ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಗಿಯನ್ನು ಮುಚ್ಚಿದ ಕೋಣೇಲಿ ಭೆಟ್ಟಿಯಾದ ಸಚಿವ ಯಾರು ?

By Staff
|
Google Oneindia Kannada News

ತೆಲಗಿಯನ್ನು ಮುಚ್ಚಿದ ಕೋಣೇಲಿ ಭೆಟ್ಟಿಯಾದ ಸಚಿವ ಯಾರು ?
ಮುಖ್ಯಮಂತ್ರಿ ಕೃಷ್ಣ ಬಯಸಿದರೆ ಸಾಕ್ಷ್ಯ ಒದಗಿಸಲು ಸಿದ್ಧ

ಗುಲ್ಬರ್ಗಾ : 2003ನೇ ಇಸವಿಯ ನವಂಬರ್‌ ತಿಂಗಳ ಮೂರನೇ ವಾರದಲ್ಲಿ ರಾಜ್ಯ ಸಚಿವ ಸಂಪುಟದ ಸಚಿವರೊಬ್ಬರು ನಕಲಿ ಸ್ಟಾಂಪ್‌ ಪೇಪರ್‌ ಹಗರಣದ ಕಿಂಗ್‌ಪಿನ್‌ ಕರೀಂ ಲಾಲಾ ತೆಲಗಿಯನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಬಿಜೆಪಿ ನಾಯಕರು ಆಪಾದಿಸಿದ್ದಾರೆ.

ಹಿರಿಯ ಸಚಿವರು ಹಾಗೂ ಪೊಲೀಸ್‌ ಅಧಿಕಾರಿಯಾಬ್ಬರು ಕರೀಂ ಲಾಲ ತೆಲಗಿಯನ್ನು ನವಂಬರ್‌ ತಿಂಗಳಲ್ಲಿ ಭೇಟಿ ಮಾಡಿದ್ದು , ಮುಚ್ಚಿದ ಕೋಣೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿಯ ಜಗದೀಶ್‌ ಶೆಟ್ಟರ್‌ ಹಾಗೂ ಡಿ.ಎಚ್‌.ಶಂಕರಮೂರ್ತಿ ಆಪಾದಿಸಿದರು. ಗುರುವಾರ (ಜ.1) ಜಂಟಿ ಸುದ್ದಿಗೋಷ್ಠಿಯಲ್ಲಿ ಅವರಿಬ್ಬರು ಮಾತನಾಡುತ್ತಿದ್ದರು.

ತೆಲಗಿಯನ್ನು ಸಚಿವರು ಭೇಟಿ ಮಾಡಿರುವ ಕುರಿತು ನಮ್ಮಲ್ಲಿ ದಾಖಲೆಗಳಿವೆ. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಬಯಸಿದರೆ ಅವರಿಗೆ ದಾಖಲೆ ನೀಡಲು ಸಿದ್ಧರಿದ್ದೇವೆ ಎಂದು ಶೆಟ್ಟರ್‌-ಮೂರ್ತಿ ಹೇಳಿದರು.

ತೆಲಗಿಯಾಂದಿಗೆ ಸಂಪರ್ಕ ಹೊಂದಿದ್ದು , ಪ್ರಸ್ತುತ ತನಿಖಾಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಪೊಲೀಸ್‌ ಅಧಿಕಾರಿಯಾಬ್ಬರು ತಮ್ಮ ಮೊಬೈಲ್‌ ಫೋನನ್ನು ನಾಶ ಮಾಡಿದ್ದಾರೆ. ಈ ಫೋನನ್ನು ಎರಡು ವರ್ಷಗಳಿಂದ ಬಳಸಲಾಗುತ್ತಿತ್ತು . ಮೊಬೈಲ್‌ ಫೋನ್‌ ನಾಶದೊಂದಿಗೆ ಮಹತ್ವದ ದಾಖಲೆಗಳು ನಾಶವಾಗಿವೆ ಎಂದರು.

ಛಾಪಾ ಪಾಪ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಡಿಸೆಂಬರ್‌ 26, 2003ರಂದೇ ನಿರ್ಣಯ ಕೈಗೊಂಡಿದ್ದರೂ, ಈವರೆಗೂ ತನಿಖೆಯನ್ನು ವಹಿಸಿಕೊಳ್ಳುವಂತೆ ಸಿಬಿಐಗೆ ಪತ್ರ ಬರೆಯದಿರುವ ರಾಜ್ಯ ಸರ್ಕಾರದ ನಿಲುವನ್ನು ಶೆಟ್ಟರ್‌-ಶಂಕರಮೂರ್ತಿ ಟೀಕಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X