‘ಕಲಾಕೃತಿಗಳು ಕಂಪ್ಯೂಟರ್‌ಗೆ, ಶಾಸನಗಳ ಸಾಲುಗಳು ಕನ್ನಡಕ್ಕೆ’
‘ಕಲಾಕೃತಿಗಳು ಕಂಪ್ಯೂಟರ್‌ಗೆ, ಶಾಸನಗಳ ಸಾಲುಗಳು ಕನ್ನಡಕ್ಕೆ’
ಅಪರೂಪದ ಕಲಾಕೃತಿಗಳನ್ನು ಮನೆಮನೆ ತಲುಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆ
ಚಿತ್ರಕಲಾ ಪರಿಷತ್‌ನಲ್ಲಿ ಶುಕ್ರವಾರ (ನ.11) ಕರ್ನಾಟಕ ನವೋದಯ ಕಾಲದ ಕಲಾವಿದರ ಪ್ರಾತಿನಿಧಿಕ ಕಲಾಕೃತಿಗಳ ಪ್ರದರ್ಶನದ ಉದ್ಘಾಟನಾ ಸಭೆಯಲ್ಲಿ ಸಚಿವೆ ರಾಣಿ ಸತೀಶ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ನವೋದಯ ಕಾಲದ ಕಲಾಕೃತಿಗಳನ್ನು ಸಂಗ್ರಹಿಸಿ ಮನೆಮನೆಗೆ ತಲುಪಿಸುವುದು ಈ ಯೋಜನೆಯ ಉದ್ದೇಶ. ಇದರಿಂದ ಹೊಸ ಪೀಳಿಗೆಯ ಕಲಾವಿದರು, ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ಶಿಲಾಶಾಸನದ ತಿರುಳು ಕನ್ನಡಕ್ಕೆ : ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವದ ಸಾವಿರಾರು ಶಿಲಾಶಾಸನಗಳು ನಮ್ಮಲ್ಲಿ ಇವೆ. ಅವುಗಳಲ್ಲಿ ಏನಿದೆ ಎಂಬುದು ಜನ ಸಾಮಾನ್ಯರಿಗೆ ತಲುಪುತ್ತಿಲ್ಲ. ಹೀಗಾಗಿ ಸಂಸ್ಕೃತ ಮತ್ತು ಹಳೆಗನ್ನಡದಲ್ಲಿರುವ ಶಿಲಾ ಶಾಸನಗಳ ಸಾಲುಗಳನ್ನು ಕನ್ನಡಕ್ಕೆ ಭಾಷಾಂತರಿಸಿ, ಅವುಗಳಿರುವ ಜಾಗದ ಪಕ್ಕ ಫಲಕಗಳ ರೂಪದಲ್ಲಿ ಅಳವಡಿಸಲು ಉದ್ದೇಶಿಸಿದ್ದೇವೆ. ಈ ಯೋಜನೆಗೆ ಹಣಕಾಸಿನ ನೆರವು ಕೊಡುವುದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವ ಜಗಮೋಹನ್ ಭರವಸೆ ಕೊಟ್ಟಿದ್ದಾರೆ ಎಂದು ರಾಣಿ ಸತೀಶ್ ಹೇಳಿದರು.
ಹಂಪಿ ವಿಶ್ವ ಪರಂಪರೆ ಕೇಂದ್ರವಾಗಿ ಎಂದೆಂದಿಗೂ ಉಳಿಯಬೇಕು ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ತಮ್ಮ ಬಯಕೆ ತೋಡಿಕೊಂಡರು. ವಿಧಾನ ಪರಿಷತ್ ಸಭಾಪತಿ ಬಿ.ಎಲ್.ಶಂಕರ್, ಸಾಹಿತಿ ಹಾಗೂ ವಿಮರ್ಶಕ ಪ್ರೊ.ಎಂ.ಎಚ್.ಕೃಷ್ಣಯ್ಯ, ಕರ್ನಾಟಕ ಚಿತ್ರಕಲಾ ಪರಿಷತ್ ಕಾರ್ಯದರ್ಶಿ ಡಿ.ಕೆ.ಚೌಟ ಸಮಾರಂಭದಲ್ಲಿ ಇದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications