ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಸ್ಕಾಂನ ಸಕಲ ವಿದ್ಯುತ್‌ ಬಿಲ್‌ ಲೆಕ್ಕಾಚಾರ ಕಂಪ್ಯೂಟರೀಕರಣ

By Staff
|
Google Oneindia Kannada News

ಬೆಸ್ಕಾಂನ ಸಕಲ ವಿದ್ಯುತ್‌ ಬಿಲ್‌ ಲೆಕ್ಕಾಚಾರ ಕಂಪ್ಯೂಟರೀಕರಣ
ಗ್ರಾಹಕರಿಗೆ ಬೆಸ್ಕಾಂನ ಹೊಸ ವರ್ಷದ ಕೊಡುಗೆ

ಬೆಂಗಳೂರು : ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಲೀಟರ್‌ಗೆ 1 ರುಪಾಯಿ ಹೆಚ್ಚಿಸುವ ಮೂಲಕ ತೈಲ ಕಂಪನಿಗಳು ನಾಗರಿಕರಿಗೆ ಹೊಸ ವರ್ಷದ ಕಹಿ ಕೊಡುಗೆ ನೀಡಿದ್ದರೆ, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ತನ್ನ ಗ್ರಾಹಕರಿಗೆ ಹೊಸ ವರ್ಷದ ಸಿಹಿ ಕೊಡುಗೆಯಾಂದನ್ನು ನೀಡಿದೆ.

ಇನ್ನು ಮುಂದೆ ವಿದ್ಯುತ್‌ ಬಿಲ್‌ ಪಾವತಿಸುವುದು ಸುಲಭ ! ವಿದ್ಯುತ್‌ ಬಿಲ್‌ ಕುರಿತು ಯಾವುದಾದರೂ ತಕರಾರು ಸಂದೇಹಗಳಿದ್ದು , ಕೆಇಬಿ ಕಚೇರಿಗೆ ಎಡತಾಕಿದಾಗ ಕಡತಗಳಿಂದ ಕಡತಕ್ಕೆ ಅಲೆಯಬೇಕಾದ ಪ್ರಮೇಯವೂ ಇಲ್ಲ . ಈಗ ಬೆಸ್ಕಾಂನ ಪ್ರತಿಯಾಂದು ಲೆಕ್ಕಾಚಾರವೂ ಕಂಪ್ಯೂಟರೀಕೃತ.

ತನ್ನ ಸಮಸ್ತ ವ್ಯವಹಾರಗಳನ್ನು ಕಂಪ್ಯೂಟರೀಕರಣಗೊಳಿಸುವ ಮೂಲಕ ಹೊಸ ವರ್ಷದ ಮೊದಲ ದಿನದಿಂದ ಗ್ರಾಹಕರ ಸೇವೆಯನ್ನು ಉತ್ತಮಗೊಳಿಸುವುದು ಬೆಸ್ಕಾಂ ಉದ್ದೇಶ. ಎಲ್ಲ ವ್ಯವಹಾರಗಳು ಜನವರಿ 1 ರಿಂದಲೇ ಗಣಕೀಕೃತಗೊಂಡಿದ್ದು , ಲೆಡ್ಜರ್‌ ಪುಸ್ತಕಗಳಿಗಿನ್ನು ವಿಶ್ರಾಂತಿ ಎಂದು ಬೆಸ್ಕಾಂನ ಕಾರ್ಯ ನಿರ್ವಾಹಕ ನಿರ್ದೇಶಕ ಭರತ್‌ಲಾಲ್‌ ಮೀನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆನ್‌ಲೈನ್‌ ಪಾವತಿ ಪದ್ಧತಿಯನ್ನೂ ಅನುಷ್ಠಾನಗೊಳಿಸುತ್ತಿದ್ದು , ಎಟಿಎಂ, ಬ್ಯಾಂಕ್‌, ಅಥವಾ ಯಾವುದಾದರೂ ಬೆಸ್ಕಾಂ ಕೌಂಟರ್‌ಗಳ ಮೂಲಕವೂ ವಿದ್ಯುತ್‌ ಬಿಲ್‌ ಪಾವತಿಸುವುದು ಸಾಧ್ಯವಾಗಲಿದೆ ಎಂದು ಭರತ್‌ಲಾಲ್‌ ಹೇಳಿದ್ದಾರೆ.

ಅಂದಹಾಗೆ, ಬುಧವಾರ ಮಧ್ಯರಾತ್ರಿಯಿಂದ (ಹೊಸವರ್ಷದ ಉದಯ) ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ- ಲೀಟರ್‌ಗೆ 39 ರುಪಾಯಿ 68 ಪೈಸೆ. ಡೀಸೆಲ್‌- ಲೀ.ಗೆ 25.22 ರುಪಾಯಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X