಕರಣದ ಕಾರಣ ಬೆಂಗಳೂರಿನ ಸಾಲು ಮರಗಳು ಕೊಡಲಿಗೆ ಬಲಿಯಾಗಿವೆ. ಈಗ ನಡೆಯುತ್ತಿರುವುದು ಮರ ಬೆಳೆಸುವ ಕೆಲಸವಲ್ಲ ; ಹುಲ್ಲು ಬೆಳೆಸುವ ಕೆಲಸ.

ಬೆಳೆದ ಹುಲ್ಲನ್ನು ಟೆಂಡರ್‌ ಮೂಲಕ ಗೋಪಾಲಕರಿಗೆ ಮಾರಲಾಗುತ್ತಾ ? ತಿಳಿದುಬಂದಿಲ್ಲ .

Post your views

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X