ಮುಂದಿನ ವರ್ಷ ಭಾರತೀಯ ವಿದ್ಯಾಭವನದಿಂದ ಕಲಾಶಾಲೆ

ಮುಂದಿನ ವರ್ಷ ಭಾರತೀಯ ವಿದ್ಯಾಭವನದಿಂದ ಕಲಾಶಾಲೆ
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಾರಾಂತ್ಯದಲ್ಲಿ ಕಲಾ ಪಾಠ

ಬೆಂಗಳೂರು: ಭಾರತೀಯ ವಿದ್ಯಾಭವನವು ‘ಭವನ್‌ ಬೆಂಗಳೂರು ಪ್ರೆಸ್‌ ಸ್ಕೂಲ್‌’ ಎಂಬ ಹೊಸ ಶಿಕ್ಷಣ ಸಂಸ್ಥೆ ಹಾಗೂ ‘ಕಲಾ ಭಾರತಿ’ ಎಂಬ ಲಲಿತಾ ಕಲಾ ಶಾಲೆಯಾಂದನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲಿದೆ.

ವಿದ್ಯಾಭವನದ ನಿರ್ವಹಣಾ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿ ಈ ವಿಷಯವನ್ನು ತಿಳಿಸಿದ್ದಾರೆ. ಕಲಾಭಾರತಿ -ಲಲಿತ ಕಲಾ ಶಾಲೆಯನ್ನು ದಕ್ಷಿಣ ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು. ‘ಕಲಾ ಭಾರತಿ’ ವಾರಾಂತ್ಯದ ಶಾಲೆಯ ಮಾದರಿಯಲ್ಲಿ ರೂಪುಗೊಳ್ಳಲಿದೆ. ಅಲ್ಲಿ ವಿದ್ಯಾರ್ಥಿಗಳು ನೃತ್ಯ, ಸಂಗೀತ ಮುಂತಾದ ಭಾರತೀಯ ಕಲೆಗಳನ್ನು ಕಲಿಯಬಹುದು.

ಭಾರತೀಯ ವಿದ್ಯಾಭವನವು ದೇಶದಲ್ಲಿ 167 ಘಟಕಗಳನ್ನು ಹಾಗೂ ವಿದೇಶದಲ್ಲಿ 10 ಘಟಕಗಳನ್ನು ಹೊಂದಿದೆ ಎಂದು ಕಳೆದ ಮೂವತ್ತು ವರ್ಷಗಳಿಂದ ಭಾರತೀಯ ವಿದ್ಯಾಭವನದ ಜವಾಬ್ದಾರಿ ಹೊತ್ತಿರುವ ಮತ್ತೂರು ಕೃಷ್ಣ ಮೂರ್ತಿ ಹೇಳುತ್ತಾರೆ. ಪ್ರಸ್ತುತ ವಿದ್ಯಾಭವನವು ಕಲೆ ಮತ್ತು ಸಂಸ್ಕೃತಿಯ ಶಿಕ್ಷಣವನ್ನು ಯುವಜನರಿಗೆ ನೀಡುವ ಉದ್ದೇಶದಿಂದ ಕಲಾಭಾರತಿಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮತ್ತೂರು ಕೃಷ್ಣ ಮೂರ್ತಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+