ಧರ್ಮಸ್ಥಳ ಮಂಜುನಾಥ ಯಕ್ಷಗಾನಕೇಂದ್ರಕ್ಕೆ ವಿಶ್ವೇಶತೀರ್ಥ ಪ್ರಶಸ್ತಿ
ಧರ್ಮಸ್ಥಳ ಮಂಜುನಾಥ ಯಕ್ಷಗಾನಕೇಂದ್ರಕ್ಕೆ ವಿಶ್ವೇಶತೀರ್ಥ ಪ್ರಶಸ್ತಿ
ಯಕ್ಷಗಾನ ಕಲೆಯಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಇನ್ನಷ್ಟು ಪುರಸ್ಕಾರ
ಯಕ್ಷಗಾನ ಕಲಾ ರಂಗ ಈ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಮಾರ್ಗೋಳಿ ಗೋವಿಂದ ಶೇರೆಗಾರ್ ಅವರಿಗೆ ಡಾ. ಬಿ.ಬಿ.ಶೆಟ್ಟಿ ಪ್ರಶಸ್ತಿ, ಮೊಳಹಳ್ಳಿ ಹರಿಯ ನಾಯ್ಕ್ ಅವರಿಗೆ ಪ್ರೊ. ಬಿ.ವಿ. ಆಚಾರ್ಯ ಪ್ರಶಸ್ತಿ, ಹೊಸ್ತೋಟ ಮಂಜುನಾಥ ಭಾಗವತ್ ಅವರಿಗೆ ಭಾಗವತ ನಾರಣಪ್ಪ ಉಪ್ಪೂರು ಪ್ರಶಸ್ತಿ ಹಾಗೂ ಕುಂಬ್ಳೆ ಶೇಷಪ್ಪಯ್ಯನವರಿಗೆ ಶ್ರೀಮತಿ ಮತ್ತು ಶ್ರೀ ಎಚ್.ಆರ್. ಕೆದ್ಲಾಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ನವೆಂಬರ್ 8ನೇ ತಾರೀಕು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಜೆ 5.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು. ಪೇಜಾವರ ವಿಶ್ವೇಶ ತೀರ್ಥರ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಲಿದ್ದು, ಡಿ. ಹರ್ಷೇಂದ್ರ ಹೆಗ್ಗಡೆ, ಕುಂಬ್ಳೆ ಸುಂದರರಾವ್, ಪಂಜ ಭಾಸ್ಕರ್ ಭಟ್ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಉಳಿದ ವೈಯಕ್ತಿಕ ಪ್ರಶಸ್ತಿಗಳನ್ನು ನ. 16ರಂದು ಸಂಜೆ ಪೂರ್ಣಪ್ರಜ್ಞ ಕಾಲೇಜು ಸಭಾಂಗಣದಲ್ಲಿ ಪ್ರದಾನ ಮಾಡಲಾಗುತ್ತದೆ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications