ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಮಾನೋತ್ಸವದ ಸ್ಮರಣೆ : ಕುವೆಂಪು ಹೆಸರಲ್ಲಿ ರಾಷ್ಟ್ರೀಯ ಪ್ರಶಸ್ತಿ

By Staff
|
Google Oneindia Kannada News

ಶತಮಾನೋತ್ಸವದ ಸ್ಮರಣೆ : ಕುವೆಂಪು ಹೆಸರಲ್ಲಿ ರಾಷ್ಟ್ರೀಯ ಪ್ರಶಸ್ತಿ
ಕುವೆಂಪು ಶತಮಾನೋತ್ಸವ ಆಚರಣೆಯ ರೂಪುರೇಷೆ ಚರ್ಚಿಸಿ ಬೆಂಗಳೂರಲ್ಲಿ ಸಭೆ

ಬೆಂಗಳೂರು : ಈ ವರ್ಷ ಡಿಸೆಂಬರ್‌ 29ರಿಂದ ಒಂದು ವರ್ಷ ಕಾಲ ರಾಷ್ಟ್ರಕವಿ ಕುವೆಂಪು ಅವರ ಜನ್ಮ ಶತಮಾನೋತ್ಸವ ಆಚರಿಸಲು ನಿರ್ಧರಿಸಿರುವ ಸರ್ಕಾರ, ಕುವೆಂಪು ಹೆಸರಲ್ಲಿ 5 ಲಕ್ಷ ರು.ಮೌಲ್ಯದ ರಾಷ್ಟ್ರೀಯ ಪ್ರಶಸ್ತಿ ನೀಡಲು ತೀರ್ಮಾನಿಸಿದೆ.

ಕುವೆಂಪು ಜನ್ಮ ಶತಮಾನೋತ್ಸವ ಆಚರಣೆಯ ರೂಪುರೇಷೆಯ ಬಗ್ಗೆ ತೀರ್ಮಾನಿಸಲು ಬುಧವಾರ (ನ. 12) ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಾಹಿತಿಗಳಾದ ನಿಸಾರ್‌ ಅಹಮದ್‌, ಗಿರೀಶ್‌ ಕಾರ್ನಾಡ್‌, ಶಿವರುದ್ರಪ್ಪ, ದೇ.ಜ.ಗೌ ಮೊದಲಾದವರು ಭಾಗವಹಿಸಿದ್ದರು.

ಕುವೆಂಪು ಶತಮಾನೋತ್ಸವ ಆಚರಣೆಯಲ್ಲಿ ದೇಶ ಹಾಗೂ ರಾಜ್ಯದ ಪ್ರಮುಖ ನಗರ, ಪಟ್ಟಣ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ವಿಚಾರಗೋಷ್ಠಿ, ಸಂಕಿರಣ, ಕವಿಗೋಷ್ಠಿ ಮೊದಲಾದ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಕುವೆಂಪು ವಿರಚಿತ ಶೂದ್ರ ತಪಸ್ವಿ, ಜಲಗಾರ, ಬೆರಳ್‌ಗೆ ಕೊರಳ್‌ ನಾಟಕಗಳನ್ನು ಪ್ರದರ್ಶಿಸುವುದು, ರಾಮಾಯಣ ದರ್ಶನಂ ಮಹಾಕಾವ್ಯದ ಮರುಮುದ್ರಣ ಹಾಗೂ ಹಂಪಿ ವಿಶ್ವವಿದ್ಯಾಲಯ ಸಿದ್ಧಪಡಿಸುತ್ತಿರುವ ಕುವೆಂಪು ಅವರ ಗದ್ಯ ಸಂಪುಟವನ್ನು ಹೆಚ್ಚಿನ ಆರ್ಥಿಕ ಸಹಾಯದೊಂದಿಗೆ ಶತಮಾನೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಕುಪ್ಪಳ್ಳಿ ಮತ್ತು ಹಿರೇಕೊಡಗಿ ಅರಣ್ಯ ಪ್ರದೇಶವನ್ನು ಜೀವ ವೈವಿಧ್ಯ ಸುರಕ್ಷಿತ ಅರಣ್ಯವನ್ನಾಗಿಸಲು ಈಗಾಗಲೇ ಉದ್ದೇಶಿಸಲಾಗಿದ್ದು, ಅದನ್ನು ಬೇಗ ಕಾರ್ಯಾನುಷ್ಠಾನಕ್ಕೆ ತರುವ ಕಳಕಳಿ ಸಭೆಯಲ್ಲಿ ವ್ಯಕ್ತವಾಯಿತು. ಕುವೆಂಪು ಹೆಸರಿನಲ್ಲಿ ಕೊಡಲು ಉದ್ದೇಶಿಸಲಾಗಿರುವ ರಾಷ್ಟ್ರೀಯ ಪ್ರಶಸ್ತಿಯನ್ನು ಮಾನ್ಯ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರುವ ಪ್ರಕ್ರಿಯೆಗೂ ಸಭೆಯಲ್ಲಿ ಚಾಲನೆ ದೊರೆಯಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X