ಇರ್ಪು ದೇವಸ್ಥಾನಕ್ಕೆ ಕಾಯಕಲ್ಪ -ಸಚಿವೆ ಸುಮಾವಸಂತ್ ಭರವಸೆ
ಇರ್ಪು ದೇವಸ್ಥಾನಕ್ಕೆ ಕಾಯಕಲ್ಪ -ಸಚಿವೆ ಸುಮಾವಸಂತ್ ಭರವಸೆ
ಚಾರಿತ್ರಿಕ ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ
ಅವರು ಗೋಣಿ ಕೊಪ್ಪಲಿನ ಕುರ್ಚಿ ಎಂಬಲ್ಲಿ ಅಂಗನವಾಡಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಇರ್ಪು ದೇವಸ್ಥಾನವನ್ನು ಜೀರ್ಣೋದ್ಧಾರಕ್ಕೆ ನಿಧಿ ಬಿಡುಗಡೆ ಮಾಡುವ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳಲು ಸದ್ಯದಲ್ಲೇ ಸರಕಾರ ಉನ್ನತ ಮಟ್ಟದ ಸಭೆ ಕರೆಯಲಿದೆ ಎಂದು ಸಚಿವೆ ಭರವಸೆ ನೀಡಿದರು.
ಇರ್ಪು ಒಂದು ಚಾರಿತ್ರಿಕ ಸ್ಥಳವಾಗಿದ್ದು ಇಲ್ಲಿನ ದೇವಸ್ಥಾನದಲ್ಲಿ ಮುಖ್ಯವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚುತ್ತದೆ. ಅದ್ದರಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಚಿವೆ ಸುಮಾ ವಸಂತ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications