ಮುಂಬಯಿ ಮಾರುಕಟ್ಟೆ ಚಪ್ಪಲಿ ಮೇಲೆ ಮಹಾತ್ಮ ಗಾಂಧಿ ಚಿತ್ರ !
ಮುಂಬಯಿ ಮಾರುಕಟ್ಟೆ ಚಪ್ಪಲಿ ಮೇಲೆ ಮಹಾತ್ಮ ಗಾಂಧಿ ಚಿತ್ರ !
ದೇಶಭಕ್ತಿ ಮೆಟ್ಟಿನ ಮಟ್ಟಕ್ಕೆ ಮುಟ್ಟಿತೇ, ಶಿವ ಶಿವಾ
ದೆಹಲಿ ಮತ್ತು ಆಗ್ರಾದಲ್ಲಿ ಚಪ್ಪಲಿ ರಬ್ಬರುಗಳ ಮೇಲೆ ಗಾಂಧೀ ಮಹಾತ್ಮ ಇರುವ ನೋಟಿನ ಚಿತ್ರವನ್ನು ಅಚ್ಚುಹಾಕಲಾಗುತ್ತಿದೆ. ಹಾಗೆ ಅಚ್ಚು ಹಾಕಿಸಿಕೊಂಡ ರಬ್ಬರುಗಳಿಗೆ ಕುರ್ಲಾದಲ್ಲಿ ಪಟ್ಟಿ ಕಟ್ಟಲಾಗುತ್ತದೆ. ಸಿದ್ಧವಾದ ಚಪ್ಪಲಿ ಮುಂಬಯಿ ಮಾರುಕಟ್ಟೆಗೆ ಬರುತ್ತದೆ. ಈ ಸಲದ ದೀಪಾವಳಿ ವಿಶೇಷ ಏನು ಅಂತ ಮುಂಬಯಿಗರನ್ನು ಪ್ರಶ್ನಿಸಿದಲ್ಲಿ, ಸಿಗುವ ಉತ್ತರಗಳ ಪೈಕಿ ಗಾಂಧಿ ಮಹಾತ್ಮನ ಚಪ್ಪಲಿ ಕೂಡ ಒಂದಾಗಿರುವುದು ಸಾಂಸ್ಕೃತಿಕ ದುರಂತ.
ಕೊಳ್ಳುವ ಮಹಾತ್ಮರಾರು ಗೊತ್ತೆ?
ಮೊದಲೇ ಗಾಂಧಿ ಪದವನ್ನು ಬ್ರಾಂದಿ ಪ್ರಾಸಕ್ಕೆ ತಳಕು ಹಾಕುವ ಮಂಗ ಬುದ್ಧಿಯ ಕೆಲವು ಕಾಲೇಜು ಪಡ್ಡೆಗಳು ಗಾಂಧಿ ಮಹಾತ್ಮನ ಚಿತ್ರವಿರುವ ಚಪ್ಪಲಿಗಳ ಹಿಂದೆ ಬಿದ್ದಿದ್ದಾರೆ. ಕೆಲವರು ‘ನೂರು ರುಪಾಯಿ ಲಕ್ಷ್ಮಿ ನನ್ನ ಕಾಲ ಕೆಳಗೆ ಬಂದು ಬಿದ್ದಿದ್ದಾಳೆ’ ಅಂತ ಹೇಳಿಕೊಂಡು ಓಡಾಡುತ್ತಿದ್ದರೆ, ಇನ್ನು ಕೆಲವರು ‘ಬಾಪೂ ಮೇರೆ ಪೈದಲ್ ಪಡಾ ಹೈ’ ಅಂತ ಕಟಕಿಯಾಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಇಷ್ಟೆಲ್ಲ ಸಂಚಲನೆ ಹುಟ್ಟಿಸಿರುವ ಈ ವಿಲಕ್ಷಣ ಚಪ್ಪಲಿಗಳ ಬಗ್ಗೆ ಶಿವಸೇನೆಯವರೂ ಸೇರಿದಂತೆ ಇನ್ನೂ ಯಾರೂ ಚಕಾರವೆತ್ತದಿರುವುದು ಅಚ್ಚರಿಯ ಮಾತೇ ಸರಿ. ಇಂಥಾ ಚಪ್ಪಲಿಗಳನ್ನು ತರಿಸಿ ಮಾರುತ್ತಿರುವವರಿಗೆ ಯಾವುದರಲ್ಲಿ ಹೊಡೆಯಬೇಕು ಎಂದು ಗಾಂಧಿ ಮಹಾತ್ಮ ಹುಟ್ಟಿದ ದೇಶದ ಜನರಾದ ನೀವೇ ಹೇಳಿ.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications